Esha Deol Bharat Takhtani Reunite: ಬಾಲಿವುಡ್ ಇರಲಿ, ಸ್ಯಾಂಡಲ್‌ವುಡ್ ಆಗಿರಲಿ ನೆಚ್ಚಿನ ನಟ-ನಟಿಯರ ವೈಯಕ್ತಿಕ ಜೀವನದ ಬಗ್ಗೆ ಕುತೂಹಲ ಅಂತೂ ಇದ್ದೇ ಇರುತ್ತದೆ. ಇತ್ತೀಚಿಗೆ ಬಾಲಿವುಡ್ ಖ್ಯಾತ ತಾರಾ ಜೋಡಿಯಾದ ನಟಿ ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಅವರ ಪುತ್ರಿ ನಟಿ ಇಶಾ ಡಿಯೋಲ್ ಇದೇ ರೀತಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಭಾರೀ ಚರ್ಚೆಯಲ್ಲಿದ್ದರು. ಇಶಾ ಡಿಯೋಲ್ ಪತಿ ಭರತ್ ತಖ್ತಾನಿಯಿಂದ ಬೇರ್ಪಟ್ಟು ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ ಎಂಬ ಸುದ್ದಿಯಂತು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಅವರ ವಿಚ್ಚೇದನದ ಸುದ್ದಿಯೂ ಜಗತ್ ಜಾಹೀರಾಗಿತ್ತು. ಇದೀಗ ಇಶಾ ಡಿಯೋಲ್ ಮತ್ತೆ ಪತಿ ಭಾರತ್ ತಖ್ತಾನಿ ಸಂಬಂಧಿತ ಸುದ್ದಿ ಮತ್ತೆ ಮುನ್ನೆಲಗೆ ಬಂದಿದ್ದು ಇವರಿಬ್ರೂ ಮತ್ತೆ ಒಂದಾದ್ರಾ ಎಂಬ ವದಂತಿ ಹಬ್ಬಿದೆ.

ಡಿವೋರ್ಸ್ ಆಗಿ 18 ತಿಂಗಳ ಬಳಿಕ ಮತ್ತೆ ಒಂದಾದ ಜೋಡಿ!
ಸಾಮಾಜಿಕ ಜಾಲತಾಣದಲ್ಲಿ ಇಶಾ ಡಿಯೋಲ್-ಭರತ್ ತಖ್ತಾನಿ ಅವರ ಫೋಟೋ ಭಾರೀ ವೈರಲ್ ಆಗುತ್ತಿದ್ದು ವಿಚ್ಚೇದನ ಪಡೆದು 18 ತಿಂಗಳ ಬಳಿಕ ಬರೋಬ್ಬರಿ ಒಂದೂವರೆ ವರ್ಷಗಳ ನಂತರ ಹೇಮಾಮಾಲಿನಿ-ಧರ್ಮೇಂದ್ರ ಮಗಳ ಬದುಕಿನಲ್ಲಿ ನವ ವಸಂತ ಮೂಡಿದೆ. ಇಶಾ ಡಿಯೋಲ್-ಭಾರತ್ ತಖ್ತಾನಿ ಮತ್ತೆ ಪ್ಯಾಚ್ ಅಪ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ವಾಸ್ತವವಾಗಿ, ಇಶಾ ಡಿಯೋಲ್ ಮಾಜಿ ಪತಿ ಭರತ್ ತಖ್ತಾನಿ ಇತ್ತೀಚಿಗೆ ಅವರೊಂದಿಗಿನ ಫೋಟೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದಾದ ಬಳಿಕ ಈ ಸೂಪರ್‌ಹಿಟ್ ಜೋಡಿ ಮತ್ತೆ ಒಂದಾಗುತ್ತಾರೆ ಎಂಬ ವದಂತಿ ಕೇಳಿಬರುತ್ತಿದೆ.

ಈ ವೈರಲ್ ಫೋಟೋದಲ್ಲಿ ಇಶಾ ಡಿಯೋಲ್, ಭರತ್ ತಖ್ತಾನಿ ಜೊತೆಗೆ ಅಹಾನಾ ಮತ್ತು ಸ್ನೇಹಿತ್ ಕೂಡ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಭರತ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ಈ ಫೋಟೋದಲ್ಲಿ ಅವರೆಲ್ಲರೂ ರೆಸ್ಟೋರೆಂಟ್ ನಲ್ಲಿ ಒಟ್ಟಿಗೆ ಕುಳಿತಿದ್ದು, ಇಶಾ ಬಿಳಿ ಟಾಪ್ ಮತ್ತು ಜೀನ್ಸ್ ನಲ್ಲಿ ಸಂತೋಷವಾಗಿ ಫೋಟೋಗೆ ಪೋಸ್ ನೀಡಿದದ್, ಬೂದು ಬಣ್ಣದ ಜಾಕೆಟ್ ಮತ್ತು ಟಿ-ಶರ್ಟ್ ಮತ್ತು ಸನ್ ಗ್ಲಾಸ್ ಧರಿಸಿರುವ ಭರತ್ ಸೆಲ್ಫಿ ತೆಗೆಯುತ್ತಿದ್ದಾರೆ.
ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಭರತ್ ಈ ಫೋಟೋಗೆ ಫೋಟೋಗೆ 'ಫ್ಯಾಮಿಲಿ ಸನ್ ಡೇ' ಎಂದು ಶೀರ್ಷಿಕೆ ನೀಡಿದ್ದು ವಿಚ್ಚೇದನ ಪಡೆದು 18 ತಿಂಗಳ ಬಳಿಕ ಈ ಜೋಡಿ ಮತ್ತೆ ಒಂದಾಯ್ತ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. 
ಇಶಾ ಡಿಯೋಲ್ ಮತ್ತು ಭರತ್ ತಖ್ತಾನಿ ಜೋಡಿ 2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗೆ ಮುದ್ದಾದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹೇಮಾಮಾಲಿನಿ ಧರ್ಮೇಂದ್ರ ಜೋಡಿಯಂತೆ ಆದರ್ಶ ಜೋಡಿ ಎಂದೇ ಹೇಳಲಾಗುತ್ತಿದ್ದ ಇಶಾ ಡಿಯೋಲ್ ಮತ್ತು ಭರತ್ ತಖ್ತಾನಿ ದಾಂಪತ್ಯಕ್ಕೆ ಯಾರ ಕಣ್ಣು ಬಿದ್ದಿತೋ ಏನೋ ಈ ಜೋಡಿ 2024ರಲ್ಲಿ ಡಿವೋರ್ಸ್ ಪಡೆಯುವ ಮೂಲಕ ತಮ್ಮ 11 ವರ್ಷಗಳ ದಾಂಪತ್ಯಕ್ಕೆ ಕೊನೆ ಹಾಡಿತ್ತು. ಇದೀಗ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋ, ವಿಚ್ಚೇದನದ ಬಳಿಕ ದಂಪತಿ ಮತ್ತೆ ಒಂದಾಗಿದ್ದಾರೆ ಎಂಬ ಸುದ್ದಿಯಿಂದ ಅವರ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ಇದನ್ನೂ ಓದಿ- ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ನಿಶ್ಚಿತಾರ್ಥ ಕನ್ಫರ್ಮ್: ಈ ಲವ್ ಬರ್ಡ್ಸ್ ಪ್ರೀತಿ ಶುರುವಾಗಿದ್ದು ಹೇಗ್ ಗೊತ್ತಾ...!









