ಒಂದು ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದು ಸಿನಿ ಜಗತ್ತನ್ನೇ ಆಳಿದ ನಟಿ !ನಂತರ ಸಾಲದ ಸುಳಿಗೆ ಬಿದ್ದು ಬೀದಿ ಬದಿಯಲ್ಲಿ ಜೀವನ ನಡೆಸುವ ಸ್ಥಿತಿ !

Actress Struggle Story :ಒಂದು ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಈ ನಟಿ ಸಾಲದ ಸುಲಿಗೆ ಬಿದ್ದು ಎಲ್ಲವನ್ನೂ ಕಳೆದುಕೊಳ್ಳಬೇಕಾಯಿತು. ನಂತರ ಬೀದಿ ಬದಿಯಲ್ಲಿಯೇ ಊಟ ಅಲ್ಲಿಯೇ ದಿನಕಳೆಯುವ ಸ್ಥಿತಿ ಎದುರಾಯಿತು.   

Written by - Ranjitha R K | Last Updated : May 21, 2025, 02:20 PM IST
  • ಸಮಯ ಇಂದು ಇದ್ದ ಹಾಗೆ ನಾಳೆ ಇರುವುದಿಲ್ಲ.
  • ಯಾವಾಗ ಯಾರ ಟೈಮ್ ಕೆಡುತ್ತದೆಯೂ ಗೊತ್ತೇ ಆಗುವುದಿಲ್ಲ.
  • ಒಂದು ಕಾಲದಲ್ಲಿ ಈ ನಟಿಯದ್ದು ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು.
ಒಂದು ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದು ಸಿನಿ ಜಗತ್ತನ್ನೇ ಆಳಿದ ನಟಿ !ನಂತರ ಸಾಲದ ಸುಳಿಗೆ ಬಿದ್ದು ಬೀದಿ ಬದಿಯಲ್ಲಿ ಜೀವನ ನಡೆಸುವ ಸ್ಥಿತಿ !

Actress Struggle Story : ಸಮಯ ಇಂದು ಇದ್ದ ಹಾಗೆ ನಾಳೆ ಇರುವುದಿಲ್ಲ. ಯಾವಾಗ ಯಾರ ಟೈಮ್ ಕೆಡುತ್ತದೆಯೂ ಗೊತ್ತೇ ಆಗುವುದಿಲ್ಲ. ಏನೂ ಇಲ್ಲದವರು ರಾತ್ರಿ ಹಗಲಾಗುವುದರ ಒಳಗೆ ರಾಜನ ಮಟ್ಟಕ್ಕೆ ಏರುತ್ತಾರೆ. ಅದೇ ಸಮಯ ಕೆಟ್ಟರೆ ರಾಜನ ರೀತಿ ಇದ್ದವರು ಬೀದಿಗೆ ಬೀಳುವುದಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಈ ನಟಿ ಕೂಡಾ ಹಾಗೆಯೇ. ಒಂದು ಕಾಲದಲ್ಲಿ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು. ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ. ಅತಿ ಕಡಿಮೆ ಅವಧಿಯಲ್ಲಿ ಐಶಾರಾಮಿ ಜೀವನ ಕಂಡಾಕೆ.     

Add Zee News as a Preferred Source

ಈ ನಟಿ ತಮ್ಮ ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದಾರೆ. ಭೋಜ್‌ಪುರಿ ಚಿತ್ರರಂಗದಿಂದ ಸಿನಿ ಜೀವನಕ್ಕೆ ಕಾಲಿಟ್ಟವರು ನಂತರ ಕಿರು ಪ್ರವೇಶ ಮಾಡುತ್ತಾರೆ. ರಾತೋರಾತ್ರಿ ಸ್ಟಾರ್ ನಟಿಯಾಗಿ ಮಿಂಚುತ್ತಾರೆ. ತಾನು ಇಷ್ಟಪಟ್ಟ ಹುಡುಗನ ಜೊತೆ ಮದುವೆಯೂ ಆಗುತ್ತದೆ. ಆದರೆ ಈ ಜೀವನ ಅವರ ಪಾಲಿಗೆ ಹೆಚ್ಚು ಸಿನ ಉಳಿಯಲಿಲ್ಲ. ಮೇಲಕ್ಕೇರಿದ ವೇಗದಲ್ಲಿಯೇ ಅವರ ಐಶಾರಾಮ ಧರಶಾಹಿಯಾಗುತ್ತದೆ. ತುತ್ತು ಅನ್ನಕ್ಕೂ ಪರಿತಪಿಸುವ ಸ್ಥಿತಿ ಎದುರಾಗುತ್ತದೆ.  ಮನೆಯಿಲ್ಲದೆ ಬೀದಿ ಬದಿಯಲ್ಲಿ ದಿನ ಕಳೆಯುವ ಸ್ಥಿತಿ ಒದಗಿ ಬರುತ್ತದೆ. 

ಇದನ್ನೂ ಓದಿ :   "ನನ್ನ ಜೊತೆ ಮಲಗಿದರೆ, ನಿನಗೆ ಸಿನಿಮಾದಲ್ಲಿ ಚ್ಯಾನ್ಸ್‌ ಕೊಡಿಸ್ತೀನಿ ಎಂದಿದ್ದ.." ಖ್ಯಾತ ನಟಿಯ ಶಾಕಿಂಗ್‌ ಕಾಮೆಂಟ್ಸ್‌

ನಾವಿಲ್ಲಿ ಹೇಳುತ್ತಿರುವುದು ನಟಿ ರಶ್ಮಿ ದೇಸಾಯಿ ಬಗ್ಗೆ.  ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ರಶ್ಮಿ ದೇಸಾಯಿ ತಮ್ಮ ಜೀವನದ ಹೋರಾಟದ ಬಗ್ಗೆ ಸ್ವತಃ ವಿವರಿಸಿದ್ದಾರೆ. ತನಗೆ ಧಾರಾವಾಹಿಗಳಲ್ಲಿ ಅವಕಾಶ ಸಿಕ್ಕಿ ಧಾರವಾಹಿ ಚೆನ್ನಾಗಿ ನಡೆಯುತ್ತಿದ್ದ ವೇಳೆ ದುಬಾರಿ ಮನೆ ಖರೀದಿಸುತ್ತಾರೆ. ಆದರೆ ಇದ್ದಕ್ಕಿದ್ದಂತೆ  ಧಾರಾವಾಹಿ ಕೊನೆಯಾಗುತ್ತದೆ. ಆಗಲೇ ಎಲ್ಲವೂ ತಲೆಕೆಳಗಾಗುವುದು. ಯಕೆನದ್ರೆ ಆ ಸಂದರ್ಭದಲ್ಲಿ ಹೊಸ ಮನೆಯನ್ನು ಖರೀದಿಸಿದ್ದ ಇವರ ಮೇಲೆ 3.5 ಕೋಟಿ ರೂ. ಸಾಲವಿತ್ತು.  

ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭವಾನೆ ಪಡೆಯುತ್ತಿದ್ದ ನಟಿಯಾಗಿದ್ದರೂ ಸಾಲದ ಸುಳಿಯಲ್ಲಿ ಸಿಲುಕಬೇಕಾಯಿತು. ಹೀಗಾಗಿ 4 ದಿನಗಳ ಕಾಲ ರಸ್ತೆಯಲ್ಲಿಯೇ ಜೀವನ ನಡೆಸುವಂತಾಯಿತು. ಆಗ ನಟಿಯ ಬಳಿ ಆಡಿ A6 ಇತ್ತು. ಹಾಗಾಗಿಮನೆ ಕಳೆದುಕೊಂಡ ರಶ್ಮಿ ದೇಸಾಯಿ ಅದೇ ಕಾರಿನಲ್ಲಿ ರಾತ್ರಿ ಕಳೆಯುತ್ತಿದ್ದರು. ತನ್ನ ಎಲ್ಲಾ ವಸ್ತುಗಳನ್ನು ಮ್ಯಾನೇಜರ್ ಮನೆಯಲ್ಲಿಯೇ  ಇಟ್ಟಿದ್ದರಂತೆ.  

ಇದನ್ನೂ ಓದಿ : ಬ್ಲ್ಯಾಕ್ ಡ್ರೆಸ್‌ನಲ್ಲಿ ರಶ್ಮಿಕಾ ಮಂದಣ್ಣಳ ಮಾದಕ ನೋಟ; ಫೋಟೋ ಸುಸ್ತಾದ ನೋಡಿ ಪಡ್ಡೆ ಹೈಕ್ಳು!!

ದಿನಕ್ಕೆ ಕೇವಲ 20 ರೂಪಾಯಿ ಮಾತ್ರ ವ್ಯಯಿಸುತ್ತಿದ್ದರು : 
ಈ ವೇಳೆ ರಸ್ತೆ ಬದಿಯಲ್ಲಿ ಸಿಗುತ್ತಿದ್ದ ಆಹಾರ ಸೇವಿಸುತ್ತಿದ್ದರು. ಹಣವಿಲ್ಲದ ಕಾರಣ  ದಿನಕ್ಕೆ ಕೇವಲ 20 ರೂ.ಮಾತ್ರ ವ್ಯಯಿಸುತ್ತಿದ್ದರು. ಆ ನಾಲ್ಕು ದಿನಗಳು ತನ್ನ ಜೀವನದ ಅತ್ಯಂತ ಕಠಿಣ ದಿನಗಳು. ಆ ಸಮಯದಲ್ಲಿಯೇ ವಿಚ್ಛೇದನ ಕೂಡಾ ಪಡೆದಿದ್ದ ಕಾರಣ ತಾನು ತೆಗೆದುಕೊಂಡ ನಿರ್ಧಾರಗಳೆಲ್ಲವೂ ತಪ್ಪು ಎಂದೇ ಭಾವಿಸಿದ್ದ ಕುಟುಂಬದವರು ಕೂಡಾ ನಟಿಯ ಕೈ ಬಿಟ್ಟಿದ್ದರು. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News