Actress Farah Naaz: ಬಾಲಿವುಡ್‌ನಲ್ಲಿ ಅನೇಕ ನಟ-ನಟಿಯರು ತಮ್ಮ ಸಿನಿಮಾಗಳಿಗಿಂತ ತಮ್ಮ ವೈಯಕ್ತಿಕ ಜೀವನಕ್ಕಾಗಿ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಕೆಲವರು ತಮ್ಮ ನಟನೆಯ ಹೊರತಾಗಿ ಅವರ ಮುಗ್ಧ ಮನಸ್ಸಿನಿಂದ, ಅವರ ಜನಪರ ಕಾರ್ಯಗಳಿಂದಾಗಿ ಚರ್ಚೆಯಲ್ಲಿರುತ್ತಾರೆ. ಆದರೆ, ಈ ನಟಿ ತಮ್ಮ ನಟನೆಯಿಂದಲೂ ಅಲ್ಲ, ಸಾಮಾಜಿಕ ಕೆಲಸಗಳಿಂದಲೂ ಅಲ್ಲ ಆಕೆ ಸುದ್ದಿಯಲ್ಲಿದ್ದದ್ದು ಶೂಟಿಂಗ್ ಸೆಟ್‌ಗಳಲ್ಲಿನ ವಿವಾದಗಳಿಂದಾಗಿ. ಈಕೆ ತಮ್ಮ ಕೋಪದಿಂದಾಗಿ ಸಿಗುತ್ತಿದ್ದ ಸಿನಿಮಾ ಅವಕಾಶಗಳ ಜೊತೆಗೆ ತಮ್ಮ ವೃತ್ತಿ ಬದುಕನ್ನೇ ಕಳೆದುಕೊಳ್ಳಬೇಕಾಯಿತು. ಈ ನಟಿ ಅನಿಲ್ ಕಪೂರ್ ಅವರಿಂದ ಹಿಡಿದು ಚಂಕಿ ಪಾಂಡೆಯವರೆಗೆ ಖ್ಯಾತ ಸೂಪರ್ ಸ್ಟಾರ್ ಗಳೊಂದಿಗೆ ವಿವಾದಗಳಿಂದಾಗಿಯೇ ಇಂದಿಗೂ ಚರ್ಚೆಯಲ್ಲಿದ್ದಾರೆ. ಆಕೆ ಬೇರಾರೂ ಅಲ್ಲ ಬಾಲಿವುಡ್ ನಟಿ ಟಬು ಅವರ ಸಹೋದರಿ ಹಾಗೂ ಶಬಾನಾ ಅಜ್ಮಿ ಅವರ ಸೋದರ ಸೊಸೆ ಫರಾ ನಾಜ್.
90ರ ದಶಕದಲ್ಲಿ ಬಾಲಿವುಡ್‌ನಲ್ಲಿ ಹಲವು ಖ್ಯಾತ ನಟರೊಂದಿಗೆ ಅಭಿನಯಿಸಿದ್ದ ನಟಿ ಫರಾ ನಾಜ್, ತಮ್ಮ ಅಭಿನಯಕ್ಕಿಂತ ಅವರ ಕೋಪದ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದರು. ಸಿನಿಮಾವೊಂದರಲ್ಲಿ ಕೆಲಸ ಮಾಡುವಾಗ ಒಮ್ಮೆ ನಟ ಚಂಕಿ ಪಾಂಡೆಗೆ ಕಪಾಳಮೋಕ್ಷ ಮಾಡಿದ್ದ ಈಗೆ ಅನಿಲ್ ಕಪೂರ್ ಅವರನ್ನು ಬೆದರಿಸಿದ್ದರು. ಒಂದೆಡೆ ಸಿನಿಮಾದಲ್ಲಿ ತಮ್ಮ ಸ್ವಭಾವದಿಂದ ಹೆಸರು ಕೆಡಿಸಿಕೊಂಡಿದ್ದ ಈಕೆಯ ವೈಯಕ್ತಿಕ ಜೀವನವೂ ತುಂಬಾ ಅಸ್ಥಿರವಾಗಿತ್ತು. ಮೊದಲ ವಿವಾಹದಲ್ಲಿ ಬಿರುಕು ಮೂಡಿ ವಿಚ್ಛೇದನ ಪಡೆದಿದ್ದ ಅವರು ಇನ್ನೊಬ್ಬ ನಟನನ್ನು ಮದುವೆಯಾದರು.
17ನೇ ವಯಸ್ಸಿಗೆ ಬಣ್ಣ ಹಚ್ಚಿದ್ದ ಫರಾ ನಾಜ್:
1968ರಲ್ಲಿ ಹೈದರಾಬಾದ್‌ನ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಫರಾ ನಾಜ್, ಕೇವಲ 17 ನೇ ವಯಸ್ಸಿನಲ್ಲಿ ಯಶ್ ಚೋಪ್ರಾ ಅವರ 1985ರ ಚಿತ್ರ 'ಫಾಸ್ಲೆ' ಯಲ್ಲಿ ನಟನೆಗೆ ಪದಾರ್ಪಣೆ ಮಾಡಿದರು, ಇದು ಬಾಕ್ಸ್ ಆಫೀಸ್‌ನಲ್ಲಿ ಭಾರೀ ಯಶಸ್ಸನ್ನು ಕಂಡಿತ್ತು. ನಂತರ ಫರಾ ನಾಜ್ ಅವರು ರಾಜೇಶ್ ಖನ್ನಾ, ಧರ್ಮೇಂದ್ರ , ರಿಷಿ ಕಪೂರ್, ವಿನೋದ್ ಖನ್ನಾ, ಮಿಥುನ್ ಚಕ್ರವರ್ತಿ ಮತ್ತು ಸಂಜಯ್ ದತ್ ಅವರಂತಹ ಪ್ರಸಿದ್ಧ ನಟರೊಂದಿಗೆ ತೆರೆ ಹಂಚಿಕೊಂಡಿದ್ದರು. ನಟಿ ಫರಾ ನಾಜ್ ಅವರ ಅಮೋಘ ಅಭಿನಯದಿಂದಾಗಿ ಅವರಿಗೆ, ಇಮ್ಮಂದಾರ್, ಮರ್ತೆ ದಮ್ ತಕ್, ಕೌನ್ ಫಿರ್ ಆಯೇಗಿ, ಯತಿಮ್, ಬಾಪ್ ನಂಬರಿ ಬೇಟಾ ದಸ್ ನಂಬ್ರಿ, ಬೇಗುನಾ, ಸೌತೆಲಾ ಭಾಯಿ, ಪಟ್ನಿ ಔರ್ ತವೈಫ್, ಖುದಾ ಗವಾಹ್ ಮತ್ತು ಅಮರ್ ಪ್ರೇಮ್ ಮುಂತಾದ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡುವ ಅದೃಷ್ಟವೂ ದೊರೆತಿತ್ತು.
ಇದನ್ನೂ ಓದಿ- ನಟ ಪ್ರಭಾಸ್‌ಗೆ ಈ ನಟಿಯೆಂದರೇ ಪ್ರಾಣಕ್ಕಿಂತ ಹೆಚ್ಚು ಇಷ್ಟವಂತೆ! ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಫೇವರೆಟ್ ಸ್ಟಾರ್ ಇವರೇ..
ನಾನು ಆತ್ಮಹ*ತ್ಯೆ ಮಾಡಿಕೊಳ್ಳಲು ಹಾಗೆ ಮಾಡಿಲ್ಲ:
ಕೌಟುಂಬಿಕ ಜಗಳದಿಂದಾಗಿ ಎರಡು ಬಾರಿ ಕೈ ಮಣಿಕಟ್ಟುಗಳನ್ನೂ ಕೊಯ್ದುಕೊಂಡಿದ್ದೆ ಎಂದು 1988ರ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಫರಾ ನಾಜ್, "ನಾನು ಆತ್ಮಹ*ತ್ಯೆ ಮಾಡಿಕೊಳ್ಳಲು ಹಾಗೆ ಮಾಡಿಲ್ಲ. ತಮ್ಮ ಮಣಿಕಟ್ಟುಗಳನ್ನು ಸೀಳಿ ಯಾರೂ ಸಾಯುವುದಿಲ್ಲ. ನನ್ನ ಕುಟುಂಬ ನನ್ನನ್ನು ಸಾಯಲು ಬಿಡುವುದಿಲ್ಲ ಎಂದು ನನಗೆ ತಿಳಿದಿದೆ. ಆದರೆ ನನ್ನ ತಾಯಿ ಅಥವಾ ನನ್ನ ಸಹೋದರಿ ನನಗೆ ಮನಸ್ಸಿಗೆ ನೋವಾಗುವಂತೆ ಮಾತನಾಡಿದಾಗ ನಾನು ಹಾಗೇ ಮಾಡಿದ್ದೆ" ಎಂದಿದ್ದರು.
"ನನ್ನನ್ನು ನಂಬಿ, ನಾನು ಏನು ಮಾಡುತ್ತಿದ್ದೇನೆ ಅಥವಾ ಬ್ಲೇಡ್ ಎಲ್ಲಿಂದ ಪಡೆಯುತ್ತಿದ್ದೇನೆಂದು ನನಗೆ ತಿಳಿದಿರಲಿಲ್ಲ, ಮತ್ತು ನಾನು ನನ್ನ ರಕ್ತನಾಳಗಳನ್ನು ಕತ್ತರಿಸಿದಾಗ ಅದು ಹೆಚ್ಚು ನೋವಾಗಲಿಲ್ಲ. ಹೀಗೆ ಮಾಡುವುದರಿಂದ, ನಾನು ನನ್ನ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದೆ. ನನ್ನ ಕುಟುಂಬದ ಗಮನವನ್ನು ನನ್ನತ್ತ ಸೆಳೆಯುವ ನನ್ನ ಮಾರ್ಗ ಅದಾಗಿತ್ತು. ನಾನು ಆತ್ಮಹ*ತ್ಯೆ ಮಾಡಿಕೊಂಡರೆ ಅವರಿಗೆ ಏನಾಗುತ್ತಿತ್ತೋ ಗೊತ್ತಿಲ್ಲ. ಆದರೆ ನನ್ನ ಗಾಯಗಳನ್ನು ಈ ರೀತಿ ನೋಡಿದಾಗ, ಅವರು ನನಗೆ ನೋವುಂಟು ಮಾಡಿದ್ದಾರೆಂದು ಅವರಿಗೆ ತಿಳಿಯುತ್ತಿತ್ತು. ಅದಕ್ಕಾಗಿಯೇ ನಾನು ಹಾಗೇ ನಡೆದುಕೊಳ್ಳುತ್ತಿದ್ದೆ" ಎಂದು ಫರಾ ತನ್ನ ಕೋಪದ ಸ್ವಭಾವದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದರು.
ನಟಿಯ ವೃತ್ತಿಜೀವನವನ್ನೇ ಕೊನೆಗೊಳಿಸಿದ ಕೋಪ:
ತಮ್ಮ ಕೋಪದ ಸ್ವಭಾವದಿಂದಾಗಿ, ಆಗಾಗೆ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿದ್ದ ಫರಾ ನಾಜ್ ಅವರಿಗೆ ಇದೇ ಅವರ ವೃತ್ತಿಜೀವನಕ್ಕೂ ಮುಳ್ಳಾಗಿತ್ತು. 1989ರ "ಕಸಮ್ ವರ್ದಿ ಕಿ" ಚಿತ್ರದಲ್ಲಿ ಚಂಕಿ ಪಾಂಡೆ ಜೊತೆ ಕೆಲಸ ಮಾಡುವಾಗ, ನಟ ಆಯ್ಕೆಯೊಂದಿಗೆ ತಮಾಷೆ ಮಾಡಿದ್ದನ್ನೇ ಗಂಭೀರವಾಗಿ ತೆಗೆದುಕೊಂಡು ತುಂಬಾ ಕೋಪಗೊಂಡ ಫರಾ ನಾಜ್, ನೇರವಾಗಿ ಅವನಿಗೆ ಕಪಾಳಮೋಕ್ಷ ಮಾಡಿದಳು.
ಅನಿಲ್ ಕಪೂರ್ ನಟಿಸಿದ ಫರಾ ನಾಜ್ ಅವರ "ರಖ್ವಾಲಾ" ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೋತಾಗ, ಮಾಧುರಿ ನಾಯಕಿಯಾಗಿದ್ದರೆ ಚಿತ್ರ ಯಶಸ್ವಿಯಾಗುತ್ತಿತ್ತು ಎಂದು ಅನಿಲ್ ಕಪೂರ್ ಹೇಳಿದ್ದಾರೆ. ಇದು ಫರಾ ನಾಜ್ ಗೆ ಕೋಪಗೊಳ್ಳುವಂತೆ ಮಾಡಿತ್ತು. ಈ ಸಂದರ್ಭದಲ್ಲಿ ಆಕೆ, ನೇರವಾಗಿ ಅನಿಲ್ ಕಪೂರ್‌ಗೆ ಬೆದರಿಕೆ ಹಾಕಿದ್ದರಂತೆ.
ಎರಡು ಬಾರಿ ವಿವಾಹ:
1996ರಲ್ಲಿ, ಫರಾ ದಾರಾ ಸಿಂಗ್ ಅವರ ಮಗ ವಿಂದು ದಾರಾ ಸಿಂಗ್ ಅವರನ್ನು ವಿವಾಹವಾದರು ಮತ್ತು ಒಂದು ವರ್ಷದ ನಂತರ ಅವರಿಗೆ ಗಂಡು ಸಂತಾನವಾಗಿತ್ತು. ಆತನ ಹೆಸರು ಫತೇಹ್ ರಾಂಧವಾ. ಆರು ವರ್ಷಗಳ ದಾಂಪತ್ಯದ ನಂತರ ಆ ಜೋಡಿ ಬೇರ್ಪಟ್ಟರು. ನಂತರ ಫರಾ ನಾಜ್ ನಟ ಸುಮಿತ್ ಸೆಹಗಲ್ ಅವರನ್ನು ವಿವಾಹವಾದರು. ಇದು ಸುಮಿತ್ ಅವರ ಎರಡನೇ ವಿವಾಹವಾಗಿತ್ತು, ಏಕೆಂದರೆ ಅವರು ಈ ಹಿಂದೆ ಶಾಹೀನ್ ಬಾನೋ ಅವರನ್ನು ವಿವಾಹವಾಗಿದ್ದರು, ಅವರಿಗೆ ಸಯೇಶಾ ಎಂಬ ಮಗಳಿದ್ದಾಳೆ. ಫರಾ ಮತ್ತು ಸುಮಿತ್ ಅವರಿಗೆ ಮಕ್ಕಳಿಲ್ಲ.









