ಭಿಕ್ಷೆ ಬೇಡುವಂತಹ ಸ್ಥಿತಿ ಬಂದಿದೆ: ಕರಾಳ ಸತ್ಯ ಬಿಚ್ಚಿಟ್ಟ ಸ್ಟಾರ್‌ ನಟಿ

Actress Ashita: ಭಿಕ್ಷೆ ಬೇಡುವಂತಹ ಸ್ಥಿತಿ ಬಂದಿದೆ ಎಂದು ಹೇಳಿದ ಸ್ಟಾರ್‌ ನಟಿಯೊಬ್ಬರು ಬಣ್ಣದ ಬದುಕಿನ ಕರಾಳ ಮುಖ ಬಿಚ್ಚಿಟ್ಟಿದ್ದರು.

Written by - Chetana Devarmani | Last Updated : Apr 4, 2025, 07:55 AM IST
    • ಭಿಕ್ಷೆ ಬೇಡುವಂತಹ ಸ್ಥಿತಿ ಬಂದಿದೆ
    • ಸ್ಟಾರ್‌ ನಟಿಯೊಬ್ಬರ ಶಾಕಿಂಗ್‌ ಹೇಳಿಕೆ
    • ಬಣ್ಣದ ಬದುಕಿನ ಕರಾಳ ಮುಖ ಬಿಚ್ಚಿಟ್ಟ ನಟಿ
ಭಿಕ್ಷೆ ಬೇಡುವಂತಹ ಸ್ಥಿತಿ ಬಂದಿದೆ: ಕರಾಳ ಸತ್ಯ ಬಿಚ್ಚಿಟ್ಟ ಸ್ಟಾರ್‌ ನಟಿ
ಆಶಿತಾ ಧವನ್‌

Ashita Dhawan Reaction: ನಟಿ ಆಶಿತಾ ಧವನ್ ಪ್ರಸಿದ್ಧ ಟಿವಿ ತಾರೆ. ಬಿದಾಯಿ, ನಜರ್, ಯೇ ವಾದ ರಹಾ, ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ, ಅದಾಲತ್ ನಂತಹ ಅನೇಕ ಜನಪ್ರಿಯ ಸೀರಿಯಲ್‌ಗಳಲ್ಲಿ ಆಶಿತಾ ನಟಿಸಿದ್ದಾರೆ. ನಟಿ ಆಶಿತಾ ಧವನ್ ಟಿವಿ ಉದ್ಯಮದಲ್ಲಿ ತನ್ನದೇ ಆದ ವಿಶೇಷ ಸ್ಥಾನವನ್ನು ಗಳಿಸಿದ್ದಾರೆ. ಇದೀಗ ನಟಿ ಆಶಿತಾ ಬಣ್ಣದ ಬದುಕಿನ ಕೆಲಸದ ಕುರಿತಾದ ತಮ್ಮ ಹೋರಾಟದ ಬಗ್ಗೆ ಮಾತನಾಡಿದ್ದಾರೆ. ಈಗ ಕಾಲ ಬದಲಾಗಿದೆ ಎಂದು ಆಶಿತಾ ಹೇಳಿದರು.

Add Zee News as a Preferred Source

ಕೆಲಸ ಮಾಡಲು ಸಮಯದ ಮಿತಿ ಇಲ್ಲದ ಕಾಲವೊಂದಿತ್ತು ಎಂದು ನಟಿ ಆಶಿತಾ ಧವನ್ ನೆನಪಿಸಿಕೊಂಡರು. "ಆ ಸಮಯದಲ್ಲಿ ನಾವು ಯಾವುದೇ ವಿರಾಮವಿಲ್ಲದೆ ಕೆಲಸ ಮಾಡುತ್ತಿದ್ದೆವು. ನಾವು ಮನೆಗೆ ಕೂಡ ಹೋಗುತ್ತಿರಲಿಲ್ಲ. ಆದರೆ ಈಗ ಎಲ್ಲವೂ ಬದಲಾಗಿವೆ. ಈಗ ಸರಿಯಾದ ವೇಳಾಪಟ್ಟಿ ಇದೆ. ಜನರಿಗೆ ಕುಟುಂಬಕ್ಕಾಗಿ ಸಮಯವಿದೆ. ಇದು ಸಕಾರಾತ್ಮಕ ಬದಲಾವಣೆ ನೀಡಿದೆ" ಎಂದು ಆಶಿತಾ ಹೇಳಿದ್ದಾರೆ. 

ಇದನ್ನೂ ಓದಿ: ನಾನು ಮದುವೆ ಆಗದಿರಲು ಕಾರಣ ಅಜಯ್ ದೇವಗನ್ : ಶಾಕಿಂಗ್‌ ಸತ್ಯ ಬಿಚ್ಚಿಟ್ಟ ನಟಿ ಟಬು

ಸ್ಕ್ರಿಪ್ಟ್ ಅನುಮೋದನೆ ಪಡೆಯಲು ಸಮಯ ತೆಗೆದುಕೊಳ್ಳುತ್ತದೆ, ಇದು ಕೆಲವೊಮ್ಮೆ ಸೃಜನಶೀಲತೆಗೆ ಅಡ್ಡಿಯಾಗುತ್ತದೆ ಎಂದು ಆಶಿತಾ ಹೇಳಿದರು. ಸರಿಯಾದ ಸಮಯದಲ್ಲಿ ಅನುಮೋದನೆ ದೊರೆತರೆ ವಿಷಯವು ಸುಧಾರಿಸಬಹುದು ಎಂದಿದ್ದಾರೆ.

ಆಶಿತಾ ಅವರು ಎರಡು ದಶಕಗಳಿಂದ ಹಿಂದಿ ಕಿರಿತೆರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಈಗ ಹಣಕಾಸಿಗೆ ಸಂಬಂಧಿತ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು. ನಾನು ನಿರಂತರವಾಗಿ ಕೆಲಸ ಮಾಡಿದ್ದೇನೆ, ಆದರೂ ನಾನು ಇನ್ನೂ ಕೆಲಸ ಕೇಳಬೇಕು ಮತ್ತು ಸಂಭಾವನೆಗಾಗಿ ಮನವಿ ಮಾಡಬೇಕು. ನನಗೆ ಇದು ತರಕಾರಿ ವ್ಯಾಪಾರದಂತೆ ಅನಿಸುತ್ತಿದೆ ಎಂದರು. 

ನನ್ನನ್ನು ಒಂದು ಸರಕಿನಂತೆ ನಡೆಸಿಕೊಳ್ಳುತ್ತಿದ್ದಾರೆ. ಏಕ್ತಾ ಮೇಡಂ ಸ್ಟಾರ್‌ಗಳನ್ನು ಸೃಷ್ಟಿಸುತ್ತಿದ್ದರು. ಮನೆ, ಕಾರುಗಳು ಮತ್ತು ತೋಟದ ಮನೆಗಳನ್ನು ಖರೀದಿಸಲು ಹಣ ನೀಡುತ್ತಿದ್ದರು. ಈಗ ಹಗಲಿರುಳು ಕೆಲಸ ಮಾಡಿದರೂ, ನಟರಿಗೆ ಒಂದು ಆಲ್ಟೋ ಕಾರು ಕೂಡ ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಹಣಕ್ಕಾಗಿ ಭಿಕ್ಷೆ ಬೇಡುವಂತಹ ಸ್ಥಿತಿ ಎದುರಾಗಿದೆ. ಇದು ನನಗೆ ಕೆಟ್ಟ ಭಾವನೆ ಮೂಡಿಸುತ್ತಿದೆ ಎಂದಿದ್ದಾರೆ. 

ಇದನ್ನೂ ಓದಿ: ಖ್ಯಾತ ಖಳನಾಯಕ ಅಶುತೋಷ್ ರಾಣಾ ಅವರ ಪತ್ನಿ ಯಾರು ಗೊತ್ತಾ? ಈಕೆ ಕೂಡ ತನ್ನ ಸೌಂದರ್ಯದಿಂದ ಅಭಿಮಾನಿಗಳ ಮನ ಕದ್ದ ಸ್ಟಾರ್‌ ಹೀರೋಯಿನ್‌

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News