)
Tanushree Dutta: 'ಆಶಿಕ್ ಬನಾಯಾ ಆಪ್ನೆ' ಚಿತ್ರದ ಮೂಲಕ ಬಾಲಿವುಡ್ನಲ್ಲಿ ಹೆಸರು ಮಾಡಿದ ನಟಿ ತನುಶ್ರೀ ದತ್ತಾ, ಅನೇಕ ಚಿತ್ರಗಳಲ್ಲಿ ಬಲವಾದ ಪಾತ್ರಗಳನ್ನು ನಿರ್ವಹಿಸುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ. ಆದರೆ ಈಗ ತನುಶ್ರೀ ತಮ್ಮ ವೃತ್ತಿಪರ ಜೀವನಕ್ಕಾಗಿ ಕಡಿಮೆ ಸುದ್ದಿಯಲ್ಲಿರುವ ಇವರು ಖಾಸಗಿ ಜೀವನಕ್ಕಾಗಿ ಹೆಚ್ಚು ಚರ್ಚೆಯಲ್ಲಿರುತ್ತಾರೆ. ನಟಿ ಯಾವಾಗಲೂ ಬಾಲಿವುಡ್ನ ಕರಾಳ ಕಾಲದ ಬಗ್ಗೆ ಸತ್ಯವನ್ನು ಹೇಳುವುದನ್ನು ಕಾಣಬಹುದು. ಈಗ ಕೂಡ, ನಟಿ ಬಾಲಿವುಡ್ ಮಾಫಿಯಾ ಬಗ್ಗೆ ಶಾಕಿಂಗ್ ಸಂಗತಿ ಬಹಿರಂಗ ಮಾಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ತನುಶ್ರೀ ದತ್ತಾ , ಉದ್ಯಮದ ಹಲವು ರಹಸ್ಯಗಳನ್ನು ಬಹಿರಂಗಪಡಿಸಿದರು. 'ನಮ್ಮ ಅಂಗೈಗಳನ್ನು ನೆಕ್ಕದೆಯೇ ನೀವು ಯಶಸ್ಸನ್ನು ಪಡೆಯುತ್ತೀರಿ.. ನಮ್ಮ ಫಾರ್ಮ್ಹೌಸ್ಗೆ ಬರದಿದ್ದರೆ ನೀವು ಹೇಗೆ ನಟಿಯಾದಿರಿ.. ಬಾಲಿವುಡ್ನಲ್ಲಿ ನಿಮಗೆ ನಾಯಕಿ ಸ್ಥಾನಮಾನ ನೀಡಿದವರು ಯಾರು.. ಎಂದೆಲ್ಲಾ ಮಾತನಾಡುವ ಜನರಿದ್ದಾರೆʼ ಎಂದು ನಟಿ ಹೇಳಿದ್ದಾರೆ..
ಜೊತೆಗೆ "ನನ್ನ ಯಶಸ್ಸನ್ನು ಅನೇಕ ಜನರು ನೋಡಿಲ್ಲ. ಇದಷ್ಟೇ ಅಲ್ಲ, ನಟ ಸುಶಾಂತ್ ಸಿಂಗ್ ರಜಪೂತ್ ಅವರ ಯಶಸ್ಸನ್ನು ಯಾರೂ ಇಷ್ಟಪಡಲಿಲ್ಲ... ಇದೆಲ್ಲವೂ ಬಾಲಿವುಡ್ ಮಾಫಿಯಾ.. ಇಂತಹ ಕೃತ್ಯ ಮಾಡುವವರು ತಮ್ಮ ಕರ್ಮದ ಬಗ್ಗೆ ಯೋಚಿಸಬೇಕು.ʼ ಎಂದರು.. ತನುಶ್ರೀ ಯಾವಾಗಲೂ ಬಾಲಿವುಡ್ ಸೆಲೆಬ್ರಿಟಿಗಳನ್ನು ಗುರಿಯಾಗಿಸಿಕೊಳ್ಳುವುದನ್ನು ಕಾಣಬಹುದು.
ಇನ್ನು ತನುಶ್ರೀ ದತ್ತಾ ಅವರ ಚಿತ್ರಗಳ ಬಗ್ಗೆ ಹೇಳುವುದಾದರೆ, ಅವರು ನಟ ಇಮ್ರಾನ್ ಹಶ್ಮಿ ಅವರೊಂದಿಗೆ 'ಆಶಿಕ್ ಬನಾಯಾ ಆಪ್ನೆ' ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರ 2005 ರಲ್ಲಿ ಬಿಡುಗಡೆಯಾಯಿತು. ಅದರ ನಂತರ, ನಟಿ '36 ಚೀನಾ ಟೌನ್', 'ಭಾಗಮ್ ಭಾಗ್', 'ರಿಸ್ಕ್' ಮತ್ತು ಇತರ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು. ಅದಾದ ನಂತರ, ನಟಿ 2013 ರಲ್ಲಿ ಬಿಡುಗಡೆಯಾದ 'ಸೂಪರ್ ಕಾಪ್ಸ್ ವರ್ಸಸ್ ಸೂಪರ್ ವಿಲನ್ಸ್' ಚಿತ್ರದಲ್ಲೂ ಕೆಲಸ ಮಾಡಿದರು.
ಮೀಟೂ ಅಭಿಯಾನದ ಮೂಲಕ ಕೂಡ ತನುಶ್ರೀ ಮತ್ತಷ್ಟು ಬೆಳಕಿಗೆ ಬಂದರು. ಹೌದು ನಟಿ 2018 ರಲ್ಲಿ ಮೀಟೂ ಅಭಿಯಾನದ ಅಡಿಯಲ್ಲಿ ಹಿರಿಯ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. 2008 ರಲ್ಲಿ 'ಹಾರ್ನ್ ಓಕೆ ಪ್ಲೀಸ್' ಚಿತ್ರದ ಚಿತ್ರೀಕರಣ ನಡೆಯುತ್ತಿರುವಾಗ ನಾನಾ ಪಾಟೇಕರ್ ತನಗೆ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದರು ಎಂದು ತನುಶ್ರೀ ಹೇಳಿಕೆ ನೀಡಿದ್ದರು.