Mahira Khan faced physical harassment: ಪಾಕಿಸ್ತಾನದ ಖ್ಯಾತ ನಟಿ ಮಹಿರಾ ಖಾನ್ ತಮ್ಮದೇ ಭದ್ರತಾ ಸಿಬ್ಬಂದಿಯಿಂದ ಕಿರುಕುಳ ಅನುಭವಿಸಿದ್ದಾರೆ ಎಂದು ವರದಿಯಾಗಿದೆ. ಲಂಡನ್‌ನ ಇಲ್ಫೋರ್ಡ್‌ನಲ್ಲಿ ಇತ್ತೀಚೆಗೆ ನಡೆದ ಲವ್ ಗುರು ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಪಾಕಿಸ್ತಾನಿ ನಟ ಹುಮಾಯೂನ್ ಸಯೀದ್ ಅವರು ಮಹಿರಾ ಖಾನ್ ಅವರನ್ನು ರಕ್ಷಿಸಿರುವ ಹೊಸ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಜನಸಂದಣಿಯನ್ನು ನಿಯಂತ್ರಿಸಲು ನಿಂತಿದ್ದ ಭದ್ರತಾ ಸಿಬ್ಬಂದಿ ಮಹಿರಾ ಖಾನ್ ಅವರ ತೋಳನ್ನು ಬಿಗಿಯಾಗಿ ಹಿಡಿದು ಎಳೆಯುತ್ತಾರೆ. ಈ ವೇಳೆ ಗಾಬರಿಗೊಂಡ ನಟಿ ಮಹಿರಾ ಖಾನ್ ಅವರು ಹುಮಾಯೂನ್ ಸಯೀದ್ ಅವರನ್ನು ಬೇಗನೆ ಕರೆಯುವುದನ್ನು ಕಾಣಬಹುದು. ನಟಿ ಮಹಿರಾ ಖಾನ್ ತಮ್ಮ ನೂತನ ಚಿತ್ರ Love Guru ಪ್ರಚಾರಕ್ಕಾಗಿ ಲಂಡನ್ ಗೆ ತೆರಳಿದ್ದ ವೇಳೆ ಅವರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
ಈ ವಿಡಿಯೋ ವೈರಲ್ ಆದ ನಂತರ ಮಹಿರಾ ಖಾನ್ ಮೇಲೆ ಲೈಂಗಿಕ ಕಿರುಕುಳ ನಡೆದಿದೆ ಎಂದು ಹೇಳಲಾಗತ್ತಿದೆ. ಭದ್ರತಾ ಸಿಬ್ಬಂದಿಯೇ ಮಹಿರಾ ಖಾನ್ ದೇಹ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಇದನ್ನೂ ಓದಿ: ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ನಲ್ಲಿ ಹೊಸ ಗರ್ಲ್‌ಫ್ರೆಂಡ್ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ ಶಿಖರ್ ಧವನ್
ದೃಶ್ಯಗಳಲ್ಲಿ, ಜನಸಂದಣಿಯನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಮಹಿರಾ ಖಾನ್ ಅವರ ತೋಳನ್ನು ಬಿಗಿಯಾಗಿ ಹಿಡಿದು ಎಳೆಯುವುದನ್ನು ಕಾಣಬಹುದು. ಇದರಿಂದ ಮಹಿರಾ ದುಃಖಿತರಾಗಿರುವಂತೆ ಕಾಣುತ್ತಾರೆ. ನಟಿ ಹುಮಾಯೂನ್ ಸಯೀದ್ ಅವರನ್ನು ರಕ್ಷಿಸುತ್ತಾರೆ. ಅವರು ತಕ್ಷಣ ಮುಂದೆ ಹೆಜ್ಜೆ ಹಾಕಿ, ಸಿಬ್ಬಂದಿಗೆ ಹಿಂದೆ ಸರಿಯುವಂತೆ ಸೂಚಿಸುತ್ತಾರೆ. ನಿಧಾನವಾಗಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಾರೆ.
ಇಂಡೋ-ಪಾಕ್ ಸೂಪರ್‌ಮಾರ್ಕೆಟ್‌ನಲ್ಲಿ ಪ್ರಚಾರದ ಪ್ರದರ್ಶನದ ಸಮಯದಲ್ಲಿ ಈ ಘಟನೆ ನಡೆದಿದ್ದು, ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಪಾಕಿಸ್ತಾನಿ ಮಾಧ್ಯಮ ದಿ ಕರೆಂಟ್‌ನ ಹಿಂದಿನ ವರದಿಗಳ ಪ್ರಕಾರ, ಮಹಿರಾ ಖಾನ್ ಅವರಿಗೆ ಮೂವರು ವ್ಯಕ್ತಿಗಳು ದೈಹಿಕವಾಗಿ ಕಿರುಕುಳ ನೀಡಿದ್ದಾರೆ. ಇದರಲ್ಲಿ ಅಭಿಮಾನಿಗಳತ್ತ ಕೈ ಬೀಸಲು ಟೆರೇಸ್ ತಲುಪಲು ಪ್ರಯತ್ನಿಸುತ್ತಿದ್ದಾಗ ಜನಸಮೂಹದಲ್ಲಿದ್ದ ಇಬ್ಬರು ಅವರ ಜೊತೆ ಅನುಚಿತವಾಗ ವರ್ತಿಸಿದರು ಎನ್ನಲಾಗುತ್ತದೆ.
ಚಿತ್ರದ ನಾಯಕ ಹುಮಾಯೂನ್ ಸಯೀದ್ ಕೂಡ ಅವರೊಂದಿಗೆ ಹಾಜರಿದ್ದರು. ಈ ವೇಳೆ ಆಕ್ರೋಶಗೊಂಡ ನಟಿ ಜನಸಂದಣಿ ನಡುವೆ ಏನೂ ಮಾಡಲಾಗದೇ ಚಿತ್ರಮಂದಿರದೊಳಗೆ ಹೋದರು ಎನ್ನಲಾಗಿದೆ. ನೂರಾರು ಜನರು ಸೇರಿದ್ದ ಕಾರಣ ಜನಸಂದಣಿ ಇತ್ತು. ಈ ನಡುವೆಯೇ ಮಹಿರಾ ಖಾನ್ ಗೆ ಅವರ ಭದ್ರತಾ ಸಿಬ್ಬಂದಿಯೇ ದೇಹ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.
ಮಹಿರಾ ಖಾನ್ ಅವರನ್ನು ಜನರಿಂದ ರಕ್ಷಿಸುವ ನೆಪದಲ್ಲಿ ಭದ್ರತಾ ಸಿಬ್ಬಂದಿ ಅವರ ಮೈಮುಟ್ಟಿ ವಿಕೃತಿ ಮೆರೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜನಸಂದಣಿಯ ನಡುವೆ ಮಹಿರಾ ಸಿಕ್ಕಿಕೊಂಡ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಸಲ್ಮಾನ್ ಇಕ್ಬಾಲ್ ಫಿಲ್ಮ್ಸ್, ಎಆರ್‌ವೈ ಫಿಲ್ಮ್ಸ್ ಮತ್ತು ಸಿಕ್ಸ್ ಸಿಗ್ಮಾ ಪ್ಲಸ್ ನಿರ್ಮಿಸಿದ ಪ್ರಣಯ ಹಾಸ್ಯ ಚಿತ್ರ ಲವ್ ಗುರು ಜೂನ್ 6 ರಂದು ಈದ್-ಉಲ್-ಅಧಾ ಹಬ್ಬದ ಸಮಯಕ್ಕೆ ಸರಿಯಾಗಿ ಬಿಡುಗಡೆಯಾಗಲಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









