)
Manjula Death Mystery : ಮಂಜುಳಾ... ಕನ್ನಡದ ಪ್ರಖ್ಯಾತ ನಟಿ. ಒಂದು ಕಾಲದಲ್ಲಿ ಸ್ಯಾಂಡಲ್ವುಡ್ ಆಳಿದ ಚೆಲುವೆ. 1986 ಸೆಪ್ಟೆಂಬರ್ 12 ರಂದು ಮಂಜುಳಾ ವಿಧಿವಶರಾದರು. ಮಂಜುಳಾ ನಿಧನರಾಗುವ ಒಂದು ವಾರ ಮೊದಲು ಮೈಗೆ ಬೆಂಕಿ ತಗುಲಿ ಆಸ್ಪತ್ರೆ ಸೇರಿದ್ದರು. ಬೆಂಕಿಯಲ್ಲಿ ಬೆಂದು ಹೋಗಿದ್ದ ಮಂಜುಳಾ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು ಎಂಬುದು ಇಂದಿಗೂ ಕನ್ನಡ ಚಿತ್ರರಂಗದಲ್ಲಿ ಮಾಸದ ಗಾಯ.
ನಟಿ ಮಂಜುಳಾ ಚಿಕ್ಕ ವಯಸ್ಸಿಗೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ರಾಜ್ಕುಮಾರ್, ವಿಷ್ಣುವರ್ಧನ್, ಶ್ರೀನಾಥ್ ಸೇರಿದಂತೆ ಮುಂತಾದ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದರು. ಸ್ಟಾರ್ ನಟಿ ಮಂಜುಳಾ ಅಂದು ಬಹುಬೇಡಿಕೆಯ ನಾಯಕಿ ಆಗಿದ್ದರು.
ಕೇವಲ 32ನೇ ವಯಸ್ಸಿನಲ್ಲಿಯೇ ಮಂಜುಳಾ ಪ್ರಾಣ ಬಿಟ್ಟರು. ನಟಿ ಮಂಜುಳಾ ಸಾವಿನ ರಹಸ್ಯ ಇಂದಿಗೂ ನಿಗೂಢವಾಗಿಯೇ ಉಳಿದು ಹೋಗಿದೆ. ನಟಿ ಮಂಜುಳಾಗೆ ಮದುವೆಯಾಗಿ ಒಬ್ಬ ಮಗ ಕೂಡ ಇದ್ದ ಎಂಬ ವದಂತಿಯೊಂದು ಆ ಕಾಲದಲ್ಲಿ ಇತ್ತು.
ತಮಿಳುನಾಡಿನ ಎಂ ಕರುಣಾನಿಧಿ ಅವರ ಅಕ್ಕನ ಮಗ ಅಮೃತಂ ಜತೆ ನಟಿ ಮಂಜುಳಾ ಮದುವೆ ಆಗಿದ್ದರು ಎಂಬ ವದಂತಿ ಇಂದಿಗೂ ಜೀವಂತ. ಆದರೆ ಇದರ ಸತ್ಯಾಸತ್ಯತೆ ಯಾರಿಗೂ ತಿಳಿದಿಲ್ಲ. ಆದರೆ ಇದು ನಿಜವೋ ಸುಳ್ಳೋ ಇಂದಿಗೂ ರಹಸ್ಯವಾಗಿಯೇ ಉಳಿದುಬಿಟ್ಟಿದೆ. ಮದುವೆ ಜೀವನದಲ್ಲಿ ಗಂಡ-ಹೆಂಡತಿ ನಡುವೆ ಜಗಳ, ಭಿನ್ನಾಭಿಪ್ರಾಯ ಶುರುವಾಗಿತ್ತು. ಇದೇ ಕಾರಣಕ್ಕೆ ಅಮೃತಂ ಮಂಜುಳಾರನ್ನು ಬಿಟ್ಟು ಶಾಶ್ವತವಾಗಿ ಮದ್ರಾಸ್ ಸೇರಿಕೊಂಡಿದ್ದರು ಎಂಬ ಬಹು ದೊಡ್ಡ ವದಂತಿ ಇದೆ. (ಗಮನಿಸಿ:ಇದು ವದಂತಿಯಾಗಿದ್ದು, ಈ ವಿಚಾರದ ಸತ್ಯಾಸತ್ಯತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸಲ್ಲ. ಯಾವ ರೀತಿಯಿಂದಲೂ ಇದಕ್ಕೆ ನಾವು ಪುಷ್ಠಿ ನೀಡುವುದಿಲ್ಲ.)
ಬಳಿಕ ನಟಿ ಮಂಜುಳಾ ಒಬ್ಬಂಟಿಯಾದರು. ಆ ನಂತರ ಚಾಮರಾಜನಗರದ ಹುಡುಗನೊಬ್ಬನ ಜೊತೆ ಪ್ರೇಮವಾಯಿತು. ಆದರೆ ಆತ ಮದುವೆಯಾಗಲು ನಿರಾಕರಿಸಿದ್ದ ಎಂದು ಹೇಳಲಾಗುತ್ತದೆ. ಪ್ರೀತಿಸಿದವನ ಮೋಸದಿಂದ ಬೇಸತ್ತ ನಟಿ ಮಂಜುಳಾ ತಾವೇ ಗ್ಯಾಸ್ ಲೀಕ್ ಮಾಡಿ ಬೆಂಕಿ ಹೊತ್ತಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದರು ಎನ್ನಲಾಗಿದೆ. ಆದರೆ ಮಂಜುಳಾ ಮೈ ಬೆಂಕಿಯಲ್ಲಿ ಬೆಂದು ಹೋಯಿತು. (ಗಮನಿಸಿ:ಇದು ವದಂತಿಯಾಗಿದ್ದು, ಈ ವಿಚಾರದ ಸತ್ಯಾಸತ್ಯತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸಲ್ಲ. ಯಾವ ರೀತಿಯಿಂದಲೂ ಇದಕ್ಕೆ ನಾವು ಪುಷ್ಠಿ ನೀಡುವುದಿಲ್ಲ.)
ಅರ್ಧ ಜೀವವಾಗಿ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆ ಸೇರಿದರು. ಸಾವು ಬದುಕಿನ ಹೋರಾಟದಲ್ಲಿಒಂದು ವಾರ ನರಳಿ ಕೊನೆಗೆ ವಿಧಿವಶರಾದರು. ಮಂಜುಳಾ ಸಾವನ್ನಪ್ಪಿ ಇಂದಿಗೆ 40ಕ್ಕೂ ಹೆಚ್ಚು ವರ್ಷ ಕಳೆದಿವೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.