ನಟ ಕಾಳೆ ಎಂಟ್ರಿಯಿಂದ ರೋಚಕ ಟ್ವಿಸ್ಟ್‌ ಪಡೆದುಕೊಂಡ ‘ಗಂಧದ ಗುಡಿ’..! ತಪ್ಪದೇ ವಿಕ್ಷಿಸಿ..

Gandhada Gudi serial : ಖ್ಯಾತ ನಟ ರವಿ ಕಾಳೆ ಜನಪ್ರಿಯ ಧಾರಾವಾಹಿ ‘ಶ್ರೀಗಂಧದಗುಡಿ’ಯಲ್ಲಿ ಗೌರವ ನಟರಾಗಿ ಕಾಣಿಸಿಕೊಳ್ಳಲಿದ್ದಾರೆ. ಇದರಿಂದಾಗಿ, ಈ ಸಿರಿಯಲ್‌ಗೆ ರೋಚಕ ಟ್ವಿಸ್ಟ್‌ ಸಿಕ್ಕಿದೆ.. ಅಂದಹಾಗೆ.. ‘ಶ್ರೀಗಂಧದಗುಡಿ’ ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದ್ದು, ಪ್ರತಿ ದಿನ ರಾತ್ರಿ 8ಕ್ಕೆ ಪ್ರಸಾರವಾಗುತ್ತಿದೆ. 

Written by - Krishna N K | Last Updated : Nov 6, 2025, 06:55 PM IST
    • ‘ಶ್ರೀಗಂಧದಗುಡಿ’ಯಲ್ಲಿ ಖ್ಯಾತ ನಟ ರವಿ ಕಾಳೆ ಪ್ರತ್ಯಕ್ಷ
    • ರೋಚಕ ಟ್ವಿಸ್ಟ್‌ ಪಡೆದಕೊಂಡ ಶ್ರೀಗಂಧದಗುಡಿ ಸಿರಿಯಲ್‌
    • ಶ್ರೀಗಂಧದಗುಡಿ ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ
ನಟ ಕಾಳೆ ಎಂಟ್ರಿಯಿಂದ ರೋಚಕ ಟ್ವಿಸ್ಟ್‌ ಪಡೆದುಕೊಂಡ ‘ಗಂಧದ ಗುಡಿ’..! ತಪ್ಪದೇ ವಿಕ್ಷಿಸಿ..

Ravi Kale in Gandhada gudi : ಗಂಧದಗುಡಿ ಧಾರಾವಾಹಿ ಕತೆಯು ಅತ್ಯಂತ ಕುತೂಹಲದ ಘಟ್ಟ ತಲುಪಿದೆ. ಪ್ರತಿದಿನ ಏನಾಗುತ್ತೆ ಅಂತ ತಿಳಿದುಕೊಳ್ಳಲು ಪ್ರೇಕ್ಷಕರು ಟಿವಿ ಮುಂದೆ ಮೈಮರೆತು ಕುಳಿತುಕೊಳ್ಳುವಂತೆ ಮಾಡಿದೆ. ಇದೀಗ ರವಿ ಕಾಳೆ ಪ್ರವೇಶದಿಂದ ಈ ಸಿರಿಯಲ್‌ಗೆ ಮತ್ತಷ್ಟು ರೋಚಕತೆ ಸಿಕ್ಕಿದೆ..

Add Zee News as a Preferred Source

ಅಂದಹಾಗೆ.. ಚಂದನಾ ಹರಿಗೆ ತಾನು ಈ ಮನೆಯಲ್ಲಿ ಇರುವುದಿಲ್ಲ, ನನ್ನ ಗುರಿಗಳನ್ನು ಸಾಧಿಸಲು ಬೆಂಗಳೂರಿಗೆ ಹೋಗಬೇಕೆಂದು ಹೇಳುತ್ತಾಳೆ. ಅದಕ್ಕಾಗಿ ಹರಿಯ ಸಹಾಯ ಕೇಳುತ್ತಾಳೆ. ಹರಿ ಆಕೆಗೆ ರಾತ್ರಿ ಹೋಗುವಂತೆ ಹೇಳುತ್ತಾನೆ, ಅಲ್ಲದೆ, ಸ್ವತಃ ತಾನೇ ಕರೆದುಕೊಂಡು ಹೋಗುವುದಾಗಿ ತಿಳಿಸುತ್ತಾನೆ..

ಇದನ್ನೂ ಓದಿ: ಖ್ಯಾತ ನಟಿಗೆ ಎರಡನೇ ಹಂತದ ಕ್ಯಾನ್ಸರ್!‌ 2 ವರ್ಷದ ಮಗುವನ್ನ ಆರೈಕೆ ಮಾಡಬೇಕಿರೋ ತಾಯಿ ಜೀವಕ್ಕೆ ಆಪತ್ತು

ಫ್ಲಾನ್‌ ಮಾಡಿದಂತೆ ಬೆಂಗಳೂರಿಗೆ ಹೊರಡುವಾಗ, ಮಾರ್ಗ ಮಧ್ಯ ಚಂದನಾ ಮಾಡುವ ಒಂದು ತಪ್ಪು ಆಕೆ ಮನೆಬಿಟ್ಟಿರುವ ವಿಚಾರವನ್ನು ಕುಟುಂಬಕ್ಕೆ ತಿಳಿಯುವಂತೆ ಮಾಡುತ್ತದೆ. ಇದರಿಂದಾಗಿ ಚೇಸ್‌ ಆರಂಭವಾಗುತ್ತದೆ.. ಅಲ್ಲದೆ, ಚಂದನಾ ತಂದೆ ಮಹಾಬಲ ತನ್ನ ಜನ ಬಲದಿಂದ, ಅವರ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಾನೆ.. ಇದರಿಂದ ಹರಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪೊಲೀಸ್‌ ಠಾಣೆಗೆ ಶರಣಾಗುತ್ತಾನೆ..

ಆ ಪೊಲೀಸ್‌ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಕಾಳೆ ಪ್ರತ್ಯಕ್ಷವಾಗುವ ಮೂಲಕ ಧಾರಾವಾಹಿಯ ಕತೆಗೆ ಟರ್ನಿಂಗ್ ಪಾಯಿಂಟ್ ಸಿಗುತ್ತದೆ. ಇನ್ನು ಹರಿ ಮತ್ತು ಚಂದನಾ ಮದುವೆ ಈ ಪ್ರಸಂಗವನ್ನು ಇತ್ಯರ್ಥಪಡಿಸಲು ಇರುವ ಒಂದೇ ಒಂದು ಮಾರ್ಗ ಅಂತ ಕಾಳೆ ಹೇಳ್ತಾರೆ.. ಹರಿಯೂ ಸಹ ಇದರ ಪ್ರಯೋಜನೆ ಪಡೆಯಲು ಮುಂದಾಗುತ್ತಾನೆ.. ಒಟ್ಟಿನಲ್ಲಿ ಅವರ ಮದುವೆ ಆಯ್ತಾ..? ಅಥವಾ ಮಹಾಬಲ ಎಂಟ್ರಿ ಕೊಡ್ತಾನಾ ಅನ್ನೋದೇ ರೋಚಕ..

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News