)
Short circuit fire in Kota: ಮನರಂಜನಾ ಪ್ರಪಂಚದಿಂದ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ನಟಿಯ ಇಬ್ಬರು ಮಕ್ಕಳು ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ಘಟನೆ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಸಂಭವಿಸಿದ್ದು, ಎಲ್ಲರೂ ಬೆಚ್ಚಿಬಿದ್ದಿದ್ದಾರೆ.. ಅನೇಕರು ನಟಿಯ ಇಬ್ಬರು ಮಕ್ಕಳ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ..
ಘಟನೆಯ ವಿವರವನ್ನು ನೋಡುವುದಾದರೇ.. ಕೋಟಾದಲ್ಲಿ, ಶನಿವಾರ ರಾತ್ರಿ 2 ಗಂಟೆಗೆ ನಗರದ ಫ್ಲಾಟ್ನಲ್ಲಿ ಬೆಂಕಿ ಕಾಣಿಸಿಕೊಂಡಿತು.. ಫ್ಲಾಟ್ನಿಂದ ಹೊಗೆ ಬರುತ್ತಿರುವುದನ್ನು ನೆರೆಹೊರೆಯವರು ನೋಡಿದರು. ಅವರು ತಕ್ಷಣ ಬಾಗಿಲು ಒಡೆದು, ಮಕ್ಕಳನ್ನು ಹೊರಗೆ ಕರೆದೊಯ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ವೈದ್ಯರು ಇಬ್ಬರೂ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಹಿರಿಯ ಮಗ ಶೌರ್ಯ (15) ಖಾಸಗಿ ಕೋಚಿಂಗ್ ಸೆಂಟರ್ನಿಂದ ಐಐಟಿಗೆ ತಯಾರಿ ನಡೆಸುತ್ತಿದ್ದರೆ, ಕಿರಿಯ ಮಗ ವೀರ್ ಧಾರಾವಾಹಿಗಳು ಮತ್ತು ರಾಜಸ್ಥಾನಿ ಹಾಡುಗಳಲ್ಲಿ ನಟಿಸಿದ್ದ. ವೀರ್ ಬಾಲ ಕಲಾವಿದ ಎಂದೂ ಪ್ರಸಿದ್ಧರಾಗಿದ್ದರು. ಪತ್ಥರ್ ಮಂಡಿ ಪ್ರದೇಶದ ದೀಪ್ ಶ್ರೀ ಬಹುಮಹಡಿ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಅಪಘಾತದ ನಂತರ, ಪ್ರದೇಶದಾದ್ಯಂತ ಶೋಕ ಹರಡಿದೆ.
ಇನ್ನು ಈ ಮಕ್ಕಳ ತಂದೆ ಜಿತೇಂದ್ರ ಶರ್ಮಾ ಕೋಟಾದ ಖಾಸಗಿ ತರಬೇತಿ ಸಂಸ್ಥೆಯಲ್ಲಿ ಶಿಕ್ಷಕರಾಗಿದ್ದಾರೆ. ಅವರ ತಾಯಿ ರೀಟಾ ಶರ್ಮಾ ಮೂಲತಃ ನಟಿ. ಅವರು ಮಿಸ್ ಬಲ್ಗೇರಿಯಾ ಪ್ರಶಸ್ತಿಯನ್ನು ಸಹ ಗೆದ್ದಿದ್ದಾರೆ. ಅವರು ಪ್ರಸ್ತುತ ಮುಂಬೈನಲ್ಲಿ ಟಿವಿ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದರು. ಅಪಘಾತದ ಸಮಯದಲ್ಲಿ, ಮಕ್ಕಳ ಪೋಷಕರು ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಮಕ್ಕಳು ಮನೆಯಲ್ಲಿ ಇಬ್ಬರೇ ಇದ್ದರು. ಬಹು ಕುಟುಂಬಗಳ ಫ್ಲಾಟ್ನ ನಾಲ್ಕನೇ ಮಹಡಿಯಲ್ಲಿ ಈ ಘಟನೆ ನಡೆದಿದೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ಭೂಪೇಂದ್ರ ಸಿಂಗ್ ಹೇಳಿದ್ದಾರೆ. ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವೀರ್ ಮತ್ತು ಶೌರ್ಯ ಅವರ ಶವಗಳನ್ನು ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇರಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಅಂತ್ಯಕ್ರಿಯೆ ನಡೆಸಲಾಗುವುದು. ಪೊಲೀಸರು ಪ್ರಸ್ತುತ ಸ್ಥಳದಲ್ಲಿದ್ದು ತನಿಖೆ ನಡೆಸುತ್ತಿದ್ದಾರೆ. ಮಕ್ಕಳ ಸಾವಿನ ನಂತರ, ತಂದೆ ತಮ್ಮ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ.