Actress Meena interview : ಮೀನಾ 1995 ರಲ್ಲಿ ರವಿಚಂದ್ರನ ನಟನೆಯ ಪುಟ್ನಂಜ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾದರು.. ಮೊದಲ ನೋಟದಲ್ಲೇ ಕನ್ನಡಿಗರ ಮನಗೆದ್ದ ಈ ಸುಂದರಿ ಇಂದಿಗೂ ಆ ಸ್ಥಾನವನ್ನು ಕಾಪಾಡಿಕೊಂಡು ಬಂದಿದ್ದಾರೆ. ಇನ್ನು ಇತ್ತೀಚಿಗೆ ನಟಿ ನೀಡಿರುವ ಹೇಳಿಕೆಯೊಂದು ಸಿನಿರಂಗದಲ್ಲಿ ಚರ್ಚೆಗೆ ಕಾರಣವಾಗಿದೆ..
ಮಲಯಾಳಂ ಸೂಪರ್ ಸ್ಟಾರ್ ನಟ ಮೋಹನ್ ಲಾಲ್ ಜೊತೆ ದೃಶ್ಯಂ ಚಿತ್ರದಲ್ಲಿ ನಟಿಸಿದ್ದೆ. ನನ್ನ ಮಗಳು ನೈನಿಕಾ ಚಿತ್ರೀಕರಣ ಪ್ರಾರಂಭವಾಗುವ ಮೂರು ತಿಂಗಳ ಮೊದಲು ಜನಿಸಿದಳು. ಮೋಹನ್ ಲಾಲ್ ನನಗೆ ಕರೆ ಮಾಡಿ ದೃಶ್ಯಂ ಸಿನಿಮಾದಲ್ಲಿ ನಟಿಸುವಂತೆ ಒತ್ತಾಯ ಮಾಡಿದರು.. ಆದ್ರೆ ನಾನು ಅವರಿಗೆ ನನ್ನ ಪರಿಸ್ಥಿತಿಯನ್ನು ವಿವರಿಸಿದೆ.
ಇದನ್ನೂ ಓದಿ:ಮಾಧ್ಯಮದವರ ಮೇಲೆ ದಾಳಿ, ಕ್ಷಮೆಯಾಚನೆ ಮಾಡಿದ ಹಿರಿಯ ನಟ ಮೋಹನ್ ಬಾಬು..! ಅಷ್ಟಕ್ಕೂ ಆಗಿದ್ದೇನು..?
ಚಿತ್ರೀಕರಣ ನಡೆದ ಸ್ಥಳ ಸೆಲ್ ಫೋನ್ ಸಿಗ್ನಲ್ ಕೂಡ ಸಿಗದ ಸ್ಥಳವಾಗಿತ್ತು. ಅದು ಒಂದು ಪುಟ್ಟ ಹಳ್ಳಿ. ಮಾತ್ರೆ ಕೊಳ್ಳುವುದಕ್ಕೂ ಬಹಳ ದೂರ ಹೋಗಬೇಕು. ಹಾಗಾಗಿಯೇ ಆ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದೆ. ಆದರೆ ನಾನು ಅದರಲ್ಲಿ ನಟಿಸಬೇಕು ಎಂದು ಮೋಹನ್ ಲಾಲ್ ಹೇಳುತ್ತಲೇ ಇದ್ದರು. ನಾನು ಆಗಲ್ಲ ಅಂತ ಹಠ ಹಿಡಿದೆ.
ಆದರೆ, ಮೋಹನ್ ಲಾಲ್ ನೀವೇ ಆ ಪಾತ್ರ ಮಾಡಿ ಎಂದು ಹಠ ಹಿಡಿದು ಕೊನೆಗೂ ನಾನು ನಟಿಸುವಂತೆ ಮಾಡಿದರು. ಚಿತ್ರ ಬಿಡುಗಡೆಯಾದ ನಂತರ ದೊಡ್ಡ ಹಿಟ್ ಆಯಿತು. ಆಗ ನನಗೆ ನಾನು ಎಷ್ಟು ದೊಡ್ಡ ಆಫರ್ ಮಿಸ್ ಮಾಡಿಕೊಳ್ಳುತ್ತಿದ್ದೆ ಅಂತ ಅರ್ಥವಾಯಿತು ಎಂದರು ಮೀನಾ..
ಇದನ್ನೂ ಓದಿ:ಬಿಗ್‌ಬಾಸ್ ಮನೆಯಲ್ಲಿ ನಡೆದೇ ಹೋಯ್ತು ಅನೀರಿಕ್ಷಿತ ಘಟನೆ! ದೊಡ್ಮನೆಯಿಂದ ರಜತ್ ಔಟ್!?
ದೃಶ್ಯಂ ಚಿತ್ರವನ್ನು ಜಿತು ಜೋಸೆಫ್ ನಿರ್ದೇಶಿಸಿದ್ದಾರೆ. 5 ಕೋಟಿ, ಚಿತ್ರ 75 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಸರಳ ಚಿತ್ರಕಥೆಯೊಂದಿಗೆ ಫ್ಯಾಮಿಲಿ ಸೆಂಟಿಮೆಂಟ್ ಶೈಲಿಯಲ್ಲಿ ಮೂಡಿಬಂದಿರುವ ಈ ಚಿತ್ರ ಎಲ್ಲರನ್ನೂ ಆಕರ್ಷಿಸಿದೆ. ತಮಿಳು, ಕನ್ನಡ ಮತ್ತು ತೆಲುಗಿನಲ್ಲೂ ರಿಮೇಕ್ ಆಗಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.