100 ಸಿನಿಮಾ..‌ 400 ಸೀರಿಯಲ್ಸ್.. ಬಡವರ ಮನೆ ಮಗಳು ಪ್ರಸಿದ್ಧ ನಟಿಯಾಗಿ ಬೆಳೆದ ಕತೆ!

Famous Actress Sad Life: ಈ ನಟಿ ಕಿರುತೆರೆ ಮಾತ್ರವಲ್ಲ ಬೆಳ್ಳಿ ಪರದೆಯ ಮೇಲೂ ಮಿಂಚಿದವರು. ಇವರ ಜಿನ ಜೀವನದ ಕತೆ ಅನೇಕರಿಗೆ ಸ್ಪೂರ್ತಿದಾಯಕವಾಗಿದೆ. 

Written by - Chetana Devarmani | Last Updated : Apr 30, 2025, 05:31 PM IST
  • ಕನ್ನಡ ಕಿರುತೆರೆಯ ಫೇಮಸ್‌ ನಟಿ
  • ಬಡವರ ಮನೆ ಮಗಳು ಪ್ರಸಿದ್ಧ ನಟಿಯಾಗಿ ಬೆಳೆದ ಕತೆ
  • 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ತಾರೆ
100 ಸಿನಿಮಾ..‌ 400 ಸೀರಿಯಲ್ಸ್.. ಬಡವರ ಮನೆ ಮಗಳು ಪ್ರಸಿದ್ಧ ನಟಿಯಾಗಿ ಬೆಳೆದ ಕತೆ!

Actress Jyothi Bantwal: ನಟಿ ಜ್ಯೋತಿ ಬಂಟ್ವಾಳ... ಕನ್ನಡ ಸಿನಿರಂಗದ ಫೇಮಸ್‌ ನಟಿ. ಕಿರುತೆರೆ ಜೊತೆಗೆ ಸಿಲ್ವರ್‌ ಸ್ಕ್ರೀನ್‌ ಮೇಲೂ ಮಿಂಚಿದ ನಟಿ. 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ತಮ್ಮ ನಟನೆಯಿಂದಲೇ ಖ್ಯಾತಿ ಪಡೆದವರು. ಕಿರುತೆರೆಯಲ್ಲಿ 400 ಧಾರಾವಹಿಗಳಲ್ಲಿ ಜ್ಯೋತಿ ಬಂಟ್ವಾಳ ನಟಿಸಿದ್ದಾರೆ. ನಟನೆಯಿಂದ ಸಾಕಷ್ಟು ಹೆಸರು ಮಾಡಿರೋ ನಟಿ ಜ್ಯೋತಿ ಬಂಟ್ವಾಳ ಮದುವೆ ಜೀವನ ಕೂಡ ಸಿನಿಮೀಯ ರೀತಿಯಲ್ಲಿಯೇ ಇದೆ. 7 ವರ್ಷದಿಂದ ಹಿಂದೆ ಬಿದ್ದಿದ್ದ ಹುಡುಗನನ್ನೇ ಪ್ರೀತಿಸಿ ಜ್ಯೋತಿ ಬಂಟ್ವಾಳ ಮದುವೆಯಾಗುತ್ತಾರೆ. 

Add Zee News as a Preferred Source

ಜ್ಯೋತಿ ಬಂಟ್ವಾಳ ಒಂದೊಮ್ಮೆ ದೇವಸ್ಥಾನವೊಂದಕ್ಕೆ ಪೂಜೆಗೆ ಹೋಗಿರುತ್ತಾರೆ. ಆಗ ಅವರ ಪಕ್ಕದಲ್ಲಿ ಓರ್ವ ಹುಡುಗ ಕುಳಿತಿರುತ್ತಾರೆ. ಆ ಹುಡುಗ ಬೇರೆ ಯಾರೋ ಅಲ್ಲ, ಅದೇ ದೇಗುಲದ ಟ್ರಸ್ಟಿಯಾಗಿರುತ್ತಾರೆ. ಆ ಟ್ರಸ್ಟಿ ಜ್ಯೋತಿ ತಾಯಿ ಕಣ್ಣಿಗೆ ಬಿದ್ದಿದ್ದಾರೆ. ಅದೇ ಸಮಯಕ್ಕೆ ನನ್ನ ಮಗಳನ್ನು ಆ ಹುಡುಗನಿಗೆ ಕೊಟ್ಟು ಮದುವೆ ಮಾಡೋಣ ಅಂತ ಜ್ಯೋತಿ ತಾಯಿ ಬಯಸಿರುತ್ತಾರೆ.

ಇದನ್ನೂ ಓದಿ: ಶ್ರೀ ಲೀಲಾ ಬಾಳಲ್ಲಿ ಹೊಸ ವ್ಯಕ್ತಿ ಎಂಟ್ರಿ !ಫೋಟೋ ಶೇರ್ ಮಾಡಿ ಸಿಹಿ ಸುದ್ದಿ ಹಂಚಿಕೊಂಡ ನಟಿ !

ಆ ಹುಡುಗನ ಬಗ್ಗೆ ಎಲ್ಲವನ್ನೂ ತಿಳಿದುಕೊಂಡ ಬಳಿಕ ಜ್ಯೋತಿ ತಾಯಿ ಆ ಹುಡುಗನನ್ನು ಮದುವೆಯಾಗುವಂತೆ ಒತ್ತಾಯ ಮಾಡುತ್ತಾರೆ. ಜ್ಯೋತಿ ಅವರು ಆ ಹುಡುಗನನ್ನು ರಿಜೆಕ್ಟ್ ಮಾಡುತ್ತಾರೆ.

ಜ್ಯೋತಿ ಕಂಡೀಷನ್ ಒಂದನ್ನು ಹಾಕುತ್ತಾರೆ. ಮದುವೆಯಾಗಲು ಒಪ್ಪುವ ಮುನ್ನ ಬೆಂಗಳೂರಿನ ಶ್ರೀರಾಮಪುರದಲ್ಲಿರುವ ಆ ಹುಡುಗನ ಮನೆ ನೋಡಬೇಕು ಎನ್ನುತ್ತಾರೆ. ಆ ನಂತರ ಆ ಹುಡುಗನ  ಮನೆಗೆ ಹೋಗಿ ಬರುತ್ತಾರೆ. ಕೊನೆಗೂ ನಟಿ ಜ್ಯೋತಿ ಬಂಟ್ವಾಳ ಅವರು 7 ವರ್ಷಗಳಿಂದ ಹಿಂದೆ ಬಿದ್ದಿದ್ದ ಆ ದೇಗುಲದಲ್ಲಿ ಕಂಡ ಹುಡುಗನನ್ನು 2001ರಲ್ಲಿ ಮದುವೆ ಆಗಿಯೇ ಬಿಡುತ್ತಾರೆ. 15 ದಿನಗಳಲ್ಲಿ ಮದುವೆ ಫಿಕ್ಸ್ ಆದ ಕಾರಣ ಚಿತ್ರರಂಗದವರನ್ನು ಮದುವೆಗೆ ಜ್ಯೋತಿ ಕರೆದಿರಲಿಲ್ಲವಂತೆ.

ನಟಿ ಜ್ಯೋತಿ ಬಂಟ್ವಾಳ ಪತಿ ಟ್ರಾವೆಲ್ ಬ್ಯುಸಿನೆಸ್ ಕೂಡ ಮಾಡುತ್ತಿದ್ದರಂತೆ. ಅತ್ತೆ ಮನೆಯವರು ಅವಿಭಕ್ತ ಕುಟುಂಬ ಹೊಂದಿದ್ದರಂತೆ. ಇದು ನಟಿ ಜ್ಯೋತಿ ಬಂಟ್ವಾಳ ಅವರಿಗೆ ಖುಷಿಯ ವಿಚಾರವಾಗಿತ್ತಂತೆ. ಜ್ಯೋತಿ ಅವರ ಪತಿಯ ಹೆಸರನ್ನು ಸಂದರ್ಶನಗಳಲ್ಲಿ ಹೇಳಿಲ್ಲ, ಸೋಶಿಯಲ್ ಮೀಡಿಯಾದಲ್ಲಿ ಪತಿಯ ಜೊತೆ ಫೋಟೋ ಹಂಚಿಕೊಂಡಿಲ್ಲ.

ಇದನ್ನೂ ಓದಿ: ನೀನ್ಯಾವ ಸೀಮೆ ಸ್ಟಾರ್ ಎಂದು ಅವಮಾನಿಸಿ ಕೊನೆಗೆ ಆತನಿಂದಲೇ ಸಹಾಯ ಪಡೆದ ನಟ! ಇದಕ್ಕೆ ಹೇಳೋದು ಯಾರನ್ನೂ ಕೀಳಾಗಿ ನೋಡಬಾರ್ದು ಅಂತ..

ನಟಿ ಜ್ಯೋತಿ ಬಂಟ್ವಾಳ ಬಡವರ ಮನೆಯಿಂದ ಬಂದವರು. ಆದರೆ ತಮ್ಮ ನಟನಾ ಸಾಮರ್ಥ್ಯದಿಂದ ಸಿನಿ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಬಡವರ ಮನೆ ಮಗಳು ಇಂದು ಪ್ರಸಿದ್ಧ ನಟಿಯಾಗಿ ಬೆಳೆದು ನಿಂತಿದ್ದಾರೆ. 

ಜ್ಯೋತಿಯವರು ಮೂಲತಃ ದಕ್ಷಿಣ ಕನ್ನಡದವರು. ಇವರ ತಾಯಿ ಕಾರ್ಕಳದವರು ಮತ್ತು ತಂದೆ ಬಂಟ್ವಾಳದವರು. ಜ್ಯೋತಿ ತಂದೆ ದಾವಣಗೆರೆಯಲ್ಲಿ ಎಲ್​ಐಸಿಯಲ್ಲಿ ಕೆಲಸ ಮಾಡುತ್ತಿದ್ದರು. ನಟಿ ಜ್ಯೋತಿ ಅವರಿಗೆ ಎರಡು ವರ್ಷವಿದ್ದಾಗಲೇ ತಂದೆ ತೀರಿ ಹೋಗುತ್ತಾರೆ. ಬಳಿಕ ತಾಯಿ ಜೊತೆ ಪುತ್ತೂರಿಗೆ ಶಿಫ್ಟ್ ಆಗುತ್ತಾರೆ.​ 

ನಟಿ ಜ್ಯೋತಿಯವರ ತಾಯಿ ಬೀಡಿ ಬಂಡಲ್ ಪ್ಯಾಕ್​ ಮಾಡುವ ಕೆಲಸ ಮಾಡಿ ಏಳು ಮಕ್ಕಳನ್ನು ಸಾಕಿದರು. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಯುಗಪುರುಷ, ಗೋಪಿಕೃಷ್ಣ, ಯಾರೇ ನೀನು ಚೆಲುವೆ ಚಿತ್ರದಲ್ಲಿ ನಟಿಸಿ ನಟಿ ಜ್ಯೋತಿ ಖ್ಯಾತಿ ಪಡೆದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಅಮೃತಗಳಿಗೆ ಜ್ಯೋತಿಯವರ ಮೊಟ್ಟ ಮೊದಲ ಸಿನಿಮಾ.  

​ಕಾವ್ಯ ಶೈವ ನಟನೆಯ ಕೆಂಡಸಂಪಿಗೆ ಧಾರಾವಾಹಿಯಲ್ಲಿ ಜ್ಯೋತಿ ಅವರು ನಟ ದೊಡ್ಡಣ್ಣ ಅವರ ಪತ್ನಿ ಪದ್ಮಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗಲೂ ನಟಿ ಜ್ಯೋತಿ ಬಂಟ್ವಾಳ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ನಟಿಸುತ್ತಿದ್ದಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News