ಮೆಗಾ ಮನೆಯಲ್ಲಿ ಮತ್ತೊಂದು ಮದುವೆ ಸದ್ದು.. ಕೊನೆಗೂ ಎರಡನೇ ಮದುವೆಗೆ ರೆಡಿಯಾದ ನಿಹಾರಿಕಾ! ಹುಡ್ಗ ಯಾರು ಗೊತ್ತೇ?

Actress Niharika konidela: ಟಾಲಿವುಡ್‌ ನಟಿ ನಿಹಾರಿಕಾ ಕೊನಿಡೇಲಾ ಅವರದು ಡಿವೋರ್ಸ್‌ ವಿಚಾರ ಎಲ್ಲರಿಗೂ ಗೊತ್ತೇ ಇದೆ. ವಿಚ್ಛೇದನ ಹೊಂದಿ ಸರಿಯಾಗಿ ವರ್ಷವೂ ಆಗಿಲ್ಲ, ಆಗಲೇ ಇನ್ನೊಂದು ಮದುವೆ ಮಾಡಿಕೊಳ್ಳುವ ವಿಚಾರ ಕೈಗೆತ್ತಿಕೊಂಡಿದ್ದಾರೆ ಎನ್ನಾಲಾಗುತ್ತಿದೆ. 

Written by - Savita M B | Last Updated : Feb 24, 2025, 08:16 PM IST
  • ಮೆಗಾ ಮಗಳು ಎಂದು ಕರೆಸಿಕೊಳ್ಳುವ ನಿಹಾರಿಕಾ ಕೊನಿಡೇಲಾ
  • ಇವರ ಇತ್ತೀಚಿನ ನಡೆಗಳು ಸಹ ಅನುಮಾನ ಹುಟ್ಟಿಹಾಕಿವೆ
ಮೆಗಾ ಮನೆಯಲ್ಲಿ ಮತ್ತೊಂದು ಮದುವೆ ಸದ್ದು.. ಕೊನೆಗೂ ಎರಡನೇ ಮದುವೆಗೆ ರೆಡಿಯಾದ ನಿಹಾರಿಕಾ! ಹುಡ್ಗ ಯಾರು ಗೊತ್ತೇ?

Niharika konidela Second Marriage: ಮೆಗಾ ಮಗಳು ಎಂದು ಕರೆಸಿಕೊಳ್ಳುವ ನಿಹಾರಿಕಾ ಕೊನಿಡೇಲಾ ಏರಡನೇ ಮದುವೆಗೆ ರೆಡಿಯಾಗಿದ್ದಾರಾ ?  ಪರೋಕ್ಷವಾಗಿ ಇವರ  ಇತ್ತೀಚಿನ ನಡೆಗಳು ಸಹ ಅನುಮಾನ ಹುಟ್ಟಿಹಾಕಿವೆ. ಇತ್ತೀಚೆಗೆ  ಹೊಸ ಸಿನಿಮಾಪ್ರಚಾರದ ಸಮಯದಲ್ಲಿ  ಆಕೆ ಮಾಡಿದ ಕಮೆಂಟ್‌ಗಳು ಇನ್ನೋಂದು ಮದುವೆ ಅಕ್ಷರಶಃ ನಿಜ ಎನ್ನುವ ಹಾಗೆ ಇದೆ. ನಟನೆಯೊಂದಿಗೆ ಇತ್ತೀಚೆಗೆ ಸಿನಿಮಾ ನಿರ್ಮಾಣಕ್ಕೂ ಸೈ ಎಂದಿರುವ ನಿಹಾರಿಕಾ, "ಪಿಂಕ್ ಎಲಿಫೆಂಟ್ ಪಿಕ್ಚರ್ಸ್" ಎಂಬ ಬ್ಯಾನರ್‌ ನಿರ್ಮಿಸಿ ಒಟಿಟಿ ವೆಬ್ ಸೀರೀಸ್ ಗಳನ್ನು ಶುರುಮಾಡಿದ್ದಾರೆ.  ಸದ್ಯಕ್ಕೆ ಸಾಗು ಎಂಬ ಸಿನಿಮಾ ಮುಗಿಸಿ ಅದರ ಪ್ರಚಾರದಲ್ಲಿ ಬ್ಯುಸಿ ಅಗಿದ್ದಾರೆ. ಈ ಸಿನಿಮಾ ಈಗ ಒಟಿಟಿಯಲ್ಲಿ ಬಿಡುಗಡೆಯಾಗಲು ಸಿದ್ದವಾಗಿದೆ. 

Add Zee News as a Preferred Source

ಸಿನಿಮಾದ ಕುರಿತು ಮಾಧ್ಯಮವೊಂದರ ಜೊತೆ ಮಾತನಾಡಿದ ನಿಹಾರಿಕಾ ನನಗೆ ಮಕ್ಕಳೆಂದರೆ ಹೆಚ್ಚು ಪ್ರೀತಿ. ನಿಹಾರಿಕಾ ಅವರನ್ನು ಮತ್ತೆ ಮದುಮಗಳಾಗಿ ನೋಡಬಹುದೇ ಎಂಬ ನಿರೂಉಪಕರ ಪ್ರಶ್ನೆಗೆ, ನಿಹಾರಿಕಾ ಅವರು ಈ ಜೀವನ ಚಕ್ರದಲ್ಲಿ ಮದುವೆ ಅಥವಾ ಮಕ್ಕಳನ್ನೂ ಹೊಂದುವುದರ ಬಗ್ಗೆ ಮುಂದೆ ಏನು ಬೇಕಾದರು ಆಗಬಹುದಯು. ಪ್ರೀತಿ ಪ್ರೇಮದ ಬಗ್ಗೆ ನನಗೆ ಯಾವುದೇ ನೆಗೆಟಿವ್ ಭಾವನೆ ಇಲ್ಲ ಎನ್ನುತ್ತಾರೆ. ಅಲ್ಲದೆ ಯಾವುದೇ ಸಂಬಂದಗಳು ಮುಂದುವರಿಯದೆ ಇರಲು ಕಾರಣ ಬೇರೆ ಬೇರೆ ಯಾಗಿರುತ್ತದೆ. ಅಷ್ಟಕ್ಕೆ ಮುಂದೆಂದು ಜೀವನದಲ್ಲಿ  ನಮಗೆ  ಪ್ರೀತಿ ಸಿಗುವುದಿಲ್ಲ ಎಂದುಕೊಳ್ಳುವುದು ತಪ್ಪು ಅಂತ ನಿಹಾರಿಕಾ ಹೇಳಿದ್ದಾರೆ. ಇದರೊಂದಿಗೆ ನಿಹಾರಿಕಾ ಎರಡನೇ ಮದುವೆಗೆ ರೆಡಿಯಾಗಿದ್ದು, ಅದೂ ಲವ್‌ ಮ್ಯಾರೆಜ್‌ ನ ಸಾಧ್ಯತೆ ಇದೆ ಎಂದು ಜನ ಊಹಿಸಿದ್ದಾರೆ.

ಇದನ್ನೂ ಓದಿ-ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್‌ ನ್ಯೂಸ್.. ಪ್ರತಿ ತಿಂಗಳು ನಿಮ್ಮ ಖಾತೆ ಸೇರಲಿದೆ 2,500 ರೂ!  ‌  

 ವೈಯಕ್ತಿಕ ಜೀವನದಲ್ಲಿ ಏಷ್ಟೇ ಬ್ಯುಸಿಯಾದ್ರೂ ಕೆಲಸವನ್ನ ಬಿಟ್ಟುಕೊಡುವುದಿಲ್ಲ ಎನ್ನುತ್ತಾರೆ ನಿಹಾರಿಕಾ. ವಿಚ್ಛೇದನದ ನಂತರ ನಟಿ ತನ್ನ ವೃತ್ತಿ ಜೀವನದತ್ತ ಹೆಚ್ಚು ಗಮನಹರಿಸಿದ್ದು ನಿರರ್ಗಳವಾಗಿ ತಮ್ಮನ್ನು ಸಿನಿಮಾಗಳಿಗೆ ತೊಡಗಿಸಿಕೊಂಡಿದ್ದಾರೆ. ನಿಹಾರಿಕಾ ನಡೆಯನ್ನ ನೋಡಿದರೆ ಕೆರಿಯರ್ ವಿಚಾರದಲ್ಲಿ ದೊಡ್ಡ ತಿರುವಿನತ್ತ ಸಾಗಲಿದ್ದಾರೆ ಎಂಬುವುದು ಸೋಷಿಯಲ್ ಮೀಡಿಯಾದಲ್ಲಿ ನಟಿ  ಪೋಸ್ಟ್‌ ಮಾಡುತ್ತಿರುವ ಫೋಟೋ, ವಿಡಿಯೋಸ್ ಗಳಿಂದ ತಿಳಿಯುತ್ತಿದೆ.

 ವಿಚ್ಛೇದನದ ನಂತರ ಸಮಂತಾ ರಂತೆಯೇ ನಿಹಾರಿಕಾ ಸಿನಿಮಾಗಳತ್ತ ಗಮನ ಹರಿಸಿದರು. ಹಲವು ವೆಬ್ ಸೀರಿಸ್ ನಿರ್ಮಾಣದೊಂದಿಗೆ ನಿಹಾರಿಕಾ ಮತ್ತೆ ನಾಯಕಿಯಾಗಿ ಸಿನಿಮಾ ಮಾಡುವುದಾಗಿ ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಡೆಡ್ ಫಿಕ್ಸೆಲ್ ವೆಬ್‌ ಸರಣಿಯ ಮೂಲಕ ನಟನೆಯತ್ತ ಮತ್ತೇ ಹೆಜ್ಜೆ ಇಡುತ್ತಿರುವ ನಿಹಾರಿಕಾ, ಪ್ರಸ್ತುತ ಶೆಫ್ ಮಂತ್ರ ಸೀಸನ್ 3 ಅನ್ನು ಹೋಸ್ಟ್ ಮಾಡುತ್ತಿದ್ದಾರೆ. ನಿರೂಪಣೆ ಮಾತ್ತು ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 

ಇದನ್ನೂ ಓದಿ-ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್‌ ನ್ಯೂಸ್.. ಪ್ರತಿ ತಿಂಗಳು ನಿಮ್ಮ ಖಾತೆ ಸೇರಲಿದೆ 2,500 ರೂ!  ‌  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

About the Author

Savita M B

ಸವಿತಾ ಎಂ.ಬಿ ಅವರು ZEE ಕನ್ನಡ ನ್ಯೂಸ್‌ ಡಿಜಿಟಲ್‌ನಲ್ಲಿ ಸಬ್‌ ಎಡಿಟರ್‌ ಆಗಿ ಕೆಲಸ ಮಾಡುತ್ತಿದ್ದು, ಎಂಟರ್‌ಟೈನ್‌ಮೆಂಟ್, ಹೆಲ್ತ್‌, ಲೈಫ್‌ಸ್ಟೈಲ್‌, ವೈರಲ್‌, ಬ್ಯುಸಿನೆಸ್‌ ಸೇರಿದಂತೆ ವಿವಿಧ ವಿಭಾಗಗಳ ಸುದ್ದಿಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. 2023ರಿಂದ ಇವರು ವಾಹಿನಿಗಾಗಿ ಶ್ರಮಿಸುತ್ತಿದ್ದಾರೆ.

...Read More

Trending News