ಮಾಂಸ ತಿಂದು ದೇಗುಲಕ್ಕೆ ಹೋಗ್ತೀನಿ ಎಂದ ಸಿಎಂ ಮಾತು ನನಗೆ ತುಂಬಾ ಇಷ್ಟ ಆಯ್ತು..! ಅದ್ರಲ್ಲಿ ತಪ್ಪಿಲ್ಲ

ತಮ್ಮ ನೇರ ನುಡಿ ಮೂಲಕ ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ನಟ ಕಿಶೋರ್‌ ಸದ್ಯ ನೀಡಿರುವ ಹೇಳಿಕೆ ವೈರಲ್‌ ಆಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಂಸ ತಿಂದು ದೇಗುಲಕ್ಕೆ ಹೋಗುವ ವಿಚಾರವಾಗಿ ನಟ ಮೆಚ್ಚುಗೆ ಸೂಚಿಸಿದ್ದಾರೆ.. 

Written by - Krishna N K | Last Updated : Mar 8, 2025, 10:25 PM IST
    • ನಟ ಕಿಶೋರ್‌ ಸದ್ಯ ನೀಡಿರುವ ಹೇಳಿಕೆ ವೈರಲ್‌ ಆಗುತ್ತಿದೆ.
    • ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಂಸ ತಿಂದು ದೇಗುಲಕ್ಕೆ ಹೋಗುವ ವಿಚಾರ
    • ಸಿಎಂ ಅವರ ಮಾತುಗಳು ನನಗೆ ಬಹಳ ಇಷ್ಟವಾಯ್ತು ಅಂತ ನಟ ತಿಳಿಸಿದ್ದಾರೆ..
ಮಾಂಸ ತಿಂದು ದೇಗುಲಕ್ಕೆ ಹೋಗ್ತೀನಿ ಎಂದ ಸಿಎಂ ಮಾತು ನನಗೆ ತುಂಬಾ ಇಷ್ಟ ಆಯ್ತು..! ಅದ್ರಲ್ಲಿ ತಪ್ಪಿಲ್ಲ

ಬೆಂಗಳೂರು : ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ನಟ ಕಿಶೋರ್ ಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತ ಮಾತುಗಳು ವೈರಲ್‌ ಆಗುತ್ತಿವೆ. ಮಾಂಸ ತಿಂದು ದೇಗುಲಕ್ಕೆ ಹೋಗ್ತೀನಿ ಎಂದಿರುವ ಸಿಎಂ ಅವರ ಮಾತುಗಳು ನನಗೆ ಬಹಳ ಇಷ್ಟವಾಯ್ತು ಅಂತ ನಟ ತಿಳಿಸಿದ್ದಾರೆ..

Add Zee News as a Preferred Source

ಹೌದು.. ಮಾರ್ಚ್ 1 ರಿಂದ 8ರ ವರೆಗೆ 'ಸರ್ವ ಜನಾಂಗದ ಶಾಂತಿಯ ತೋಟ' ಶೀರ್ಷಿಕೆಯಡಿ ಬೆಂಗಳೂರಿನಲ್ಲಿ 16ನೇ ವರ್ಷದ 'ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ' ಆಯೋಜಿಸಲಾಗಿತ್ತು. ನಟ ಕಿಶೋರ್ ಕುಮಾರ್ ಅವರನ್ನು ಚಿತ್ರೋತ್ಸವದ ರಾಯಭಾರಿಯಾಗಿ ಕರ್ನಾಟಕ ಸರ್ಕಾರ ನೇಮಿಸಿದೆ.

ಇದನ್ನೂ ಓದಿ:ʼಶಾರುಖ್‌ ಖಾನ್‌, ಸಲ್ಮಾನ್‌ ಖಾನ್‌ ಈ ವರ್ಷ ಸಾಯುತ್ತಾರೆʼ.. ಖ್ಯಾತ ಜ್ಯೋತಿಷಿಯ ಸೆನ್ಸೇಷನಲ್‌ ಹೇಳಿಕೆ!   

ಇಂದು ಚಿತ್ರೋತ್ಸವದ ಕೊನೆ ದಿನ, ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಕಿಶೋರ್‌, ಮಾಂಸ ತಿಂದು ದೇಗುಲಕ್ಕೆ ಹೋಗ್ತೀನಿ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವ ಮಾತುಗಳು ನನಗೆ ಬಹಳ ಇಷ್ಟ ಆಯ್ತು, ಅವರ ರೀತಿ ವ್ಯಕ್ತಿತ್ವ ಇರೋರು ಬಹಳ ಮುಖ್ಯ ಎಂದಿದ್ದಾರೆ..

ಅಲ್ಲದೆ, ಮಾಂಸ ತಿಂದು ದೇವಸ್ಥಾನಕ್ಕೆ ಹೋದರೆ ತಪ್ಪೇನು...? ಅಂತ ನಟ ಕಿಶೋರ್‌ ಪ್ರಶ್ನೆ ಸಹ ಮಾಡಿದ್ದಾರೆ. ಇದೀಗ ನಟನ ಹೇಳಿಕೆಗೆ ಪರ ಮತ್ತು ವಿರೋಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.. ಸೋಷಿಯಲ್‌ ಮೀಡಿಯಾದಲ್ಲಿಯೂ ಸಹ ಚರ್ಚೆ ನಡೆಯುತ್ತಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News