)
Bollywood Star Actress Parveen Babi: 70-80ರ ದಶಕದಲ್ಲಿ ಬಾಲಿವುಡ್ ನಲ್ಲಿ ಟಾಪ್ ಹೀರೋಯಿನ್ ಆಗಿದ್ದರು. ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್ ಹೀರೋಯಿನ್ ಎಂದೇ ಹೆಸರುವಾಸಿ. ಆಕೆ ಬೇರೆ ಯಾರೂ ಅಲ್ಲ ಪರ್ವೀನ್ ಬಾಬಿ.
ಪರ್ವೀನ್ ತನ್ನ ಸೌಂದರ್ಯ ಮತ್ತು ನಟನೆಯಿಂದ ಎಲ್ಲರನ್ನು ಆಕರ್ಷಿಸಿದ್ದರು. ಹೀಗಾಗಿ ಅವರಿಗೆ ಅವಕಾಶಗಳು ಹರಿದು ಬಂದವು. ಅವರು ತಮ್ಮ ವೃತ್ತಿಜೀವನದಲ್ಲಿ ಪ್ರತಿ ಸ್ಟಾರ್ ಹೀರೋ ಜೊತೆ ಕೆಲಸ ಮಾಡಿದ್ದಾರೆ. ಪರ್ವೀನ್ ಬಾಬಿಯನ್ನು ನೋಡಲು ಜನ ಥಿಯೇಟರ್ಗಳಿಗೆ ಮುಗಿಬಿಳುತ್ತಿದ್ದ ಕಾಲವೊಂದಿತ್ತು.. ಆಕೆಯ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ಸಾಲುಗಟ್ಟಿ ನಿಲ್ಲುತ್ತಿದ್ದರು.
ಪರ್ವೀನ್ ಬಾಬಿ ತಮ್ಮ ವೃತ್ತಿಜೀವನದಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಆ ಸಮಯದಲ್ಲಿ ಆಕೆಯ ಬಗ್ಗೆ ಹಲವು ವದಂತಿಗಳು ಹಬ್ಬಿದ್ದವು. ಬಾಲಿವುಡ್ನಲ್ಲೂ ಬಿಸಿ ಬಿಸಿ ಚರ್ಚೆಗಳು ನಡೆದಿದ್ದವು.. ಮಹೇಶ್ ಭಟ್ ಜೊತೆ ಪರ್ವೀನ್ ಬಾಬಿ ಅಫೇರ್ ನ ಕಥೆಗಳು ಈಗಲೂ ಕೇಳಿ ಬರುತ್ತಿವೆ.
ಮಹೇಶ್ ಭಟ್ ಮತ್ತು ಪರ್ವೀನ್ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದರು. ಮಹೇಶ್ ಭಟ್ ಅವರು ತಮ್ಮ ಮೊದಲ ಪತ್ನಿ ಕಿರಣ್ ಭಟ್ ಮತ್ತು ಮಗಳು ಪೂಜಾ ಭಟ್ ಅವರನ್ನು ಬಿಟ್ಟು ಪರ್ವೀನ್ ಬಾಬಿಯನ್ನು ವಿವಾಹವಾಗಿದ್ದರು.. ಆಕೆಯ ಜೀವನದಲ್ಲಿ ಮೂರು ಅಫೇರ್ಗಳಿದ್ದರೂ ನಟಿ ಸಾಯುವವರೆಗೂ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. 2005ರಲ್ಲಿ ಗ್ಯಾಂಗ್ರಿನ್ ನಿಂದಾಗಿ ಪರ್ವೀನ್ ಬಾಬಿ ಮೃತಪಟ್ಟಿದ್ದರು.