ಬಾಲಿವುಡ್ ನಟಿ ಕತ್ರಿನಾ ಕೈಫ್ ಜೊತೆ ಪ್ರೇಮ ಕಹಾನಿ...! ಏನಂತಾರೆ ವಿಕ್ಕಿ ಕೌಶಾಲ್ ?

ಉರಿ: ದಿ ಸರ್ಜಿಕಲ್ ಸ್ಟ್ರೈಕ್  ನಲ್ಲಿ ನಟಿಸಿದ್ದ ವಿಕ್ಕಿ ಕೌಶಾಲ್ ಅವರು ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರೊಂದಿಗಿನ ಸಂಬಂಧದ ಬಗ್ಗೆ ವದಂತಿಗಳು ಆಗಾಗ ಕೇಳಿ ಬರುತ್ತಲೇ ಇವೆ.ಈಗ ಈ ವಿಚಾರವಾಗಿ ಮುಕ್ತವಾಗಿ ಮಾತನಾಡಿರುವ ವಿಕ್ಕಿ ಕೌಶಾಲ್ 'ಸ್ಪಷ್ಟೀಕರಣದ ಯಾವುದೇ ವ್ಯಾಪ್ತಿ ಇದೆ ಎಂದು ನನಗೆ ಅನಿಸುತ್ತಿಲ್ಲ. ನನ್ನ ವೈಯಕ್ತಿಕ ಜೀವನದ ಬಗ್ಗೆ ನಾನು ತುಂಬಾ ಮುಕ್ತವಾಗಿ ಹೇಳಿದ್ದೇನೆ, ಏಕೆಂದರೆ ನಾನು ಸುಳ್ಳು ಹೇಳಲಾರೆ, ಅಂತಹ ಯಾವುದೇ ಕಥೆಯಿಲ್ಲ 'ಎಂದು ಹೇಳುವ ಮೂಲಕ ಈಗ ಎಲ್ಲ ವದಂತಿಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

Last Updated : Feb 9, 2020, 02:33 PM IST
ಬಾಲಿವುಡ್ ನಟಿ ಕತ್ರಿನಾ ಕೈಫ್ ಜೊತೆ ಪ್ರೇಮ ಕಹಾನಿ...! ಏನಂತಾರೆ ವಿಕ್ಕಿ ಕೌಶಾಲ್ ? title=
file photo

ನವದೆಹಲಿ: ಉರಿ: ದಿ ಸರ್ಜಿಕಲ್ ಸ್ಟ್ರೈಕ್  ನಲ್ಲಿ ನಟಿಸಿದ್ದ ವಿಕ್ಕಿ ಕೌಶಾಲ್ ಅವರು ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರೊಂದಿಗಿನ ಸಂಬಂಧದ ಬಗ್ಗೆ ವದಂತಿಗಳು ಆಗಾಗ ಕೇಳಿ ಬರುತ್ತಲೇ ಇವೆ.ಈಗ ಈ ವಿಚಾರವಾಗಿ ಮುಕ್ತವಾಗಿ ಮಾತನಾಡಿರುವ ವಿಕ್ಕಿ ಕೌಶಾಲ್ 'ಸ್ಪಷ್ಟೀಕರಣದ ಯಾವುದೇ ವ್ಯಾಪ್ತಿ ಇದೆ ಎಂದು ನನಗೆ ಅನಿಸುತ್ತಿಲ್ಲ. ನನ್ನ ವೈಯಕ್ತಿಕ ಜೀವನದ ಬಗ್ಗೆ ನಾನು ತುಂಬಾ ಮುಕ್ತವಾಗಿ ಹೇಳಿದ್ದೇನೆ, ಏಕೆಂದರೆ ನಾನು ಸುಳ್ಳು ಹೇಳಲಾರೆ, ಅಂತಹ ಯಾವುದೇ ಕಥೆಯಿಲ್ಲ 'ಎಂದು ಹೇಳುವ ಮೂಲಕ ಈಗ ಎಲ್ಲ ವದಂತಿಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ದೀಪಾವಳಿ ಹಬ್ಬದ ಪ್ರಯುಕ್ತ ಸೇರಿದ್ದ ಪಾರ್ಟಿಯಲ್ಲಿ ವಿಕ್ಕಿ ಮತ್ತು ಕತ್ರಿನಾ ಅವರ ಪ್ರಣಯದ ಬಗ್ಗೆ ವದಂತಿಗಳು ಪ್ರಾರಂಭವಾದವು. ಇದುವರೆಗೆ ಕತ್ರಿನಾ ಕೈಫ್  ಮಾತ್ರ ಈ ವದಂತಿಗಳ ಬಗ್ಗೆ ಯಾವುದೇ ಮಾತನ್ನಾಡಿಲ್ಲ ಎನ್ನಲಾಗಿದೆ.ಕರಣ್ ಜೋಹರ್ ಅವರ ಟಾಕ್ ಶೋ ಕಾಫಿ ವಿಥ್ ಕರಣ್ 6 ರ ಎಪಿಸೋಡ್ ಸಮಯದಲ್ಲಿ, ಕತ್ರಿನಾ ಕೈಫ್ ಅವರು 'ವಿಕ್ಕಿ ಕೌಶಲ್ ಅವರೊಂದಿಗೆ ಪರದೆಯ ಮೇಲೆ ತಾವು ಚೆನ್ನಾಗಿ ಕಾಣುವುದಾಗಿ' ಹೇಳಿದರು. ಕಾರ್ಯಕ್ರಮದ ಸಮಯದಲ್ಲಿ ಕತ್ರಿನಾ ಅವರ ಹೇಳಿಕೆಯ ಬಗ್ಗೆ ತಿಳಿಸಿದಾಗ ವಿಕ್ಕಿ ಕೌಶಲ್ ಮಂಕಾದಂತೆ ಕಾಣಿಸಿಕೊಂಡರು.

ವೃತ್ತಿಪರ ದೃಷ್ಟಿಯಿಂದ, ಕತ್ರಿನಾ ಕೈಫ್ ಕೊನೆಯ ಬಾರಿಗೆ ಅಲಿ ಅಬ್ಬಾಸ್ ಜಾಫರ್ ಅವರ 2018 ರ ಭರತ್ ಚಿತ್ರದಲ್ಲಿ ಕಾಣಿಸಿಕೊಂಡರು, ಇದರಲ್ಲಿ ಸಲ್ಮಾನ್ ಖಾನ್ ಮತ್ತು ದಿಶಾ ಪಟಾನಿ ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಕ್ಷಯ್ ಕುಮಾರ್ ಅವರೊಂದಿಗೆ ರೋಹಿತ್ ಶೆಟ್ಟಿಯ ಸೂರ್ಯವಂಶಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಆದಿತ್ಯ ಧಾರ್ ಅವರ ಉರಿ: ದಿ ಸರ್ಜಿಕಲ್ ಸ್ಟ್ರೈಕ್  ಚಿತ್ರದಲ್ಲಿ ಕಾಣಸಿಕೊಂಡ ವಿಕ್ಕಿ ಕೌಶಲ್, ಇದಕ್ಕಾಗಿ ಅವರು ಅತ್ಯುತ್ತಮ ನಟನಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮುಂದಿನ ಚಿತ್ರ ಭೂತ್ ಪಾರ್ಟ್ ಒನ್: ದಿ ಹಾಂಟೆಡ್ ಶಿಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Trending News