ಬಂಗಾರದ ಜಿಂಕೆ ರನ್ಯಾರಾವ್ ಸೇರಿದ 34.12 ಕೋಟಿ ಮೌಲ್ಯದ ಆಸ್ತಿ ಜಪ್ತಿ..!

Ranya Rao gold case : ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಲಾಕ್ ಆಗಿದ್ದ ನಟಿ ರನ್ಯಾ ರಾವ್ ಗೆ ಇಡಿ ಶಾಕ್ ಕೊಟ್ಟಿದೆ. ಜಾರಿ ನಿರ್ದೇಶನಾಲಯದ ತನಿಖೆ ವೇಳೆ ಕೆಲ ಸ್ಪೋಟಕ ಮಾಹಿತಿಗಳು ಹೊರಬಂದಿದ್ದು,  ರನ್ಯಾಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

Written by - Krishna N K | Last Updated : Jul 5, 2025, 06:32 PM IST
    • ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಲಾಕ್ ಆಗಿದ್ದ ನಟಿ ರನ್ಯಾ ರಾವ್
    • ನಟಿ ರನ್ಯಾ ರಾವ್ ಗೆ ಇಡಿ ಶಾಕ್ ಕೊಟ್ಟಿದೆ.
    • ರನ್ಯಾಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಬಂಗಾರದ ಜಿಂಕೆ ರನ್ಯಾರಾವ್ ಸೇರಿದ 34.12 ಕೋಟಿ ಮೌಲ್ಯದ ಆಸ್ತಿ ಜಪ್ತಿ..!

Ranya Rao net worth : ದುಬೈನಿಂದ ಗೋಲ್ಡ್ ಸ್ಮಗ್ಲಿಂಗ್ ಮಾಡಿ ಲಾಕ್ ಆಗಿದ್ದ ರನ್ಯಾರಾವ್ ಗೆ ಇಡಿ ಮತ್ತೆ ಶಾಕ್ ಕೊಟ್ಟಿದೆ. ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣಕ್ಕೆ  ಸಂಬಂಧಿಸಿದಂತೆ ರನ್ಯಾ ರಾವ್‌ಗೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ತುಮಕೂರಿನಲ್ಲಿರುವ ಒಟ್ಟು 34.12 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

Add Zee News as a Preferred Source

ವಿಕ್ಟೋರಿಯಾ ಲೇಔಟ್ ಮನೆ, ಅರ್ಕಾವತಿ ಲೇಔಟ್ ನ ಪ್ಲಾಟ್, ಶಿರಾದ ಇಂಡಸ್ಟ್ರಿಯಲ್ ಲ್ಯಾಂಡ್, ಆನೇಕಲ್ ನ ಕೃಷಿ ಭೂಮಿ ಸೇರಿದಂತೆ 34.12 ಕೋಟಿ ರೂ. ಆಸ್ತಿಯನ್ನು ಇಡಿ ವಶಕ್ಕೆ ಪಡೆದಿದೆ. ಇಡಿ ತನಿಖೆ ವೇಳೆ ರನ್ಯಾ ರಾವ್ ಮತ್ತು ತರುಣ್ ಕೊಂಡೂರು ರಾಜು ಮತ್ತು ಇತರರು ದುಬೈ, ಉಗಾಂಡಾ ಮತ್ತು ಬೇರೆ ದೇಶಗಳಲ್ಲಿರುವ ಪೂರೈಕೆದಾರರಿಂದ ಚಿನ್ನವನ್ನು ಖರೀದಿಸಿ ಹವಾಲಾ ಮಾರ್ಗದ ಮೂಲಕ ನಗದು ಹಣವನ್ನು ಪಾವತಿಸುತ್ತಿದ್ದರು‌ ಎಂಬ ಅಂಶ ಬಟಾಬಯಲಾಗಿದೆ.

ಇದನ್ನೂ ಓದಿ: ಆ ಒಂದು ಸಿನಿಮಾ ಬಿಟ್ಟಿದ್ದಕ್ಕೆ ಮಹೇಶ್‌ ಬಾಬು ಬದಲು ನಾಗಚೈತನ್ಯರನ್ನ ಮದುವೆಯಾದ್ರಾ ಸಮಂತಾ..? ಇದು ಟ್ರಯಾಂಗಲ್‌ ಲವ್‌ಸ್ಟೋರಿನಾ!!

ಕಳ್ಳಸಾಗಣೆ ಮಾಡಿದ ಚಿನ್ನವನ್ನು ಭಾರತದೊಳಗೆ ಆಭರಣ ವ್ಯಾಪಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಗದು ರೂಪದಲ್ಲಿ ರನ್ಯಾ ಮಾರಾಟ ಮಾಡಿದ್ದಾಳೆ. ಈ ಹಣ ಮತ್ತೆ ಹೊರದೇಶದಿಂದ ಚಿನ್ನ ತರಲು ಬಳಕೆಯಾಗುತ್ತಿತ್ತು. ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳು ಮತ್ತು ಡಿಜಿಟಲ್ ಸಾಧನಗಳ ಮೂಲಕ ವಿದೇಶದಲ್ಲಿರುವ ವಿದೇಶಿ ಚಿನ್ನದ ಪೂರೈಕೆದಾರರು, ಹವಾಲಾ ನಿರ್ವಾಹಕರು ಮತ್ತು ದುಬೈ ಮೂಲದ ಕಸ್ಟಮ್ಸ್ ಏಜೆಂಟ್‌ಗಳೊಂದಿಗೆ ಆರೋಪಿಗಳು ಸಂವಹನ ನಡೆಸಿರುವುದು ದೃಢಪಟ್ಟಿದೆ ಎಂದು ಇಡಿ ತಿಳಿಸಿದೆ.

ಇದನ್ನೂ ಓದಿ:ರಾಜ್‌ಕುಮಾರ್‌ ಸಮಾಧಿಗೆ ಪೂಜೆ ಸಲ್ಲಿಸಿ ಅಬ್ಬರದ ಪ್ರಚಾರ ಶುರು ಮಾಡಿದ ಕೊತ್ತಲವಾಡಿ ಟೀಂ: ಇದು ಯಶ್‌ ತಾಯಿ ನಿರ್ಮಾಣದ ಚೊಚ್ಚಲ ಚಿತ್ರ

ಇನ್ನೂ ದಾಖಲೆಗಳಲ್ಲಿ ಸ್ವಿಟ್ಜರ್ಲೆಂಡ್‌‌ ಜಿನೀವಾ ರೈಲ್ವೆ ಸ್ಟೇಷನ್ ಅಂತಾ ನಮೂದಿಸಿ ಗೋಲ್ಡ್ ಸ್ಮಗ್ಲಿಂಗ್ ಮಾಡಿರೋದು ಪತ್ತೆಯಾಗಿದೆ. ರನ್ಯಾ ಹರ್ಷವರ್ಧಿನಿ ಹೆಸರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದ ಐನಾತಿ, ವಿದೇಶಿ ಗೋಲ್ಡ್ ಸಫ್ಲೈಯರ್ಸ್, ಹವಾಲಾ ಆಪರೇಟರ್ಸ್ ಮತ್ತು ದುಬೈ ಮೂಲದ ಕಸ್ಟಮ್ಸ್ ಏಜೆಂಟ್ ಗಳ ಜೊತೆ ಸಂಪರ್ಕ ಹೊಂದಿದ್ದಳು ಎಂಬುದು ಗೊತ್ತಾಗಿದೆ.

ಸ್ಮಗ್ಲಿಂಗ್ ಸಿಂಡಿಕೇಟ್ ಜೊತೆ ರನ್ಯಾ ನಂಟಿನ ಬಗ್ಗೆ ಸಾಕ್ಷ್ಯಗಳನ್ನ ಇಡಿ ಪತ್ತೆ ಹಚ್ಚಿದ್ದು, ಒಟ್ಟು 55.62 ಕೋಟಿ ವ್ಯವಹಾರ ಎಂಬುದು ಬೆಳಕಿಗೆ ಬಂದಿದದೆ. ಒಟ್ಟಾರೆ ಇಡಿ ತನಿಖೆ ವೇಳೆ ಬಂಗಾರದ ಜಿಂಕೆಯ ಬಂಡವಾಳ ಒಂದೊಂದೆ ಬಯಲಾಗುತ್ತಿದ್ದು, ಮುಂದೇನೂ ಎಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News