ನಟನೆಯಿಂದ ದೂರ ಸರಿದರೂ 48ನೇ ವಯಸ್ಸಿನಲ್ಲಿ ನಟಿ ಮೀನಾ ಬಳಿ ಇಷ್ಟೊಂದು ಆಸ್ತಿ ಇದೆಯಾ?

Actress Meena: ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ನಂತರ ನಾಯಕಿಯಾಗಿಯೂ ಮಿಂಚಿದವರಲ್ಲಿ ಮೀನಾ ಸಹ ಒಬ್ಬರು. ನಟಿ ಮೀನಾ 90 ರ ದಶಕದಲ್ಲಿ ಸ್ಟಾರ್ ನಾಯಕಿಯಾಗಿ ಖ್ಯಾತಿ ಪಡೆದರು. 

Written by - Chetana Devarmani | Last Updated : Apr 17, 2025, 11:53 AM IST
  • ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮೀನಾ
  • ನಟಿ ಮೀನಾ 90 ರ ದಶಕದಲ್ಲಿ ಸ್ಟಾರ್ ನಾಯಕಿ
  • ದಕ್ಷಿಣ ಭಾರತದ ಸಿನಿರಂಗದಲ್ಲಿ ಸ್ಟಾರ್‌ ನಟಿ ಆದರು
ನಟನೆಯಿಂದ ದೂರ ಸರಿದರೂ 48ನೇ ವಯಸ್ಸಿನಲ್ಲಿ ನಟಿ ಮೀನಾ ಬಳಿ ಇಷ್ಟೊಂದು ಆಸ್ತಿ ಇದೆಯಾ?

Actress Meena Property Details : ನಟಿ ಮೀನಾ ಬಾಲನಟಿಯಾಗಿ ಅನೇಕ ಚಿತ್ರಗಳಲ್ಲಿ ನಟಿಸಿದರು. ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ನಟಿಸಿ ದಕ್ಷಿಣ ಭಾರತದ ಸಿನಿರಂಗದಲ್ಲಿ ಸ್ಟಾರ್‌ ನಟಿ ಆದರು. 1990 ರಲ್ಲಿ 'ನವಯುಗಂ' ಚಿತ್ರದ ಮೂಲಕ ನಾಯಕಿಯಾಗಿ ಪದಾರ್ಪಣೆ ಮಾಡಿದ ಮೀನಾ ನಂತರ ಹಿಂತಿರುಗಿ ನೋಡಲಿಲ್ಲ. ಒಂದೆಡೆ, ಅವರು ತೆಲುಗು ಭಾಷೆಯಲ್ಲಿ ನಟಿಸುತ್ತಾ ತಮಿಳು, ಮಲಯಾಳಂ ಮತ್ತು ಕನ್ನಡ ಚಲನಚಿತ್ರೋದ್ಯಮಗಳಲ್ಲಿ ಪ್ರಮುಖ ನಾಯಕಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. 

ಖ್ಯಾತ ಬಹುಭಾಷಾ ನಟಿ ಹಾಗೂ 90ರ ದಶಕದಲ್ಲಿ ದಕ್ಷಿಣ ಭಾರತದ ಸಿನಿ ರಂಗದಲ್ಲಿ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದರು. ರವಿಚಂದ್ರನ್‌, ವಿಷ್ಣುವರ್ಧನ್‌, ರಜಿನಿಕಾಂತ್​, ಕಮಲ್​ ಹಾಸನ್​ ಹೀಗೆ ಬಹುತೇಕ ಎಲ್ಲ ಪ್ರಮುಖ ನಟರೊಂದಿಗೆ ಮೀನಾ ನಟಿಸಿದ್ದಾರೆ. 

ಇದನ್ನೂ ಓದಿ : ಸಲ್ಮಾನ್‌ ಖಾನ್‌ ಅವರನ್ನು ಸಿಂಹದಂತೆ ಕಾಯುವ ಅಂಗರಕ್ಷಕ ಶೇರಾ ಹಿನ್ನೆಲೆ ಏನು ಗೊತ್ತಾ..? ಶೇಕ್‌ ಆಗುವಂತೆ ಮಾಡುತ್ತೆ ಭಾಯಿಜಾನ್‌ ಬಾಡಿಗಾರ್ಡ್‌ ಬ್ಯಾಗ್ರೌಂಡ್‌..!   

ಸಿನಿ ಕರಿಯರ್‌ ಉತ್ತುಂಗದಲ್ಲಿ ಇರುವಾಗಲೇ ಮೀನಾ ಉದ್ಯಮಿ ವಿದ್ಯಾಸಾಗರ್ ಅವರ ಜೊತೆ ಮದುವೇ ಆದರು. ಇವರಿಗೆ ನೈನಿಕಾ ಎಂಬ ಮುದ್ದಾದ ಮಗಳಿದ್ದಾಳೆ. ಆದರೆ ವಿಧಯಾಟ ಎಂಬಂತೆ 2022ರಲ್ಲಿ ಮೀನಾ ಅವರ ಪತಿ ವಿದ್ಯಾ ಸಾಗರ್ ಅನಾರೋಗ್ಯದಿಂದ ನಿಧನರಾದರು. ಮದುವೆ ಬಳಿಕ ನಟನೆಯಿಂದ ದೂರ ಸರಿದಿದ್ದರೂ ಮೀನಾ ಹೆಸರಲ್ಲಿ ಕೋಟಿ ಕೋಟಿ ಆಸ್ತಿ ಇದೆ ಎನ್ನಲಾಗುತ್ತಿದೆ. 

ಮೀನಾ ಪತಿಗೆ ಶ್ವಾಸಕೋಶದ ಸೋಂಕು ತಗುಲಿ ಚಿಕಿತ್ಸೆ ಫಲಕಾರಿಯಾಗದೇ 2022, ಜೂನ್​ 28ರ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ತೀರಿ ಹೋದರು. ವಿದ್ಯಾ ಸಾಗರ್​ ತನ್ನೆಲ್ಲ ಆಸ್ತಿಯನ್ನು ನಟಿ ಮೀನಾ ಹಾಗೂ ಮಗಳು ನೈನಿಕಾ ಹೆಸರಿಗೆ ಬರೆದಿದ್ದರು. ಮೀನಾ ಮಗಳು ಕೂಡ ಸಿನಿಮಾದಲ್ಲಿ ಬಾಲ ನಟಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಅಟ್ಲೀ ನಿರ್ದೇಶನದ ಥೇರಿ ಸಿನಿಮಾದಲ್ಲಿ ನಟ ವಿಜಯ್​ ಮಗಳಾಗಿ ಮೀನಾ ಪುತ್ರಿ ನೈನಿಕಾ  ನಟಿಸಿದ್ದಾರೆ.

ವರದಿಗಳ ಪ್ರಕಾರ, ನಟಿ ಮೀನಾ ಅವರ ನಿವ್ವಳ ಮೌಲ್ಯ 35 ಕೋಟಿಯಿಂದ 40 ಕೋಟಿ ರೂ ಎಂದು ಅಂದಾಜಿಸಲಾಗಿದೆ. ಮೀನಾ ಇತರ ವ್ಯಾಪಾರಗಳನ್ನು ಹೊಂದಿದ್ದಾರೆ. ಐಷಾರಾಮಿ ಮನೆ ಮತ್ತು ಲಕ್ಸುರಿ ಕಾರುಗಳು ಸಹ ಇವೆ. 

ಪತಿ ವಿದ್ಯಾ ಸಾಗರ್‌ ಮರಣದ ಬಳಿಕ ಮೀನಾ ಮತ್ತೆ ಸಿನಿಮಾ ಜಗತ್ತಿನಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾಗಳಲ್ಲಿ ಪೋಷಕ ಪಾತ್ರ ಮತ್ತು ರಿಯಾಲಿಟಿ ಶೋಗಳಲ್ಲಿ ಜಡ್ಜ್​ ಆಗಿದ್ದಾರೆ.

ಇದನ್ನೂ ಓದಿ : ಮೊದಲ ಪತಿಯಿಂದ ಡಿವೋರ್ಸ್..‌ 8 ವರ್ಷದ ಮಗನ ಮುಂದೆ 52 ವರ್ಷದ ನಿರ್ಮಾಪಕರನ್ನ ಎರಡನೇ ಮದುವೆಯಾದ ನಟಿ!

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News