)
ಕರುನಾಡ ಚಕ್ರವರ್ತಿ ನಟ ಡಾ. ಶಿವರಾಜ್ ಕುಮಾರ್ ಅವರ ಕಂಚಿನ ಕಂಠ ಸಿರಿಯಲ್ಲಿ ಅಯ್ಯಪ್ಪ ಸ್ವಾಮಿಯ ಭಕ್ತಿ ಗೀತೆಯೊಂದು ಬಿಡುಗಡೆಯಾಗಿದೆ.
ಸುವರ್ಣ ಕರ್ನಾಟಕ ಧರ್ಮಶಾಸ್ತ್ರ ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿಯ ಗುರುಸ್ವಾಮಿಗಳಾದ ನವೀನ್ ಶಕ್ತಿರವರು ಮತ್ತು ಮಂಡಳಿಯ ಅಯ್ಯಪ್ಪ ಭಕ್ತಾದಿಗಳ ಭಕ್ತಿ ಪೂರ್ವಕ ಕೋರಿಕೆಯ ಮೇರೆಗೆ, ಶಿವಣ್ಣನವರು ಈ ಭಕ್ತಿಗೀತೆಯನ್ನು ಹಾಡಿದ್ದಾರೆ.
ಲೋಕಿ ತವಸ್ಯ ಸಂಗೀತ ಸಂಯೋಜಿಸಿರುವ "ತತ್ವಮಸಿಯೇ ಅಯ್ಯಪ್ಪ ತತ್ವಮತಸಿಯೇ" ಎಂದು ಪ್ರಾರಂಭವಾಗುವ ಈ ಹಾಡಿನಲ್ಲಿ, ಆತ್ಮ–ಪರಾಮಾತ್ಮದ ಏಕತ್ವದ ಸಂದೇಶ ಸಾರುವ ಮಾನವನ ಒಳಗೆ ದೈವಿಕ ತತ್ವವಿದೆ ಎಂದು ಹೇಳುವ ವಾಕ್ಯವಾದ ತತ್ವಮಸಿಗೆ ತತ್ವಗಳ ಮೂಲಕ ಸಾಹಿತ್ಯ ಒದಗಿಸಿದ್ದಾರೆ ವೀರರವರು.