Instagram ನಲ್ಲಿ 50 ಮಿಲಿಯನ್ ಫಾಲೋವರ್ಸ್‌ ದಾಟಿದ ಪ್ರಿಯಾಂಕಾ...! ಒಂದು ಪೋಸ್ಟ್ ಗೆ ಬರುತ್ತೆ ಇಷ್ಟು ಹಣ

ನಟಿ ಪ್ರಿಯಾಂಕಾ ಚೋಪ್ರಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಗುರುವಾರ 50 ಮಿಲಿಯನ್ ಫಾಲೋವರ್ಸ್‌ಗಳನ್ನು ದಾಟಿದ್ದಾರೆ.

Updated: Feb 20, 2020 , 05:22 PM IST
Instagram ನಲ್ಲಿ 50 ಮಿಲಿಯನ್ ಫಾಲೋವರ್ಸ್‌ ದಾಟಿದ ಪ್ರಿಯಾಂಕಾ...! ಒಂದು ಪೋಸ್ಟ್ ಗೆ ಬರುತ್ತೆ ಇಷ್ಟು ಹಣ
Photo courtesy: facebook

ನವದೆಹಲಿ: ನಟಿ ಪ್ರಿಯಾಂಕಾ ಚೋಪ್ರಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಗುರುವಾರ 50 ಮಿಲಿಯನ್ ಫಾಲೋವರ್ಸ್‌ಗಳನ್ನು ದಾಟಿದ್ದಾರೆ.

ಆದರೆ, ಈ ಸಾಧನೆ ಮಾಡಿದ ಮೊದಲ ಭಾರತೀಯರೇನಲ್ಲ. ಈ ವಾರದ ಆರಂಭದಲ್ಲಿ, ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ 50 ಮಿಲಿಯನ್ ಫಾಲೋವರ್‌ಗಳನ್ನು ದಾಟಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪೋಟೋ ಅಪ್ಲಿಕೇಶನ್‌ನಲ್ಲಿ ಅವರು ಪ್ರಸ್ತುತ 50.2 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.ಇನ್ನೊಂದೆಡೆಗೆ ದೀಪಿಕಾ ಪಡುಕೋಣೆ, 44.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಪ್ರಿಯಾಂಕಾ ಮತ್ತು ವಿರಾಟ್ ಅವರು 2019 ರ ಇನ್‌ಸ್ಟಾಗ್ರಾಮ್ ಶ್ರೀಮಂತ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಪ್ರಸಿದ್ಧ ವ್ಯಕ್ತಿಗಳಾಗಿದ್ದಾರೆ.ಇನ್ಸ್ಟಾಗ್ರಾಮ್ನಲ್ಲಿ ಅವರ ಪ್ರಾಯೋಜಿತ ಪೋಸ್ಟ್ಗಳ ಮೂಲಕ ಯಾರು ಎಷ್ಟು ಹಣವನ್ನು ಗಳಿಸುತ್ತಾರೆ ಎಂದು ಪಟ್ಟಿ ಬಹಿರಂಗಪಡಿಸುತ್ತದೆ.

ಪ್ರಿಯಾಂಕಾ ಪ್ರತಿ ಪೋಸ್ಟ್ ಗೆ  271,000 ಡಾಲರ್ ಹಣ ಗಳಿಸಿ 19 ನೇ ಸ್ಥಾನ ಪಡೆದರು. ಏತನ್ಮಧ್ಯೆ, ವಿರಾಟ್ ಪ್ರತಿ ಪೋಸ್ಟ್ ಗೆ 196,000 ಡಾಲರ್ ಗಳಿಸುವ ಮೂಲಕ 23ನೇ ಸ್ಥಾನದಲ್ಲಿದ್ದಾರೆ. ರಿಯಾಲಿಟಿ ಟಿವಿ ತಾರೆ ಮತ್ತು ಮೇಕ್ಅಪ್ ಮೊಗಲ್ ಕೈಲಿ ಜೆನ್ನರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಪ್ರತಿ ಪ್ರಚಾರದ ಪೋಸ್ಟ್ ಗೆ 1,266,000 ಡಾಲರ್ ಗಳಿಸಿದ್ದಾರೆ.