)
Salman Khan: ನಟ ಸಲ್ಮಾನ್ ಖಾನ್ ತಮ್ಮ ವೃತ್ತಿಪರ ಜೀವನಕ್ಕಾಗಿ ಕಡಿಮೆ ಸುದ್ದಿಯಲ್ಲಿರುತ್ತಾರೆ, ಆದರೆ ಅವರು ಖಾಸಗಿ ಜೀವನದಿಂದಾಗಿ ಸುದ್ದಿಯಲ್ಲಿರೋದು ಹೆಚ್ಚು. ನಟನಿಗೆ ಇಂದು ಯಾವುದೇ ಮನ್ನಣೆ ಅಗತ್ಯವಿಲ್ಲ. ಸಲ್ಮಾನ್ ಖಾನ್ ಹತ್ತಿರ ಇಲ್ಲದ ಹಣ ಮತ್ತು ಖ್ಯಾತಿಯಂತಹದ್ದು ಯಾವುದೂ ಇಲ್ಲ. ಆದರೂ, ಅವರು 60 ನೇ ವಯಸ್ಸಿನಲ್ಲಿ ಒಂಟಿ ಜೀವನ ನಡೆಸುತ್ತಿದ್ದಾರೆ. ಸಲ್ಮಾನ್ ಅವರ ಹೆಸರು ಅನೇಕ ನಟಿಯರೊಂದಿಗೆ ತಳುಕು ಹಾಕಿಕೊಂಡಿದೆ, ಆದರೆ ಯಾವ ಸಂಬಂಧವೂ ಮದುವೆಯ ಹಂತವನ್ನು ತಲುಪಲಿಲ್ಲ. ಈ ಮಧ್ಯೆ, ನಟಿ ಭಾಗ್ಯಶ್ರೀ ಸಲ್ಮಾನ್ ಖಾನ್ ಅವರ ಖಾಸಗಿ ಜೀವನದ ಬಗ್ಗೆ ದೊಡ್ಡ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
'ಮೈನೆ ಪ್ಯಾರ್ ಕಿಯಾ' ಚಿತ್ರದಲ್ಲಿ ಭಾಗ್ಯಶ್ರೀ ಮತ್ತು ಸಲ್ಮಾನ್ ಒಟ್ಟಿಗೆ ಕೆಲಸ ಮಾಡಿದ್ದರು. ಆ ಚಿತ್ರದಲ್ಲಿ ಅವರಿಬ್ಬರ ಜೋಡಿಯನ್ನು ಅಭಿಮಾನಿಗಳು ಇಷ್ಟಪಟ್ಟರು. ಆ ಚಿತ್ರವೂ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಕಂಡಿತು. ಏತನ್ಮಧ್ಯೆ, ಇತ್ತೀಚಿನ ಸಂದರ್ಶನವೊಂದರಲ್ಲಿ, ಭಾಗ್ಯಶ್ರೀ ದೊಡ್ಡ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಸಲ್ಮಾನ್ ಖಾನ್ ಅವರ ವೈಯಕ್ತಿಕ ಜೀವನದ ಬಗ್ಗೆ ಭಾಗ್ಯಶ್ರೀ, 'ಸಲ್ಮಾನ್ ಖಾನ್ ಯಾವುದೇ ಹುಡುಗಿಯ ಹಿಂದೆ ಹೋಗಲಿಲ್ಲ. ಹುಡುಗಿಯರು ಅವನ ಹಿಂದೆ ಬರುತ್ತಿದ್ದರು. ಸಲ್ಮಾನ್ ಯಾವಾಗಲೂ ಒಳ್ಳೆಯ ಹುಡುಗಿಯರು ನನ್ನನ್ನು ಪ್ರೀತಿಸಬೇಕು ಎಂದು ಹೇಳುತ್ತಿದ್ದರು, ಆದರೆ ಸಲ್ಮಾನ್ ಎಂದಿಗೂ ತನ್ನನ್ನು ಒಳ್ಳೆಯ ಹುಡುಗ ಎಂದು ಪರಿಗಣಿಸಲಿಲ್ಲ.'ಎಂದಿದ್ದಾರೆ.
"ಒಂದು ಹುಡುಗಿ ಜೊತೆ ತುಂಬಾ ದಿನ ಇದ್ದ ಮೇಲೆ ನನಗೆ ಬೇಸರವಾಗುತ್ತದೆ. ಹಾಗಾಗಿ ನನ್ನ ಅಭ್ಯಾಸ ಬದಲಾಯಿಸುವವರೆಗೂ, ನಾನು ಯಾವುದೇ ಹುಡುಗಿಯನ್ನು ನನ್ನ ಹತ್ತಿರ ಬರಲು ಬಿಡುವುದಿಲ್ಲ." "ಸಲ್ಮಾನ್ ಖಾನ್ ತನ್ನ ಅಭ್ಯಾಸಗಳಿಂದಾಗಿ ಯಾವುದೇ ಹುಡುಗಿಯನ್ನು ತನ್ನ ಹತ್ತಿರ ಬರಲು ಬಿಡುತ್ತಿರಲಿಲ್ಲ. ಅವನು ಯಾವಾಗಲೂ ಹುಡುಗಿಯರಿಂದ ದೂರ ಇರುತ್ತಿದ್ದನು..." ಎಂದು ಭಾಗ್ಯಶ್ರೀ ಸಲ್ಮಾನ್ ಕುರಿತು ಹೇಳಿದ್ದಾರೆ.
ಸಲ್ಮಾನ್ ಖಾನ್ ಮದುವೆಯ ಬಗ್ಗೆ ಹೇಳುವುದಾದರೆ, ಸಲ್ಮಾನ್ ಖಾನ್, ನಟಿ ಸಂಗೀತಾ ಬಿಜಲಾನಿ ಜೊತೆ ಸಂಬಂಧ ಹೊಂದಿದ್ದರು. ಇಬ್ಬರೂ ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದರು. ಕೊನೆಗೆ ಆ ಸಂಬಂಧ ಮದುವೆಯ ಹಂತ ತಲುಪಿತು. ಸಲ್ಮಾನ್ ಮತ್ತು ಸಂಗೀತಾ ಅವರ ಮದುವೆಯ ಕಾರ್ಡ್ಗಳು ಸಹ ಮುದ್ರಿಸಲ್ಪಟ್ಟವು. ಆದರೆ ಕೆಲವು ಕಾರಣದಿಂದ ಇಬ್ಬರೂ ಮದುವೆಯಾಗಲು ಸಾಧ್ಯವಾಗಲಿಲ್ಲ. ಆದರೆ ಇಂದಿಗೂ ಸಲ್ಮಾನ್ ಮತ್ತು ಸಂಗೀತಾ ಒಳ್ಳೆಯ ಸ್ನೇಹಿತರು.
ಭಾಗ್ಯಶ್ರೀ ಬಗ್ಗೆ ಹೇಳುವುದಾದರೆ, ಬಾಲಿವುಡ್ನಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದಾಗ, ಭಾಗ್ಯಶ್ರೀ 1989 ರಲ್ಲಿ ಉದ್ಯಮಿ ಹಿಮಾಲಯ ದಾಸಾನಿ ಅವರನ್ನು ವಿವಾಹವಾದರು. ಅದಾದ ನಂತರ, ನಟಿ ಬಾಲಿವುಡ್ಗೆ ವಿದಾಯ ಹೇಳಿದರು. ಭಾಗ್ಯಶ್ರೀಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಇಂದು, ನಟಿ ತಮ್ಮ ವೈಯಕ್ತಿಕ ಜೀವನದಲ್ಲಿ ಸಂತೋಷವಾಗಿದ್ದಾರೆ.