)
Mahalakshmi ravindran Life Story: ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿರುವ ಟಿವಿ ಆ್ಯಂಕರ್ ಮತ್ತು ನಟಿ ಮಹಾಲಕ್ಷ್ಮಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ. ಈ ಹಿಂದೆ, ನಟಿ ಚಲನಚಿತ್ರ ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರನ್ನು ವಿವಾಹವಾಗಿ ಸುದ್ದಿಯಲ್ಲಿದ್ದರು.. ಇವರಿಬ್ಬರನ್ನು ಒಟ್ಟಿಗೆ ನೋಡಿದ ಅನೇಕರು ಶಾಕ್ ಆಗಿ.. ಇದು ಚಿತ್ರದ ಶೂಟಿಂಗ್ ಎಂದು ಭಾವಿಸಿದ್ದರು, ಆದರೆ ನಂತರ ರವೀಂದ್ರನ್ ಮತ್ತು ಮಹಾಲಕ್ಷ್ಮಿ ಅವರೇ ಮದುವೆಯನ್ನು ಖಚಿತಪಡಿಸಿದರು.
ಮಹಾಲಕ್ಷ್ಮಿ 21 ಮಾರ್ಚ್ 1990 ರಂದು ಜನಿಸಿದರು.. ಅವರ ವಯಸ್ಸು 34 ವರ್ಷಗಳು. ಆಕೆಯ ಎರಡನೇ ಪತಿ ರವೀಂದ್ರನ್ ಚಂದ್ರಶೇಖರನ್ 1 ಜೂನ್ 1970 ರಂದು ಜನಿಸಿದರು.. ಇವರ ವಯಸ್ಸು 54 ವರ್ಷಗಳು. ಇಬ್ಬರ ವಯಸ್ಸಿನಲ್ಲೂ 20 ವರ್ಷಗಳ ವ್ಯತ್ಯಾಸವಿದೆ.
ಟಿವಿ ನಿರೂಪಕಿ ಮಹಾಲಕ್ಷ್ಮಿ ನಿರ್ಮಾಪಕ ರವೀದ್ರನ್ ಚಂದ್ರಶೇಖರನ್ ಅವರಿಗಿಂತ 20 ವರ್ಷ ಚಿಕ್ಕವರು. ಆದರೂ ಪ್ರೀತಿಗೆ ವಯಸ್ಸಿನ ನಿರ್ಬಂಧಗಳಿಲ್ಲ ಎನ್ನುವುದನ್ನು ತೋರಿಸಿದರು.. ಈ ಹಿಂದೆಯೂ ಇಂತಹ ಹಲವಾರು ಜೋಡಿಗಳು ಮದುವೆಯಂತಹ ಪವಿತ್ರ ಸಂಬಂಧದಲ್ಲಿ ಬಂಧಿತರಾಗಿದ್ದಾರೆ.
ಮಹಾಲಕ್ಷ್ಮಿ ಅವರಿಗೆ ಎಂಟು ವರ್ಷದ ಮಗನಿರುವಾಗಲೇ ಮೊದಲ ಪತಿಯಿಂದ ವಿಚ್ಛೇದನ ಪಡೆದಿದು ಒಂಟಿ ಜೀವನ ನಡೆಸುತ್ತಿದ್ದರು.. ಇವರ ಮೊದಲ ಪತಿ ನಟ ಅನಿಲ್ ಕುಮಾರ್.. ಅವರಿಗೆ ಒಬ್ಬ ಮಗನಿದ್ದಾನೆ.