Rashmika Mandanna Net worth and remuneration: ರಶ್ಮಿಕಾ ಮಂದಣ್ಣ... ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಪಡೆದಿರುವ ಕೊಡಗಿನ ಬೆಡಗಿ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 29 ವರ್ಷಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ತಮ್ಮ ಸಿನಿ ಕೆರಿಯರ್ ಶುರು ಮಾಡಿದ್ದು ಕನ್ನಡದಲ್ಲಿ. ಅದಾದ ಬಳಿಕ ಯಶಸ್ಸಿನ ಹಾದಿಯಲ್ಲೇ ಹೆಜ್ಜೆಯನ್ನಿಟ್ಟ ನಟಿ, ಇಂದು ಬಾಲಿವುಡ್‌ನಲ್ಲೂ ಸೂಪರ್‌ಹಿಟ್ ಸಿನಿಮಾಗಳನ್ನು ಮಾಡುತ್ತಿದ್ದಾರೆ.
ದಕ್ಷಿಣ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾದ ರಶ್ಮಿಕಾ ಮಂದಣ್ಣ, ಕೆಲವೇ ವರ್ಷಗಳಲ್ಲಿ ತನಗಾಗಿ ಒಂದು ಸಾಮ್ರಾಜ್ಯವನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಹೇಳಬಹುದು.
ರಶ್ಮಿಕಾ ಮಂದಣ್ಣ ಕನ್ನಡ ತೆಲುಗು, ಮತ್ತು ಹಿಂದಿ ಚಿತ್ರಗಳಲ್ಲಿ ಸೂಪರ್ ಸ್ಟಾರ್ ಆಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಇನ್ನು ಈ ವರದಿಯಲ್ಲಿ ಅವರ ಆಸ್ತಿ ವಿವರ, ಸಂಭಾವನೆ ಬಗ್ಗೆ ತಿಳಿಯೋಣ.
ರಶ್ಮಿಕಾ ಮಂದಣ್ಣ ಹೆಸರಲ್ಲಿರುವ ಅತ್ಯಂತ ಅಮೂಲ್ಯವಾದ ಆಸ್ತಿಗಳಲ್ಲಿ ಒಂದು ಬೆಂಗಳೂರಿನಲ್ಲಿರುವ 8 ಕೋಟಿ ರೂಪಾಯಿ ಮೌಲ್ಯದ ಬಂಗಲೆ. ಅವರ ಮನೆಯನ್ನು ಐಷಾರಾಮಿ ಮರದ ಪೀಠೋಪಕರಣಗಳು ಮತ್ತು ನಗರದ ಗದ್ದಲದಿಂದ ದೂರವಿರಲು ಸಹಾಯ ಮಾಡುವ ಉದ್ಯಾನವನದಿಂದ ಅಲಂಕರಿಸಲಾಗಿದೆ.
ರಶ್ಮಿಕಾ ಮಂದಣ್ಣ ಅವರು ಕೊಡಗು, ಹೈದರಾಬಾದ್ ಮತ್ತು ಗೋವಾದಲ್ಲಿ ಐಷಾರಾಮಿ ಆಸ್ತಿಗಳನ್ನು ಹೊಂದಿದ್ದಾರೆ. ತ್ತೀಚೆಗೆ ಗೋವಾದಲ್ಲಿ ಮತ್ತೊಂದು ದೊಡ್ಡ ಬಂಗಲೆಯನ್ನು ಖರೀದಿಸಿದ್ದರು ರಶ್ಮಿಕಾ.
ರಶ್ಮಿಕಾ ಮಂದಣ್ಣ ಕಳೆದ ಕೆಲವು ವರ್ಷಗಳಿಂದ ಹಿಂದಿ ಚಲನಚಿತ್ರೋದ್ಯಮದಲ್ಲಿ ನಿರಂತರವಾಗಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇನ್ನು ಆಗಾಗ್ಗೆ ಮುಂಬೈಗೆ ಪ್ರಯಾಣಿಸಬೇಕಾವ ಸಲುವಾಗಿ ಮತ್ತು ಬಾಲಿವುಡ್‌ನಲ್ಲಿ ಯಶಸ್ವಿ ವೃತ್ತಿಜೀವನವನ್ನು ಮುಂದುವರಿಸುವ ಉದ್ದೇಶದಿಂದ, 2021 ರಲ್ಲಿ ಮುಂಬೈನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ.
ಇದನ್ನೂ ಓದಿ: Ram Navami 2025: ಶ್ರೀರಾಮನವಮಿಯಂದು ಇದೊಂದು ಕೆಲಸ ಮಾಡಿದರೆ ಹನುಮಂತನಂತೆ ನೀವು ಶ್ರೀರಾಮನಿಗೆ ಹತ್ತಿರವಾಗುತ್ತೀರಿ!
ರಿಯಲ್ ಎಸ್ಟೇಟ್ ಹೂಡಿಕೆಗಳ ಹೊರತಾಗಿ, ರಶ್ಮಿಕಾ ಮಂದಣ್ಣ ಅವರಿಗೆ ಐಷಾರಾಮಿ ಕಾರುಗಳ ಮೇಲೆಯೂ ಒಲವು ಇದೆ. ಅವರ ಅತ್ಯಂತ ಅಮೂಲ್ಯವಾದ ಕಾರು ರೇಂಜ್ ರೋವರ್ ಸ್ಪೋರ್ಟ್, ಇದು ಭಾರತದಲ್ಲಿ 1.84 ಕೋಟಿ ರೂ. ಬೆಲೆಯ SUV ಆಗಿದೆ. ಇದಲ್ಲದೆ, ಆಡಿ ಕ್ಯೂ3 (40 ಲಕ್ಷ ರೂ.), ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್ (50 ಲಕ್ಷ ರೂ.), ಟೊಯೋಟಾ ಇನ್ನೋವಾ ಮತ್ತು ಹುಂಡೈ ಕ್ರೆಟಾ ಕಾರುಗಳನ್ನು ಹೊಂದಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಒಟ್ಟು ನಿವ್ವಳ ಮೌಲ್ಯ 66 ಕೋಟಿ ರೂ. ಮತ್ತು ಅವರು ಪ್ರತಿ ಚಿತ್ರಕ್ಕೆ 4 ರಿಂದ 8 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









