ಈ ಸ್ಟಾರ್‌ ನಟಿ ಬೇಕು ಅಂದ್ರೆ 50 ಲಕ್ಷ ರೂ..!? ಖ್ಯಾತ ಹೀರೋಯಿನ್‌ ಮ್ಯಾನೇಜರ್ ಅಸಲಿ ಮುಖ ಬಹಿರಂಗ

ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಅವರ ಕಾಲ್‌ಶೀಟ್‌ ಕೊಡಿಸುವುದಾಗಿ ನಂಬಿಸಿ, ನಿರ್ಮಾಪಕರಿಗೆ ಐವತ್ತು ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ವಂಚನೆಗಳು ಹೆಚ್ಚಾಗಿ ನಡೆಯುತ್ತಿವೆ. ರಶ್ಮಿಕಾ ಮಂದಣ್ಣ ಹೆಸರಲ್ಲೂ ಇದೇ ರೀತಿಯ ಹಗರಣಗಳು ನಡೆದಿವೆ. ಈಗ ಚಿತ್ರ ನಿರ್ಮಾಪಕ ಲಕ್ಷ್ಮಣ್ ಚಾರಿ ಮ್ಯಾನೇಜರ್‌ ಎಲ್ಲಾ ರೆಡ್ಡಿಯಿಂದ ಮೋಸ ಹೋಗಿದ್ದಾರೆ.

Written by - Krishna N K | Last Updated : Jun 5, 2025, 02:08 PM IST
    • ಅನುಷ್ಕಾ ಶೆಟ್ಟಿ ಅವರ ಕಾಲ್‌ಶೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ
    • ನಿರ್ಮಾಪಕರಿಗೆ ಐವತ್ತು ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
    • ಚಿತ್ರ ನಿರ್ಮಾಪಕ ಲಕ್ಷ್ಮಣ್ ಚಾರಿ ಮ್ಯಾನೇಜರ್‌ ಎಲ್ಲಾ ರೆಡ್ಡಿಯಿಂದ ಮೋಸ ಹೋಗಿದ್ದಾರೆ.
ಈ ಸ್ಟಾರ್‌ ನಟಿ ಬೇಕು ಅಂದ್ರೆ 50 ಲಕ್ಷ ರೂ..!? ಖ್ಯಾತ ಹೀರೋಯಿನ್‌ ಮ್ಯಾನೇಜರ್ ಅಸಲಿ ಮುಖ ಬಹಿರಂಗ

Anushka Shetty : ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಅವರ ಕಾಲ್‌ಶೀಟ್‌ ಕೊಡಿಸುವುದಾಗಿ ನಂಬಿಸಿ, ನಿರ್ಮಾಪಕರಿಗೆ ಐವತ್ತು ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ವಂಚನೆಗಳು ಹೆಚ್ಚಾಗಿ ನಡೆಯುತ್ತಿವೆ. ರಶ್ಮಿಕಾ ಮಂದಣ್ಣ ಹೆಸರಲ್ಲೂ ಇದೇ ರೀತಿಯ ಹಗರಣಗಳು ನಡೆದಿವೆ. ಈಗ ಚಿತ್ರ ನಿರ್ಮಾಪಕ ಲಕ್ಷ್ಮಣ್ ಚಾರಿ ಮ್ಯಾನೇಜರ್‌ ಎಲ್ಲಾ ರೆಡ್ಡಿಯಿಂದ ಮೋಸ ಹೋಗಿದ್ದಾರೆ.

Add Zee News as a Preferred Source

ವಿಶ್ವಕರ್ಮ ಕ್ರಿಯೇಷನ್ಸ್ ಮುಖ್ಯಸ್ಥ ಹಾಗೂ ನಿರ್ಮಾಪಕ ಲಕ್ಷ್ಮಣ್ ಚಾರಿ ಅವರಿಂದ 51 ಲಕ್ಷವನ್ನು ಮ್ಯಾನೇಜರ್‌ ಹಣ ಪಡೆದಿದ್ದಾರೆ ಎನ್ನಲಾಗಿದೆ. ಅನುಷ್ಕಾ ಮತ್ತು ಸಂಗೀತ ನಿರ್ದೇಶಕ ಮಣಿ ಶರ್ಮಾ ಡೇಟ್ಸ್ ಕೊಡಿಸುವುದಾಗಿ ಹೇಳಿ ನಿರ್ಮಾಪಕರಿಗೆ ಮೋಸ ಮಾಡಿದ್ದಾರೆ. ಕೊನೆಗೆ ತಾವು ಮೋಸ ಹೋಗಿರುವುದನ್ನು ಅರಿತ ನಿರ್ಮಾಪಕರು ಬಂಜಾರ ಹಿಲ್ಸ್ ಪೊಲೀಸರ ಮೊರೆ ಹೋಗಿದ್ದಾರೆ.

ಇದನ್ನೂ ಓದಿ:ಬಾಲಿವುಡ್ ಗೆ ಇಬ್ಬರು ಸೂಪರ್ ಸ್ಟಾರ್ ನಟ-ನಟಿಯರನ್ನು ಪರಿಚಯಿಸಿದ ಈ ಕರ್ನಾಟಕದ ಹಳ್ಳಿಯ ಬಗ್ಗೆ ನಿಮಗೆಷ್ಟು ಗೊತ್ತು?

ಅಲ್ಲದೆ, ಹಲವು ಬಾರಿ ಬೆಂಗಳೂರಿಗೆ ಕರೆದೊಯ್ದಿದ್ದು, ಅನುಷ್ಕಾ ಅವರನ್ನು ಪರಿಚಯಿಸುವುದಾಗಿ ಹೇಳಿ, ಮೋತಿ ಮಹಲ್ ಹೋಟೆಲ್‌ನಲ್ಲಿ ಹಲವರಿಗೆ ಪರಿಚಯ ಮಾಡಿಕೊಟ್ಟಿದ್ದರಂತೆ. ಕೊನೆಗೆ ಎಲ್ಲಾ ರೆಡ್ಡಿಯಿಂದ ತಮಗೆ ಮೋಸವಾಗಿದೆ ಎಂದು ತಿಳಿದ ನಿರ್ಮಾಪಕರ ನ್ಯಾಯಕ್ಕಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ಈ ಹಿಂದೆ ಇದೇ ವಿಚಾರವಾಗಿ ಲಕ್ಷ್ಮಣ್‌ ಚಾರಿ ನಿರ್ಮಾಪಕರ ಮಂಡಳಿಗೆ ದೂರು ನೀಡಿದ್ದರು. ಎಲ್ಲ ರೆಡ್ಡಿಗೆ ನಿರ್ಮಾಪಕರ ಒಕ್ಕೂಟದ ಅಧ್ಯಕ್ಷರು ಛೀಮಾರಿ ಹಾಕಿದ್ದರು. ಆದರೂ ಹಣ ವಾಪಸ್ ಬರದ ಕಾರಣ ಬಂಜಾರ ಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಸುದ್ದಿ ಹಳೆಯದಾದರೂ ಸಹ ಇದೀಗ ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

 

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News