"ಅಫೇರ್​ಗಳನ್ನು ಇಟ್ಟುಕೊಳ್ಳುವುದೇ ನಿಜವಾದ ಜೀವನ... "- ಸ್ಟಾರ್‌ ನಟಿಯ ಶಾಕಿಂಗ್‌ ಹೇಳಿಕೆ ವೈರಲ್

actress Gayatri Reddy statement: ಬಿಗಿಲ್ ಚಿತ್ರದ ನಟಿ ಗಾಯತ್ರಿ ರೆಡ್ಡಿ ಸ್ನೇಹ ಸಂಬಂಧದ ಬಗ್ಗೆ ಮತ್ತು ಮಹಿಳೆಯರ ಉತ್ತಮ ಆರೋಗ್ಯಕ್ಕೆ ಸಂಬಂಧಿಸಿ ಸಲಹೆಗಳನ್ನು ನೀಡಿದ್ದಾರೆ

Written by - Bhavishya Shetty | Last Updated : Apr 26, 2025, 04:55 PM IST
    • ಬಿಗಿಲ್ ಚಿತ್ರದಲ್ಲಿ ಫುಟ್ಬಾಲ್ ಆಟಗಾರ್ತಿಯಾಗಿ ನಟಿಸಿದ್ದ ತಾರೆ
    • ಸಿವಿಲ್ ಇಂಜಿನಿಯರ್​ನನ್ನು ಮದುವೆಯಾಗಿರುವ ಗಾಯತ್ರಿ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ
    • ಮ್ಮದೇ ಆದ ಯೂಟ್ಯೂಬ್ ಚಾನೆಲ್ ಹೊಂದಿರುವ ನಟಿ
"ಅಫೇರ್​ಗಳನ್ನು ಇಟ್ಟುಕೊಳ್ಳುವುದೇ ನಿಜವಾದ ಜೀವನ... "- ಸ್ಟಾರ್‌ ನಟಿಯ ಶಾಕಿಂಗ್‌ ಹೇಳಿಕೆ ವೈರಲ್

Actress Gayathri Reddy: ಬಿಗಿಲ್ ಚಿತ್ರದಲ್ಲಿ ಫುಟ್ಬಾಲ್ ಆಟಗಾರ್ತಿಯಾಗಿ ನಟಿಸಿದ್ದ ತಾರೆ ಗಾಯತ್ರಿ ರೆಡ್ಡಿ ಹೇಳಿಕೆಯೊಂದು ವೈರಲ್‌ ಆಗುತ್ತಿದೆ. ಬಿಗಿಲ್‌ ಸಿನಿಮಾ ನಂತರ ತೆಲುಗಿನ ಲಿಫ್ಟ್​ ಚಿತ್ರದಲ್ಲಿ ಅಭಿನಯಿಸಿದ್ದ ಅವರು, ತಮ್ಮ ಮನೋಜ್ಞ ಅಭಿನಯದಿಂದ ವಿಶೇಷ ಮನ್ನಣೆ ಗಳಿಸಿದರು. ಇದಲ್ಲದೆ, ತೆಲುಗಿನ ಶಿಕಾರು ಚಿತ್ರದಲ್ಲಿಯೂ ಕೂಡ ಪೋಷಕ ಪಾತ್ರವನ್ನು ನಿರ್ವಹಿಸಿದ್ದಾರೆ.

Add Zee News as a Preferred Source

ಇದನ್ನೂ ಓದಿ: "ಗರ್ಭಾವಸ್ಥೆ"ಯಲ್ಲಿ "ಲೈಂಗಿಕ ಕ್ರಿಯೆ" ಮಾಡಿದ್ರೆ ಮಗುವಿಗೆ ಹಾನಿಯಾಗುತ್ತದೆಯೇ..? ಇಲ್ಲಿದೆ ಅಸಲಿ ಸತ್ಯ..

ಸದ್ಯ ಸಿನಿರಂಗಕ್ಕೆ ಗುಡ್ ಬೈ ಹೇಳಿ ಸಿವಿಲ್ ಇಂಜಿನಿಯರ್​ನನ್ನು ಮದುವೆಯಾಗಿರುವ ಗಾಯತ್ರಿ  ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಹೊಂದಿರುವ ಅವರು, ಆಗಾಗ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಅನಿಸಿದ್ದನ್ನು ನೇರವಾಗಿ ಹೇಳುವಾಕೆ ಗಾಯತ್ರಿ. ಸದ್ಯ ವೈರಲ್‌ ಆಗಿರುವ ಸೆಲ್ಫಿ ವಿಡಿಯೋದಲ್ಲಿ ಗಾಯತ್ರಿ ರೆಡ್ಡಿ, ಮಹಿಳೆಯರಿಗಾಗಿ ಉತ್ತಮ ಆರೋಗ್ಯ ಸಲಹೆಗಳನ್ನು ನೀಡಿದ್ದಾರೆ. ಪಿರಿಯಡ್ಸ್ ಸಮಯದಲ್ಲಿ ತಾನು ಕಾಫಿ ಕುಡಿಯುವುದಿಲ್ಲ ಎಂಬ ವಿಚಾರವನ್ನು ಸಹ ಈ ವಿಡಿಯೋದಲ್ಲಿ ಶೇರ್‌ ಮಾಡಿದ್ದಾರೆ. "ಕಾಫಿ ಕುಡಿದರೆ ಹೆಚ್ಚು ತೊಂದರೆಯಾಗುತ್ತದೆ. ಅಲ್ಲದೆ, ಹೊಟ್ಟೆಯ ಕೆಳಭಾಗದಲ್ಲಿ ನೋವು ಹೆಚ್ಚಾಗುತ್ತದೆ. ಕುಡಿಯಬೇಕು ಅನಿಸಿದರೆ ಲೆಮನ್ ಟೀ, ಜಿಂಜರ್ ಟೀ ಕುಡಿಯುತ್ತೇನೆ. ಪಿರಿಯಡ್ಸ್​ ವೇಳೆ ಕಾಫಿ ಕುಡಿಯದಿರುವುದೇ ಉತ್ತಮ" ಎಂದು ಹೇಳಿದ್ದಾರೆ.

"ನನ್ನ ತಾಯಿ ನನ್ನನ್ನು ಸ್ವಾರ್ಥಿ ಅಂತಾ ಕರಿತಾರೆ. ಅದು ನಿಜ. ನನ್ನೊಂದಿಗಿದ್ದ ಕೆಟ್ಟವರ ಜತೆ ನಾನು ಫ್ರೆಂಡ್‌ಶಿಪ್‌ ಕಡಿದುಕೊಂಡಿದ್ದೇನೆ. ನನಗೂ ಸ್ನೇಹಿತರು ಬೇಕು. ಆದರೆ, ಅವರು ನನ್ನ ಬೆಳವಣಿಗೆಗೆ ಸಹಾಯ ಮಾಡುತ್ತಿಲ್ಲ. ಹೀಗಾಗಿ ಅವರಿಗೆ ನನ್ನ ಜೀವನದಲ್ಲಿ ಸ್ಥಾನವಿಲ್ಲ. ನಾನು ಜೀವನದಲ್ಲಿ ಚೆನ್ನಾಗಿಯೇ ಇದ್ದೇನೆ. ಆದರೆ, ಅವರಿನ್ನೂ ಹಾಗೆಯೇ ಇದ್ದಾರೆ. ನಿಮ್ಮ ಜೀವನದಲ್ಲಿ ನಿಮ್ಮ ಬೆಳವಣಿಗೆಗೆ ಸಹಾಯ ಮಾಡದವರ ಜತೆ ಎಂದಿಗೂ ಸ್ನೇಹ ಬೆಳಸಬೇಡಿ" ಎಂದು ಗಾಯತ್ರಿ ಸಲಗೆ ನೀಡಿದ್ದಾರೆ.

ಇದನ್ನೂ ಓದಿ: "ನನಗೆ ಆ ಅಭ್ಯಾಸ ಇದೆ.. ಅಂತಹ ಸಮಯದಲ್ಲಿ ನನ್ನನ್ನು ನಾನು ಕಂಟ್ರೋಲ್‌ ಮಾಡೋಕೆ ಆಗೋದೆ ಇಲ್ಲ" ಬಹಿರಂಗ ಹೇಳಿಕೆ ಕೊಟ್ಟ ನಟಿ ಸಂಯುಕ್ತ ಮೆನನ್‌

"ನಾನು ಸ್ವಾರ್ಥಿ ನಿಜ. ಆದರೆ ಅದು ನನ್ನ ಜೀವನಕ್ಕೋಸ್ಕರ. ಇದರಿಂದ ಯಾರಿಗೂ ತೊಂದರೆ ಆಗುವುದಿಲ್ಲ. ನನ್ನ ಬೆಳವಣಿಗೆ ನೋಡಿ ನಿಜವಾಗಿಯೂ ಆನಂದಿಸುವವರಿಗೆ ಮಾತ್ರ ಹೇಳುತ್ತೇನೆ. ಇನ್ನೂ ಕೆಲವರು ಅಫೇರ್​ಗಳನ್ನು ಇಟ್ಟುಕೊಳ್ಳುವುದೇ ನಿಜವಾದ ಜೀವನ ಎಂದು ಭಾವಿಸುತ್ತಾರೆ. ಅಂತಹ ಸ್ನೇಹಿತರು ನನಗೆ ಬೇಡ" ಎಂದು ಗಾಯತ್ರಿ ರೆಡ್ಡಿ ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News