)
Narvini Dery on Ajmal : 'ಸಿನಮ್ಕೋಲ್' ಮತ್ತು 'ಉಯಿರ್ವರೈ ಇನಿತೈ' ಚಿತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ನಟಿ ನಾರ್ವಿನಿ. ತಮಿಳು ಯೂಟ್ಯೂಬ್ ಚಾನೆಲ್ 'ಟ್ರೆಂಡ್ ಟಾಕ್ಸ್' ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.. ಪ್ರಸ್ತುತ ಅವರ ಈ ಹೇಳಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ..
ಹೌದು.. 2018 ರಲ್ಲಿ ಸಂದರ್ಶನವೊಂದರ ವೇಳೆ ಮಾತನಾಡಿದ ನಟಿ ನಾರ್ವಿನಿ, ಅಜ್ಮಲ್ 2018 ರಲ್ಲಿ ಚೆನ್ನೈನ ಮಾಲ್ ಒಂದರಲ್ಲಿ ನನ್ನು ಭೇಟಿಯಾದರು. ತಮ್ಮ ಮುಂದಿನ ಚಿತ್ರಕ್ಕೆ ನಾಯಕಿಯನ್ನು ಹುಡುಕುತ್ತಿರುವುದಾಗಿ ಹೇಳಿ ನನ್ನ ಫೋನ್ ನಂಬರ್ ಪಡೆದನು. ನಂತರ, ವಾಟ್ಸಾಪ್ನಲ್ಲಿ ಸಂದೇಶಗಳು ಮತ್ತು ಫೋಟೋಗಳನ್ನು ಕಳುಹಿಸಿದ. ನನ್ನನ್ನು ಆಡಿಷನ್ಗೆ ತಕ್ಷಣ ಬರಲು ಹೇಳಿದರು. ಈ ಸಮಯದಲ್ಲಿ, ನಾನು ಡೆನ್ಮಾರ್ಕ್ಗೆ ಹೊರಡುವ ತಯಾರಿ ನಡೆಸುತ್ತಿದ್ದೆ.
ಆ ರಾತ್ರಿ ನನಗೆ ವಿಮಾನ ಪ್ರಯಾಣವಿದ್ದರೂ, ನಾನು ಆಡಿಷನ್ಗೆ ಹೋಗಲು ನಿರ್ಧರಿಸಿದೆ. ಆತ ಪ್ರಸಿದ್ಧ ವ್ಯಕ್ತಿಯಾಗಿದ್ದರಿಂದ ನನಗೆ ಭಯವಾಗಲಿಲ್ಲ. ಆದರೆ ಅವನು ನನಗೆ ಸ್ಥಳದ ಮಾಹಿತಿಯನ್ನು ಕಳುಹಿಸಿದಾಗ, ಅದು ಅಷ್ಟೊಂದು ಪ್ರಸಿದ್ಧವಲ್ಲದ ಹೋಟೆಲ್ ಎಂದು ಅರಿವಾಯಿತು. ಇದರಿಂದ ನನಗೆ ಅನುಮಾನ ಬಂತು.
ನಾನು ಹೋಟೆಲ್ ತಲುಪಿ ಬಾಗಿಲು ತಟ್ಟಿದಾಗ, ಅಜ್ಮಲ್ ಮಾತ್ರ ಬಾಗಿಲು ತೆರೆದರು. ಅಲ್ಲದೆ, ತಮ್ಮ ತಂಡದ ಸದಸ್ಯರು ಹೊರಟುಹೋಗಿದ್ದಾರೆ ಎಂದು ಹೇಳಿದರು. ನಾನು ಕೋಣೆಗೆ ಪ್ರವೇಶಿಸಿದ ತಕ್ಷಣ, ತನ್ನ ಸ್ನೇಹಿತನಿಗೆ ಕರೆ ಮಾಡಿದ, ಈ ವೇಳೆ, ಅಜ್ಮಲ್ ನನ್ನ ಕೈ ಹಿಡಿದು ನೃತ್ಯ ಮಾಡಲು ಆಹ್ವಾನಿಸಿದ. ನಾನು ತಕ್ಷಣ ಕೈ ಬಿಡಿಸಿಕೊಂಡೆ, ಅವನ ಉದ್ದೇಶವನ್ನು ಅರ್ಥಮಾಡಿಕೊಂಡೆ.
ಅಷ್ಟೇ ಅಲ್ಲ, ನಾನು ಹ್ಯಾಡ್ಸಮ್, ನನ್ನನ್ನು ಎಷ್ಟು ಹುಡುಗಿಯರು ಹಿಂಬಾಲಿಸುತ್ತಿದ್ದಾರೆಂದು ನಿನಗೆ ಗೊತ್ತಾ?" ಅಂತ ಹೇಳಿ ಬಲವಂತವಾಗಿ ತಬ್ಬಿಕೊಳ್ಳಲು ಪ್ರಯತ್ನಿಸಿದ. ಸಮಯಕ್ಕೆ ಸರಿಯಾಗಿ ರೂಮ್ ಬಾಯ್ ಕಾಲಿಂಗ್ ಬೆಲ್ ಬಾರಿಸಿದ್ದು ನನಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿತು. ಅಜ್ಮಲ್ ಬಾಗಿಲು ತೆರೆದ ತಕ್ಷಣ, ನಾನು ಅಲ್ಲಿಂದ ಓಡಿಹೋದೆ. ಘಟನೆಯ ನಂತರವೂ ಅಜ್ಮಲ್ ಮತ್ತೆ ಭೇಟಿ ಮಾಡಿ ಅಂತ ಸಂದೇಶಗಳನ್ನು ಕಳುಹಿಸುತ್ತಲೇ ಇದ್ದ. ಅಧ್ಯಯನ ಮತ್ತು ಜೀವನದ ಬಗ್ಗೆ ಯೋಚಿಸಿ ಪೊಲೀಸರಿಗೆ ದೂರು ನೀಡಲಿಲ್ಲ ಎಂದು ನಟಿ ಹೇಳಿಕೊಂಡರು. ಪ್ರಸ್ತುತ ನಟಿಯ ಈ ಹೇಳಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.