ಕಿರಿ ವಯಸ್ಸಿನಲ್ಲಿಯೇ ಬಿಟ್ಟು ಹೋದ ತಂದೆ, ದಿಗ್ಗಜ್ಜ ನಟರೊಂದಿಗೆ ಲವ್ ಅಫೇರ್, ಮದುವೆಯಾದ ಒಂದೇ ವರ್ಷಕ್ಕೆ ಪತಿ ಆತ್ಮಹತ್ಯೆ! 30 ವರ್ಷಗಳಿಂದ ಒಂಟಿಯಾಗಿ ಜೀವನ ನಡೆಸುತ್ತಿರುವ ಖ್ಯಾತ ನಟಿ !

ಹೆಸರು, ರೂಪ, ಕೀರ್ತಿ, ಹಣ ಎಲ್ಲವೂ ಇದ್ದರೂ ಈ ನಟಿಯದ್ದು ಒಂಟಿ ಜೀವನ.  ಮದುವೆಯಾದ ಒಂದೇ ವರ್ಷಕ್ಕೆ ಪತಿಯನ್ನು ಕಳೆದುಕೊಂಡು ಕಳೆದ ೩೦ ವರ್ಷಗಳಿಂದ ಒಂಟಿಯಾಗಿ ಜೀವನ ನಡೆಸುತ್ತಿರುವ ಖ್ಯಾತ ನಟಿಯ ಕತೆ ವ್ಯಥೆ ಇದು.   

Written by - Ranjitha R K | Last Updated : May 27, 2025, 11:00 AM IST
  • ನಟಿ ರೇಖಾ ಸಿನಿರಂಗದ ದಂತ ಕತೆ.
  • ಆದರೆ ಅವರ ಜೀವನ ಬರೀ ವ್ಯಥೆ
  • ನೋವಿನಿಂದ ಕೂಡಿದ ವೈವಾಹಿಕ ಜೀವನ
ಕಿರಿ ವಯಸ್ಸಿನಲ್ಲಿಯೇ ಬಿಟ್ಟು ಹೋದ ತಂದೆ,  ದಿಗ್ಗಜ್ಜ ನಟರೊಂದಿಗೆ ಲವ್ ಅಫೇರ್, ಮದುವೆಯಾದ ಒಂದೇ ವರ್ಷಕ್ಕೆ ಪತಿ ಆತ್ಮಹತ್ಯೆ! 30 ವರ್ಷಗಳಿಂದ ಒಂಟಿಯಾಗಿ ಜೀವನ ನಡೆಸುತ್ತಿರುವ ಖ್ಯಾತ ನಟಿ !

Rekha Love Life Story : ನಟಿ ರೇಖಾ ಸಿನಿರಂಗದ ದಂತ ಕತೆ. ಆದರೆ ಅವರ ಜೀವನದಲ್ಲಿ ತುಂಬಿಕೊಂಡಿರುವುದು  ಬರೀ ವ್ಯಥೆ. ತಮ್ಮ ಸುದೀರ್ಘ ಸಿನಿಮಾ ಜೀವನದಲ್ಲಿ 'ದೋ ಅಂಜಾನೆ', 'ಮುಕದ್ದರ್ ಕಾ ಸಿಕಂದರ್', 'ಸಿಲ್ಸಿಲಾ' ಮತ್ತು 'ಖುಬ್ಸೂರತ್' ಮುಂತಾದ ಹಲವು ಅತ್ಯುತ್ತಮ ಚಿತ್ರಗಳನ್ನು ನೀಡಿದ್ದಾರೆ. ಚಲನಚಿತ್ರಗಳಲ್ಲದೆ, ರೇಖಾ ತಮ್ಮ ವೈಯಕ್ತಿಕ ಜೀವನ, ಸೌಂದರ್ಯ ಮತ್ತು ರಾಜಮನೆತನದ ಶೈಲಿಗೂ ಜನಪ್ರಿಯ. ರೇಖಾ ಸೌಂದರ್ಯವನ್ನು ಇಂದಿಗೂ ಉದಾಹರಣೆಯಾಗಿ ಉಲ್ಲೇಖಿಸಲಾಗುತ್ತದೆ. ಆದರೆ ಅವರ ಜೀವನ ರಹಸ್ಯಗಳಿಂದ ತುಂಬಿದೆ. 

Add Zee News as a Preferred Source

 ನೋವಿನಿಂದ ಕೂಡಿದ ವೈವಾಹಿಕ ಜೀವನ : 
ರೇಖಾ ಅವರ ವೈವಾಹಿಕ ಜೀವನ ತುಂಬಾ ಚಿಕ್ಕದು ಮತ್ತು ನೋವಿನಿಂದ ಕೂಡಿತ್ತು. ರೇಖಾ ಇಂದಿಗೂ ತನ್ನ ಹಣೆ ಮೇಲೆ ಸಿಂಧೂರ ಹಚ್ಚುತ್ತಾರೆ. ಸಿಂಧೂರ ಇಲ್ಲದೆ ಅವರು ಮನೆಯಿಂದ ಹೊರಗೆ ಕಾಲಿಡುವುದೇ ಇಲ್ಲ. ರೇಖಾ ಯಾರ ಹೆಸರಿನ ಸಿಂಧೂರ ಹಚ್ಚಿಕೊಳ್ಳುತ್ತಾರೆ ಎನ್ನುವುದು ಇಂದಿಗೂ ರಹಸ್ಯ.  ರೇಖಾ ಚಿಕ್ಕ ವಯಸ್ಸಿನಲ್ಲೇ ಕುಟುಂಬದ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಸಿನಿ ರಂಗಕ್ಕೆ ಕಾಲಿಡುತ್ತಾರೆ. ರೇಖಾ ಅವರ ಜೀವನದಲ್ಲಿ ನಡೆದ ಒಂದು ದುರದೃಷ್ಟವೆಂದರೆ ಅವರಿಗೆ ಅವರ ತಂದೆಯ ಹೆಸರು ಎಂದಿಗೂ ಸಿಗಲಿಲ್ಲ.

ಇದನ್ನೂ ಓದಿ : ಮ್ಯಾಕ್ಸ್‌ ಸಿನಿಮಾ ಖ್ಯಾತಿಯ ನಟ ಇನ್ನಿಲ್ಲ.. 47 ವರ್ಷಕ್ಕೆ ಬದುಕಿನ ಪಯಣ ಮುಗಿಸಿದ ತಾರೆ!

ಹಳೆಯ ಸಂದರ್ಶನವೊಂದರಲ್ಲಿ, ರೇಖಾ ಅವರನ್ನು ಮರು ಮದುವೆ ಯಾಕೆ ಸಿಗಲಿಲ್ಲ ಎನ್ನುವ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ನಟಿ ನನಗೆ  ಯಾರನ್ನೂ ಕಳೆದುಕೊಳ್ಳಲು ಇಷ್ಟವಿಲ್ಲ ಎಂದು ಹೇಳಿದರು.ಇನ್ನು ಮಗುವಿನ ತಾಯಿಯಾಗುವುದನ್ನು ಮಿಸ್ ಮಾಡಿಕೊಳ್ಳುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಮಗು ಮಾಡಿಕೊಳ್ಳಲು ನನಗೆ ಪತಿ ಸಿಗಬಹುದು. ಆದರೆ ಅದು ನನ್ನ ಜೀವನದ ಗುರಿಗಳು ಮತ್ತು ಮೌಲ್ಯಗಳಿಗೆ ನ್ಯಾಯ ಒದಗಿಸುವುದಿಲ್ಲ ಎಂದು ಉತ್ತರಿಸಿದ್ದಾರೆ. 

ತಾಯಿಯಂತೆ ಒಂಟಿ ಜೀವನ :
ತನ್ನ ತಾಯಿಯಂತೆ ರೇಖಾ ಕೂಡಾ ಜೀವನದಲ್ಲಿ ಒಂಟಿತನದ ನೋವನ್ನು ಅನುಭವಿಸಿದ್ದಾರೆ ಎಂಬುದು ಗಮನಾರ್ಹ. ರೇಖಾ ಅವರ ಸುದೀರ್ಘ ಚಲನಚಿತ್ರ ವೃತ್ತಿಜೀವನದಲ್ಲಿ ಅವರ ಹೆಸರು ಅನೇಕ ತಾರೆಯರೊಂದಿಗೆ ತಳುಕು ಹಾಕಿಕೊಂಡಿದೆ. ಈ ಪಟ್ಟಿಯಲ್ಲಿ ಅಮಿತಾಬ್ ಬಚ್ಚನ್ ನಿಂದ ಅಕ್ಷಯ್ ಕುಮಾರ್ ವರೆಗೆ ಹೆಸರುಗಳಿವೆ. ವರದಿಗಳ ಪ್ರಕಾರ ರೇಖಾ ಕೂಡಾ ಜೀವನದಲ್ಲಿ ಮದುವೆಯಾಗಲು ನಿರ್ಧರಿಸಿ 1990ರಲ್ಲಿ ದೆಹಲಿಯ ಉದ್ಯಮಿ ಮುಖೇಶ್ ಅಗರ್ವಾಲ್ ಅವರನ್ನು ವಿವಾಹವಾದರು.

ಇದನ್ನೂ ಓದಿ : ʻಇದು ನನ್ನ ಹತ್ತನೇ ಮದುವೆ..ʼ : 35ನೇ ವಯಸ್ಸಲ್ಲೇ 10 ಮದುವೆ ಆದ ಕನ್ನಡದ ಖ್ಯಾತ ನಟಿ ಈಕೆ!

ಆತ್ಮಹತ್ಯೆ ಮಾಡಿಕೊಂಡ ಪತಿ : 
ಮದುವೆಯಾದ ಕೆಲವೇ ದಿನಗಳಲ್ಲಿ ಮುಖೇಶ್ ನಿಧನರಾದರು. ರೇಖಾಳ ಮದುವೆಗೆ ಒಂದು ವರ್ಷ ಪೂರ್ತಿಯಾಗುವ ಮೊದಲೇ ಮುಖೇಶ್ ಆತ್ಮಹತ್ಯೆ ಮಾಡಿಕೊಂಡರು. ಇದರಿಂದಾಗಿ ಜನರು ರೇಖಾಳನ್ನು ಶಪಿಸಲಾರಂಭಿಸಿದರು. ರೇಖಾ ಮತ್ತೊಮ್ಮೆ ಒಂಟಿಯಾದಳು. ಇದಾದ ನಂತರ ರೇಖಾ ಮತ್ತೆ ಮದುವೆಯಾಗಲಿಲ್ಲ. ಇದೀಗ ಅವರು ತಮ್ಮ ಕಾರ್ಯದರ್ಶಿ ಫರ್ಜಾನಾ ಅವರೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News