)
prakash raj: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಪಾಕಿಸ್ತಾನಿ ನಟ ಫವಾದ್ ಖಾನ್ ಅವರ 'ಅಬೀರ್ ಗುಲಾಲ್' ಚಿತ್ರ ಭಾರತದಲ್ಲಿ ನಿಷೇಧಕ್ಕೊಳಗಾಗಿತ್ತು. ಪಾಕಿಸ್ತಾನಿ ನಟನೊಂದಿಗೆ ತೆರೆ ಹಂಚಿಕೊಂಡಿದ್ದಕ್ಕಾಗಿ ಚಿತ್ರದ ಪ್ರಮುಖ ನಟಿ ರಿಧಿ ಡೋಗ್ರಾ ಅವರನ್ನು ನಿಂದಿಸಲಾಯಿತು. ಪಾಕಿಸ್ತಾನಿ ಕಲಾವಿದರು ಹಾಗೂ ಚಿತ್ರರಂಗದ ಅನೇಕ ತಾರೆಯರು ಚಿತ್ರದ ವಿರುದ್ಧ ಎದ್ದು ನಿಂತರು. ಆದರೆ, ದಕ್ಷಿಣ ಸಿನಿಮಾ ತಾರೆ ಪ್ರಕಾಶ್ ರಾಜ್ 'ಅಬಿರ್ ಗುಲಾಲ್' ಚಿತ್ರದ ಮೇಲಿನ ನಿಷೇಧವನ್ನು ವಿರೋಧಿಸಿದ್ದಾರೆ.
ಪ್ರಕಾಶ್ ರಾಜ್ ಅವರ ಹೇಳಿಕೆಗಳು ಯಾವಾಗಲೂ ಸರ್ಕಾರದ ನೀತಿಗಳಿಗೆ ವಿರುದ್ಧವಾಗಿರುತ್ತವೆ. ಈಗ ಚಿತ್ರದ ವಿರುದ್ಧ ಆಡಳಿತದ ಕ್ರಮದ ಬಗ್ಗೆ ನಟ ಪ್ರಕಾಶ್ ರಾಜ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವುದೇ ಚಿತ್ರದ ಮೇಲಿನ ನಿಷೇಧವನ್ನು ಪ್ರಕಾಶ್ ರಾಜ್ ವಿರೋಧಿಸುತ್ತಾರೆ. ಅದರ ಸಿದ್ಧಾಂತ ಏನೇ ಇರಲಿ. ಇತ್ತೀಚಿನ ದಿನಗಳಲ್ಲಿ ಜನರ ಭಾವನೆಗಳಿಗೆ ಧಕ್ಕೆ ಆಗುತ್ತವೆ ಎಂದು ಹೇಳಿದರು. ನಟ 'ಪದ್ಮಾವತ್', 'ಪಠಾಣ್' ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ 'ಎಲ್ 2: ಎಂಪುರಾನ್' ಮತ್ತು ಫವಾದ್ ಖಾನ್ ಅವರ ಅಬಿರ್ ಗುಲಾಲ್ ಅನ್ನು ಉಲ್ಲೇಖಿಸಿದ್ದಾರೆ.
'ಅಬಿರ್ ಗುಲಾಲ್' ಚಿತ್ರದ ನಿಷೇಧದ ಬಗ್ಗೆ ಮಾತನಾಡಿರುವ ಪ್ರಕಾಶ್ ರಾಜ್, ಯಾವುದೇ ಚಿತ್ರವನ್ನು ಅದರ ಸಿದ್ಧಾಂತ ಏನೇ ಇರಲಿ, ನಿಷೇಧಿಸುವುದು ಸರಿಯಲ್ಲ. ಜನರೇ ಅದನ್ನು ನಿರ್ಧರಿಸಲಿ. ಜನರಿಗೆ ಹಕ್ಕಿದೆ. ಅಶ್ಲೀಲತೆ ಅಥವಾ ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಇಲ್ಲದ ಚಲನಚಿತ್ರಗಳನ್ನು ನೀವು ನಿಷೇಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಶಾರೂಖ್ ಖಾನ್ ಮತ್ತು ದೀಪಿಕಾ ಪಡುಕೋಣೆಯ ‘ಪಠಾಣ್’ ಸಮಯದಲ್ಲಿ ಉಂಟಾದ ಗೊಂದಲದ ಬಗ್ಗೆಯೂ ಪ್ರಕಾಶ್ ರಾಜ್ ಮಾತನಾಡಿದ್ದಾರೆ. ‘ಪಠಾಣ್’ ಚಿತ್ರದ ಹಾಡಿನಲ್ಲಿ ದೀಪಿಕಾ ತೊಟ್ಟ ಬಟ್ಟೆಯ ಬಣ್ಣದಿಂದಾಗಿ ಅರಿಗೆ ಬೆದರಿಕೆಗಳು ಬಂದಿವೆ. ಕೆಲವರು ದೀಪಿಕಾ ಪಡುಕೋಣೆ ಮೂಗು ಕತ್ತರಿಸುತ್ತೇವೆ ಎಂದು ಹೇಳುತ್ತಿದ್ದರು. ಕೇವಲ ಬಟ್ಟೆಗಾಗಿ ಅಥವಾ ಬಣ್ಣಕ್ಕಾಗಿ..? ಎಂದು ಪ್ರಕಾಶ್ ರಾಜ್ ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಮೋದಿ ಸರ್ಕಾರವನ್ನು ಸಹ ದೂಷಿಸಿದ ಪ್ರಕಾಶ್ ರಾಜ್, ಸರ್ಕಾರ ಇದಕ್ಕೆ ಅವಕಾಶ ನೀಡುತ್ತಿದೆ. ಸಮಾಜದಲ್ಲಿ ಭಯ ಹುಟ್ಟಿಸುವಂತೆ ಅವರು ಅದನ್ನು ಬೆಂಬಲಿಸುತ್ತಿದ್ದಾರೆ. ಈ ದೇಶದಲ್ಲಿ ಕೆಲವು ಚಲನಚಿತ್ರಗಳು ತಯಾರಾಗುತ್ತಿಲ್ಲ. ಸೆನ್ಸಾರ್ಶಿಪ್ ಇರುವುದರಿಂದ ಈ ರೀತಿ ಆಗುತ್ತಿದೆ. ಹಿಂದೆ ರಾಜ್ಯ ಸೆನ್ಸಾರ್ಶಿಪ್ ಇತ್ತು. ಏನು ಮಾಡಬೇಕೆಂದು ಅವರೇ ನಿರ್ಧರಿಸುತ್ತಿದ್ದರು. ಚಲನಚಿತ್ರೋದ್ಯಮವು ಬಹಳ ಸೂಕ್ಷ್ಮವಾದ ಉದ್ಯಮವಾಗಿದೆ. ಇದರಲ್ಲಿ ಹಣವಿದೆ. ಹಾಗಾಗಿ ಅವರ ಇಡೀ ಉದ್ದೇಶವೇನೆಂದರೆ, ಮುಂದಿನ ಪೀಳಿಗೆ ಬರೆಯಲು ನಿರ್ಧರಿಸದಷ್ಟು ಭಯವನ್ನು ಸೃಷ್ಟಿಸುವುದು. ಅವರಿಗೆ ಈ ಚರ್ಚೆ ಬೇಡ ಎಂದಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.