)
Salman Khan Aishwarya Rai love story: ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ನಟಿ ಐಶ್ವರ್ಯಾ ರೈ ಅವರ ಪ್ರೇಮಕಥೆಯು ಇಲ್ಲಿಯವರೆಗೆ ಅತ್ಯಂತ ಜನಪ್ರಿಯವಾಗಿದೆ. ಇಬ್ಬರೂ ಸ್ವಲ್ಪ ಸಮಯದವರೆಗೆ ಪರಸ್ಪರ ಡೇಟಿಂಗ್ ಮಾಡಿದ್ದರೂ, ಅವರ ಸಂಬಂಧ ಮತ್ತು ನಂತರ ಅವರ ಬ್ರೇಕಪ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಆದರೆ ಸಲ್ಮಾನ್ ಮತ್ತು ಐಶ್ವರ್ಯಾ ಅವರ ಅಭಿಮಾನಿಗಳು ಈ ಪ್ರೇಮಕಥೆಯ ಬಗ್ಗೆ ಪ್ರತಿಯೊಂದು ಸಣ್ಣ ವಿಷಯವನ್ನು ತಿಳಿದುಕೊಳ್ಳಲು ಯಾವಾಗಲೂ ಕುತೂಹಲದಿಂದಿರುತ್ತಾರೆ. ಇತ್ತೀಚೆಗೆ, ಈ ಇಬ್ಬರು ತಾರೆಯರೊಂದಿಗೆ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿರುವ ಹಿರಿಯ ನಟಿ ಹಿಮಾನಿ ಶಿವಪುರಿ ಒಂದು ದೊಡ್ಡ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ಹಿಮಾನಿ ಶಿವಪುರಿ ಇತ್ತೀಚೆಗೆ ರೆಡ್ ಎಫ್ಎಂನ ಪಾಡ್ಕ್ಯಾಸ್ಟ್ನಲ್ಲಿ ಭಾಗವಹಿಸಿದ್ದರು. ಪಾಡ್ಕ್ಯಾಸ್ಟ್ನಲ್ಲಿ, ನಟಿ ತಮ್ಮ ಅನೇಕ ಚಿತ್ರಗಳ ಕಥೆಗಳನ್ನು ಹಂಚಿಕೊಂಡರು. ಈ ಸಮಯದಲ್ಲಿ, ಅವರು ಐಶ್ವರ್ಯಾ ರೈ ಬಗ್ಗೆಯೂ ಹೇಳಿಕೆ ನೀಡಿದರು. ನಾನು ಮೊದಲು ಐಶ್ವರ್ಯಾ ಅವರನ್ನು 'ಆ ಅಬ್ ಲೌಟ್ ಚಲೇನ್' ಸೆಟ್ನಲ್ಲಿ ಭೇಟಿಯಾದೆ.. ಅದಾದ ನಂತರ, ನಾವು 'ಹಮಾರಾ ದಿಲ್ ಆಪ್ಕೆ ಪಾಸ್ ಹೈ' ಮತ್ತು 'ಉಮ್ರಾವ್ ಜಾನ್' ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆʼ.. ಎಂದರು.
"ಒಮ್ಮೆ ನಾನು ಹೈದರಾಬಾದ್ನಲ್ಲಿ ಐಶ್ವರ್ಯಾ ಜೊತೆ ಚಿತ್ರೀಕರಣದಲ್ಲಿದ್ದಾಗ. ಆಗ ಸಲ್ಮಾನ್ ಆಗಾಗ್ಗೆ ಸೆಟ್ಗೆ ಬರುತ್ತಿದ್ದರು. ಆ ಸಮಯದಲ್ಲಿ ಐಶ್ವರ್ಯಾ ಮತ್ತು ಸಲ್ಮಾನ್ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು, ಆದ್ದರಿಂದ ಸಲ್ಮಾನ್ ಪ್ರತಿದಿನ ರಾತ್ರಿ ಬಂದು ಬೆಳಿಗ್ಗೆ ಹೊರಡುತ್ತಿದ್ದರು. ಅಲ್ಲದೆ, ಒಮ್ಮೆ ಐಶ್ವರ್ಯಾ ನಟ ಅಭಿಷೇಕ್ ಬಚ್ಚನ್ ಜೊತೆ ಚಿತ್ರೀಕರಣದಲ್ಲಿದ್ದಾಗ, ಸಲ್ಮಾನ್ ಖಾನ್ ಆಗಲೂ ಸೆಟ್ಗೆ ಬಂದು ಹೋಗಿದ್ದರು.." ಎಂದು ಹಿಮಾನಿ ಹೇಳಿದರು. ಅವರ ಈ ಹೇಳಿಕೆಗಳು ಈಗ ವೈರಲ್ ಆಗುತ್ತಿವೆ.