)
Karishma Sharma: ಖ್ಯಾತ ಟಿವಿ ಮತ್ತು ಬಾಲಿವುಡ್ ನಟಿ ಕರಿಷ್ಮಾ ಶರ್ಮಾ ಸಾಮಾಜಿಕ ಮಾಧ್ಯಮದಲ್ಲಿ ತಮಗೆ ಸಂಭವಿಸಿದ ಆಘಾತಕಾರಿ ಘಟನೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮುಂಬೈ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತಕ್ಕೀಡಾಗಿರುವುದಾಗಿ ಕರಿಷ್ಮಾ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಸಿಕ್ಕಿರುವ ಮಾಹಿತಿಯ ಪ್ರಕಾರ, ಕರಿಷ್ಮಾ ಪಶ್ಚಿಮ ರೈಲ್ವೆ ಮಾರ್ಗದಲ್ಲಿ ಸ್ನೇಹಿತರೊಂದಿಗೆ ಪ್ರಯಾಣಿಸುತ್ತಿದ್ದರು. ಕರಿಷ್ಮಾ ರೈಲು ಹತ್ತಿದರು. ಆದರೆ ಆ ಕ್ಷಣದಲ್ಲಿ ರೈಲಿನ ವೇಗ ಹೆಚ್ಚಾಯಿತು. ಇದರಿಂದಾಗಿ ಅವರ ಸ್ನೇಹಿತರು ಲೋಕಲ್ ರೈಲನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಇದರಿಂದಾಗಿ, ಕರಿಷ್ಮಾ ಭಯಭೀತರಾಗಿದ್ದು, ಭಯದಿಂದ ಚಲಿಸುತ್ತಿದ್ದ ಲೋಕಲ್ ರೈಲಿನಿಂದ ಹೊರಗೆ ಹಾರಿದ್ದಾರೆ. ಇದರಿಂದಾಗಿ, ನಟಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಅಪಘಾತದಲ್ಲಿ ಕರಿಷ್ಮಾ ಗಾಯಗೊಂಡಿದ್ದಾರೆ. ಪ್ರಸ್ತುತ, ನಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ನಟಿಯೇ ಸ್ವತಃ ತಮ್ಮ ಇನ್ಸ್ಟಾ ಸ್ಟೋರಿಯ ಮೂಲಕ ನಡೆದ ಘಟನೆಯನ್ನು ವಿವರಿಸಿದ್ದಾರೆ.
"ನಿನ್ನೆ ಚರ್ಚ್ಗೇಟ್ಗೆ ಶೂಟಿಂಗ್ಗಾಗಿ ಹೋಗಲು ಸೀರೆ ಉಡಲು ನಿರ್ಧರಿಸಿದೆ. ನಾನು ಯೋಜಿಸಿದಂತೆ ರೈಲು ಹತ್ತಿದೆ. ರೈಲಿನ ವೇಗ ಹೆಚ್ಚಾಯಿತು. ಇದರಿಂದಾಗಿ ನನ್ನ ಜೊತೆಗಿದ್ದ ನನ್ನ ಸ್ನೇಹಿತರು ರೈಲು ಹಿಡಿಯಲು ಸಾಧ್ಯವಾಗಲಿಲ್ಲ. ಇದರಿಂದಾಗಿ ನಾನು ಭಯಗೊಂಡು, ರೈಲಿನಿಂದ ಜಿಗಿಎ, ನನ್ನ ತಲೆಗೆ ಪೆಟ್ಟಾಯ್ತು" ಎಂದು ಟಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಹಂಚಿಕೊಂಡಿದ್ದಾರೆ.
"ನನ್ನನ್ನು 1 ದಿನ ವೈದ್ಯರ ಮೇಲ್ವಿಚಾರಣೆಯಲ್ಲಿ ಇರಿಸಲಾಗಿತ್ತು. ನಿನ್ನೆಯಿಂದ ನನಗೆ ತುಂಬಾ ನೋವು ಇದೆ. ಆದರೆ ನಾನು ಧೈರ್ಯಶಾಲಿ. ದಯವಿಟ್ಟು ಇದರಿಂದ ಸಾಧ್ಯವಾದಷ್ಟು ಬೇಗ ಚೇತರಿಸಿಕೊಳ್ಳಲು ಪ್ರಾರ್ಥಿಸಿ" ಎಂದು ನಟಿ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಟಿಗೆ ಸಂಭವಿಸಿದ ಅಪಘಾತ ಅವರ ಅಭಿಮಾನಿಗಳಿಗೂ ಆಘಾತವನ್ನುಂಟು ಮಾಡಿದೆ. ತಮ್ಮ ಪ್ರೀತಿಯ ನಟಿ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಕರಿಷ್ಮಾ ಅವರ ಸ್ನೇಹಿತೆ ಆಸ್ಪತ್ರೆಯಲ್ಲಿ ನಟಿಯ ಫೋಟೋವನ್ನು ಪೋಸ್ಟ್ ಮಾಡಿ ಶೀರ್ಷಿಕೆಯಲ್ಲಿ, "ಕರಿಷ್ಮಾಗೆ ಇಂತಹದ್ದೊಂದು ಘಟನೆ ಸಂಭವಿಸಿದೆ ಎಂದು ನನಗೆ ನಂಬಲು ಸಾಧ್ಯವೇ ಆಗುತ್ತಿಲ್ಲ. ನಾವು ಕರಿಷ್ಮಾ ಅವರನ್ನು ಕರೆತಂದು ಆಸ್ಪತ್ರೆಗೆ ಸೇರಿಸಿದೆವು, ವೈದ್ಯರು ಇನ್ನೂ ಹೆಚ್ಚಿನ ಚಿಕಿತ್ಸೆ ನೀಡುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ, ಸದ್ಯಕ್ಕೆ ಈ ಸುದ್ದಿ ಬಾಲಿವುಡ್ ಮಂದಿಗೆ ಶಾಕ್ ಕೊಟ್ಟಿರುವುದಂತೂ ನಿಜ.