)
ಸ್ಯಾಂಡಲ್ವುಡ್ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನೇ ಆಳಿದವರು. ರಕ್ಷಿತಾ ಪ್ರೇಮ್ ಕನ್ನಡ, ತಮಿಳು ಮತ್ತು ತೆಲಗು ಹೀಗೆ ಹಲವು ಭಾಷೆಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.
ನಟಿ ರಕ್ಷಿತಾ 1984 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ನಟಿ ರಕ್ಷಿತಾ ತಂದೆ ಖ್ಯಾತ ಛಾಯಾಗ್ರಾಹಕ ಬಿ.ಸಿ.ಗೌರಿಶಂಕರ್ ಮತ್ತು ತಾಯಿ ನಟಿ ಮಮತಾರಾವ್. 2007 ರಲ್ಲಿ ನಿರ್ದೇಶಕ ಪ್ರೇಮ್ ಜೊತೆ ರಕ್ಷಿತಾ ಮದುವೆ ಆದರು. ಇವರಿಗೆ ಒಬ್ಬ ಮಗನಿದ್ದಾನೆ.
ಪುನೀತ್ ರಾಜಕುಮಾರ್ ಅಭಿನಯದ ಅಪ್ಪು ಚಿತ್ರದ ಮೂಲಕ 2002 ರಲ್ಲಿ ಸ್ಯಾಂಡಲ್ವುಡ್ನಲ್ಲಿ ನಾಯಕಿಯಾಗಿ ನಟಿ ರಕ್ಷಿತಾ ಸಿನಿಪಯಣ ಆರಂಭಿಸಿದರು. ಈ ಚಿತ್ರದ ತೆಲುಗು ಮತ್ತು ತಮಿಳು ರಿಮೇಕ್ನಲ್ಲಿ ಕೂಡ ನಟಿ ರಕ್ಷಿತಾ ನಾಯಕಿಯಾಗಿದ್ದರು.
ನಟಿ ರಕ್ಷಿತಾ ಅವರ ಸಿನಿ ಕರಿಯರ್ಗೆ ಕಲಾಸಿಪಾಳ್ಯ ಚಿತ್ರ ಬಿಗ್ಬ್ರೇಕ್ ತಂದು ಕೊಟ್ಟಿತು. ಪುನೀತ್, ಸುದೀಪ್, ಶಿವರಾಜಕುಮಾರ್, ಉಪೇಂದ್ರ, ಶ್ರೀಮುರಳಿ, ದರ್ಶನ್ ಹೀಗೆ ಬಬಹುತೇಕ ಎಲ್ಲ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ.
ತೆಲುಗಿನಲ್ಲಿ ಚಿರಂಜೀವಿ, ನಾಗಾರ್ಜುನ, ಮಹೇಶ್ ಬಾಬು, ರವಿತೇಜ, ಎನ್.ಟಿ.ಆರ್ ಮುಂತಾದ ನಟರೊಂದಿಗೆ ನಟಿ ರಕ್ಷಿತಾ ಅಭಿನಯಿಸಿದ್ದಾರೆ.
ಪ್ರೇಮ್ ಜೊತೆ ವಿವಾಹವಾದ ನಂತರ ನಟನೆಗೆ ಗುಡ್ ಬೈ ಹೇಳಿದರು. ಆ ಬಳಿಕ ರಕ್ಷಿತಾ ಸ್ಯಾಂಡಲ್ವುಡ್ನಲ್ಲಿ ನಿರ್ಮಾಪಕಿ ಆದರು. ತಮ್ಮದೇ ಪ್ರೇಮ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣಕ್ಕಿಳಿದರು. ಶಿವರಾಜಕುಮಾರ್ ನೂರನೇ ಚಿತ್ರ ಜೋಗಯ್ಯ ನಿರ್ಮಾಣ ಮಾಡಿದರು.
ಡಿ.ಕೆ ಚಿತ್ರವನ್ನು ಪ್ರೇಮ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ನಿರ್ಮಿಸಿದ್ದಾರೆ. ಇತ್ತೀಚೆಗೆ ರಕ್ಷಿತಾ ಅವರು ತಮ್ಮನಿಗಾಗಿ ಏಕ್ ಲವ್ ಯಾ ಸಿನಿಮಾ ಮಾಡಿದ್ದರು. ಕಿರುತೆರೆಯಲ್ಲಿ ನಿರೂಪಕಿಯಾಗಿ ಸ್ವಯಂವರ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ರಕ್ಷಿತಾ ಇಂದು ಹಲವು ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿದ್ದಾರೆ.
2012 ರಲ್ಲಿ ಶ್ರೀರಾಮಲು ನೇತೃತ್ವದ ಬಿ.ಎಸ್.ಆರ್. ಕಾಂಗ್ರಸ್ ಮೂಲಕ ರಾಜಕೀಯಕ್ಕೆ ಧುಮುಕಿದ್ದ ರಕ್ಷಿತಾ 2013 ರಲ್ಲಿ ಜೆಡಿಎಸ್ ಪಕ್ಷ ಸೇರಿದರು. ನಂತರ 2014 ರಲ್ಲಿ ಬಿಜೆಪಿ ಸೇರಿದರು.
ರಕ್ಷಿತಾ 18 ವರ್ಷಗಳಿಂದ ಒಂದೇ ಒಂದು ಸಿನಿಮಾದಲ್ಲಿ ನಟಿಸಿಲ್ಲ. ಆದರೆ ಇವರ ಹೆಸರಲ್ಲಿ ನೂರಾರು ಕೋಟಿ ಆಸ್ತಿ ಇದೆ. ಸ್ಯಾಂಡಲ್ ವುಡ್ನಲ್ಲಿ ಇಂದಿಗೂ ಇವರ ಕ್ರೇಜ್ ಇದೆ. ಕೋಟ್ಯಾಂತರ ಅಭಿಮಾನಿಗಳನ್ನು ರಕ್ಷಿತಾ ಹೊಂದಿದ್ದಾರೆ.