ಪ್ರಖ್ಯಾತ ಪಾಕಿಸ್ತಾನಿ ನಟಿಯೊಂದಿಗೆ ಸಲ್ಮಾನ್‌ ಖಾನ್‌ ಮದುವೆ! ಬಾಯಿಜಾನ್‌ ಆಪ್ತರಿಂದಲೇ ಹೊರಬಿತ್ತು ಸತ್ಯ..

Salman Khan Marriage: ಬಾಲಿವುಡ್‌ನ ಭಾಯಿಜಾನ್ ಯಾವಾಗ ಮದುವೆಯಾಗುತ್ತಾರೆ ಎಂದು ಎಲ್ಲರೂ ಕಾಯುತ್ತಿದ್ದಾರೆ.. ಇತ್ತೀಚೆಗೆ ನಟಿಯೊಬ್ಬರು ಸಲ್ಮಾನ್ ಖಾನ್ ಮದುವೆ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ..   

Written by - Savita M B | Last Updated : Mar 2, 2025, 02:12 PM IST
  • ಬಾಲಿವುಡ್ ನ ಅತ್ಯಂತ ಮೋಸ್ಟ್‌ ವಾಂಟೆಡ್ ಬ್ಯಾಚುಲರ್ ಎಂದೇ ಖ್ಯಾತಿ ಪಡೆದವರು ನಟ ಸಲ್ಮಾನ್ ಖಾನ್.
  • ಈಗ ನಟಿಯೊಬ್ಬರು ಸಲ್ಮಾನ್ ಖಾನ್ ಮದುವೆ ಬಗ್ಗೆ ಹೇಳಿಕೆ ನೀಡಿದ್ದಾರೆ.
ಪ್ರಖ್ಯಾತ ಪಾಕಿಸ್ತಾನಿ ನಟಿಯೊಂದಿಗೆ ಸಲ್ಮಾನ್‌ ಖಾನ್‌ ಮದುವೆ! ಬಾಯಿಜಾನ್‌ ಆಪ್ತರಿಂದಲೇ ಹೊರಬಿತ್ತು ಸತ್ಯ..

Salman Khan: ಬಾಲಿವುಡ್ ನ ಅತ್ಯಂತ ಮೋಸ್ಟ್‌ ವಾಂಟೆಡ್ ಬ್ಯಾಚುಲರ್ ಎಂದೇ ಖ್ಯಾತಿ ಪಡೆದವರು ನಟ ಸಲ್ಮಾನ್ ಖಾನ್. ಅವರ ಮದುವೆಯ ಪ್ರಶ್ನೆ ಈಗ ಗ್ಲೋಬಲ್ ಸಮಸ್ಯೆಯಾಗಿದೆ. ಈಗ ನಟಿಯೊಬ್ಬರು ಸಲ್ಮಾನ್ ಖಾನ್ ಮದುವೆ ಬಗ್ಗೆ ಹೇಳಿಕೆ ನೀಡಿದ್ದಾರೆ.   

Add Zee News as a Preferred Source

ಪ್ರಸ್ತುತ, ಎಲ್ಲರೂ ನಟ ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರ ಸಿಕಂದರ್ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಈಗ ತಯಾರಕರು ಅದರ ಪೋಸ್ಟ್-ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿದ್ದಾರೆ. ಈ ಮಧ್ಯೆ, ಡ್ರಾಮಾ ಕ್ವೀನ್‌ ಎಂದೇ ಖ್ಯಾತಿ ಪಡೆದಿರುವ ರಾಖಿ ಸಾವಂತ್, ಸಲ್ಮಾನ್ ಖಾನ್‌ಗೆ ತಾವೇ ಹುಡುಗಿಯನ್ನು ಆಯ್ಕೆ ಮಾಡಿರುವುದಾಗಿ ಹೇಳಿದ್ದಾರೆ. ಇತ್ತೀಚೆಗೆ, ರಾಖಿ ಸಾವಂತ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಸಲ್ಮಾನ್ ಮತ್ತು ಹನಿಯಾ ಜೋಡಿಯ ಬಗ್ಗೆ ಮಾತನಾಡುತ್ತಿರುವುದು ಕಂಡುಬರುತ್ತದೆ.

ಇದನ್ನೂ ಓದಿ-ಸತತ ಏರಿಕೆ ಬೆನ್ನಲ್ಲೇ ಗಣನೀಯವಾಗಿ ಇಳಿಕೆಯಾದ ಚಿನ್ನದ ಬೆಲೆ! ಬಂಗಾರ ಖರೀದಿಗೆ ಇದೇ ಸರಿಯಾದ ಸಮಯ..   

ವಿಡಿಯೋದಲ್ಲಿ, ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ರಾಖಿ ದುಬೈನಲ್ಲಿ ಕಾಣಿಸಿಕೊಂಡಿದ್ದಾಳೆ. ಆಗ ರಾಖಿ ಸಾವಂತ್ ಒಂದು ವಿಡಿಯೋ ಮಾಡಿದ್ದು, ಈ ಅದರಲ್ಲಿ ಅವರು, “ಸಲ್ಮಾನ್ ಭಾಯ್, ನಾನು ಹನಿಯಾಳನ್ನು ನನ್ನ ಅತ್ತಿಗೆಯನ್ನಾಗಿ ಆರಿಸಿಕೊಂಡಿದ್ದೇನೆ. ಸಲ್ಮಾನ್ ನನ್ನ ಸಹೋದರ ಮತ್ತು ಹನಿಯಾ ಪಾಕಿಸ್ತಾನದ ನನ್ನ ಅತ್ತಿಗೆ. ” "ಹನಿಯಾ ಬಾಲಿವುಡ್‌ಗೆ ಬರಬೇಕು, ಸಲ್ಮಾನ್ ಖಾನ್ ಜೊತೆ ಕೆಲಸ ಮಾಡಬೇಕು.. ಎಂದು ನಟಿ ಹೇಳಿದ್ದಾರೆ.. ಇದರ ಮಧ್ಯ, ರಾಖಿ ಹನಿಯಾ ದಿಲ್ಜಿತ್ ದೋಸಾಂಜ್ ಮತ್ತು ಹನಿ ಸಿಂಗ್ ಅವರೊಂದಿಗೆ ಕೆಲಸ ಮಾಡುವ ಬಗ್ಗೆ ಮಾತನಾಡಿ, “ಹನಿಯಾ, ನೀನು ಸಲ್ಮಾನ್ ಖಾನ್ ಜೊತೆ ನಾಯಕಿಯಾಗಿ ಬರುವ ದಿನ ದೂರವಿಲ್ಲ. ಮತ್ತು ನಾನು ಸಲ್ಮಾನ್ ಖಾನ್ ಜೊತೆ ಮಾತನಾಡುತ್ತೇನೆ. ಅವರು ದುಬೈಗೆ ಬಂದಿದ್ದಾರೆ.. ನಾನು ಅವರನ್ನು ಭೇಟಿಯಾಗಲಿದ್ದೇನೆ. ಖಂಡಿತವಾಗಿಯೂ ನಿಮ್ಮ ಬಗ್ಗೆ ಮಾತನಾಡುತ್ತೇನೆ" ಎಂದಿದ್ದಾರೆ.. ಮುರ್ತಾಜಾ ವ್ಯೂಸ್ ಇನ್‌ಸ್ಟಾಗ್ರಾಮ್ ಪೇಜ್‌ನೊಂದಿಗೆ ಮಾತನಾಡಿದ ರಾಖಿ, ಹನಿಯಾ ಬಾಲಿವುಡ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಬೇಕೆಂದು ತಾನು ಬಯಸುತ್ತೇನೆ ಎಂದು ಹೇಳಿದರು.

ಭಜರಂಗಿ ಭಾಯಿಜಾನ್ ಚಿತ್ರವು ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಇದ್ದಂತೆಯೇ, ಪಾಕಿಸ್ತಾನ ಮತ್ತು ಭಾರತದ ಬಗ್ಗೆ ಸುಂದರವಾದ ಪ್ರೇಮಕಥೆಯನ್ನು ಹೊಂದಿರುವ ಚಿತ್ರ ನಿರ್ಮಿಸಬೇಕು ಎಂದು ರಾಖಿ ಹೇಳಿದ್ದಾರೆ.. "ಇಲ್ಲಿಂದ ಸಲ್ಮಾನ್ ಖಾನ್ ಮತ್ತು ಅಲ್ಲಿಂದ ನನ್ನ ಅತ್ತಿಗೆ ಹನಿಯಾ, ಇಬ್ಬರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ನಾನು ಹೇಳುತ್ತೇನೆ, ನೀವು ನಿಜ ಜೀವನದಲ್ಲೂ ಒಂದಾದರೇ ಯಾವುದೇ ಸಮಸ್ಯೆ ಇಲ್ಲ… ಸಲ್ಮಾನ್ ಭಾಯ್, ನಾನು ಹನಿಯಾಳನ್ನು ನನ್ನ ಅತ್ತಿಗೆಯಾಗಿ ಆರಿಸಿಕೊಂಡಿದ್ದೇನೆ. ಈಗ ನೀನು ಹನಿಯಾಳನ್ನು ಮಾತ್ರ ಮದುವೆಯಾಗುತ್ತೀಯ... ಸೋಮಿ ಅಲಿ ನಿನ್ನ ಗೆಳತಿಯಾಗಲು ಸಾಧ್ಯವಾದರೆ, ಹನಿಯ ಯಾಕೆ ನಿನ್ನ ಹೆಂಡತಿಯಾಗಲು ಸಾಧ್ಯವಿಲ್ಲ?" ಎಂದು ನಟಿ ಹೇಳಿರುವ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಬಾರೀ ಸದ್ದು ಮಾಡುತ್ತಿದೆ.. 

ಇದನ್ನೂ ಓದಿ-ಸತತ ಏರಿಕೆ ಬೆನ್ನಲ್ಲೇ ಗಣನೀಯವಾಗಿ ಇಳಿಕೆಯಾದ ಚಿನ್ನದ ಬೆಲೆ! ಬಂಗಾರ ಖರೀದಿಗೆ ಇದೇ ಸರಿಯಾದ ಸಮಯ..   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Savita M B

ಸವಿತಾ ಎಂ.ಬಿ ಅವರು ZEE ಕನ್ನಡ ನ್ಯೂಸ್‌ ಡಿಜಿಟಲ್‌ನಲ್ಲಿ ಸಬ್‌ ಎಡಿಟರ್‌ ಆಗಿ ಕೆಲಸ ಮಾಡುತ್ತಿದ್ದು, ಎಂಟರ್‌ಟೈನ್‌ಮೆಂಟ್, ಹೆಲ್ತ್‌, ಲೈಫ್‌ಸ್ಟೈಲ್‌, ವೈರಲ್‌, ಬ್ಯುಸಿನೆಸ್‌ ಸೇರಿದಂತೆ ವಿವಿಧ ವಿಭಾಗಗಳ ಸುದ್ದಿಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. 2023ರಿಂದ ಇವರು ವಾಹಿನಿಗಾಗಿ ಶ್ರಮಿಸುತ್ತಿದ್ದಾರೆ.

...Read More

Trending News