)
Ruchi Gujjar hits producer with slipper: ಬಾಲಿವುಡ್ನ ನಿರ್ಮಾಪಕ ಕರಣ್ ಸಿಂಗ್ ಚೌಹಾಣ್ ವಿರುದ್ದ ನಟಿ ರುಚಿ ಗುಜ್ಜರ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ನಟಿ ರುಚಿ ಗುಜ್ಜರ್ ತಮ್ಮನ್ನು ವಂಚಿಸಿದ ನಿರ್ಮಾಪಕನಿಗೆ ಚಪ್ಪಲಿಯಿಂದ ಏಟು ಕೂಟ್ಟಿದ್ದಾರೆ. ಚಿತ್ರದ ಪ್ರೀಮಿಯರ್ ಶೋನಲ್ಲಿ ನಿರ್ಮಾಪಕರಿಗೆ ಚಪ್ಪಲಿಯಿಂದ ಹೊಡೆದ ವಿಡಿಯೋ ವೈರಲ್ ಆಗಿದೆ. ಈ ಘಟನೆಯ ನಂತರ ನಟಿ ನಿರ್ಮಾಪಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ನಿರ್ಮಾಪಕರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಟಿ ರುಚಿ ಗುಜ್ಜರ್ ನಿರ್ದೇಶಕರ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದು ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗೆ ಮುಂಬೈನ ಚಿತ್ರಮಂದಿರವೊಂದರಲ್ಲಿ ರುಚಿ ಗುಜ್ಜರ್ ಒಬ್ಬ ನಿರ್ದೇಶಕರೊಂದಿಗೆ ಕೆಟ್ಟದಾಗಿ ಜಗಳವಾಡಿದರು. ಅವರು ಕೆಲವು ಜನರೊಂದಿಗೆ ಚಿತ್ರಮಂದಿರದಲ್ಲಿ ಪ್ರಿಮಿಯರ್ ಶೋಗೆ ಬಂದಿದ್ದರು. ಈ ವೇಳೆ ನಿರ್ಮಾಪಕರೊಂದಿಗೆ ವಾಗ್ವಾದಕ್ಕೆ ಇಳಿದರು.
ಗುರುವಾರ ಮುಂಬೈನ ಚಿತ್ರಮಂದಿರವೊಂದರಲ್ಲಿ ಸೋ ಲಾಂಗ್ ವ್ಯಾಲಿ ಚಿತ್ರದ ಪ್ರಿಮಿಯರ್ ಪ್ರದರ್ಶನವಿತ್ತು. ನಿರ್ಮಾಪಕ ಕರಣ್ ಸಿಂಗ್ ಚೌಹಾಣ್ ತಮ್ಮ ಮತ್ತೊಬ್ಬ ಸಹ ನಿರ್ಮಾಪಕ ಮತ್ತು ಚಿತ್ರದ ನಿರ್ದೇಶಕ ಮನ್ ಸಿಂಗ್ ಜೊತೆ ಬಂದಿದ್ದರು. ಪ್ರದರ್ಶನದ ಸಮಯದಲ್ಲಿ ರುಚಿ ಗುಜ್ಜರ್ ಕೆಲವು ಜನರೊಂದಿಗೆ ಮುಂಬೈನ ಥಿಯೇಟರ್ಗೆ ಪ್ರತಿಭಟಿಸಲು ಬಂದರು. ಅವರು ಉಳಿದವರೊಂದಿಗೆ ನಿರ್ಮಾಪಕರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು.
ರುಚಿ ಮತ್ತು ಇತರರು ತಮ್ಮ ಕೈಯಲ್ಲಿ ಸೋ ಲಾಂಗ್ ವ್ಯಾಲಿಯ ಪೋಸ್ಟರ್ಗಳನ್ನು ಹೊಂದಿದ್ದರು, ಅದರ ಮೇಲೆ ರೆಡ್ ಕ್ರಾಸ್ ಗುರುತು ಇತ್ತು. ವಾದದ ನಡುವೆ, ರುಚಿ ನಿರ್ದೇಶಕ ಮಾನ್ ಸಿಂಗ್ ಅವರನ್ನು ಚಪ್ಪಲಿಯಿಂದ ಹೊಡೆದರು. ವೀಡಿಯೊದಲ್ಲಿ ಮೊದಲು ಅವರ ಮೇಲೆ ಕೂಗಾಡುವುದನ್ನು ಮತ್ತು ನಂತರ ಅವರ ಮೇಲೆ ಚಪ್ಪಲಿ ಎಸೆಯುವುದನ್ನು ಕಾಣಬಹುದು.
ನಿರ್ಮಾಪಕ ಕರಣ್ ಸಿಂಗ್ ಚೌಹಾಣ್ ಕಳೆದ ವರ್ಷ ತಮ್ಮನ್ನು ಸಂಪರ್ಕಿಸಿ, ಶೀಘ್ರದಲ್ಲೇ ಪ್ರಸಾರವಾಗಲಿರುವ ಹಿಂದಿ ಟಿವಿ ಧಾರಾವಾಹಿಯನ್ನು ನಿರ್ಮಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಅವರು ನನ್ನನ್ನು ಸಹ-ನಿರ್ಮಾಪಕರನ್ನಾಗಿ ಸೇರಿಸಲು ಮುಂದಾದರು. ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ಸಹ ಕಳುಹಿಸಿದರು. ಈ ಆಫರ್ ಅನ್ನು ನಂಬಿ ಜುಲೈ 2023 ಮತ್ತು ಜನವರಿ 2024 ರ ನಡುವೆ ಕರಣ್ ಅವರ ಸ್ಟುಡಿಯೋಗೆ ಲಿಂಕ್ ಮಾಡಲಾದ ಖಾತೆಗಳಿಗೆ ತಮ್ಮ ಕಂಪನಿ ಎಸ್ಆರ್ ಈವೆಂಟ್ ಮತ್ತು ಎಂಟರ್ಟೈನ್ಮೆಂಟ್ನಿಂದ ಹಲವಾರು ಬಾರಿ ಹಣ ವರ್ಗಾಯಿಸಿದ್ದಾರೆ ಎಂದು ರುಚಿ ಆರೋಪಿಸಿದ್ದಾರೆ.
ಆದರೆ ಆ ಪ್ರಾಜೆಕ್ಟ್ ಎಂದಿಗೂ ಪ್ರಾರಂಭವಾಗಲಿಲ್ಲ. ತಾನು ಹಣ ಕೇಳಿದಾಗ, ಅವರು ಬೆದರಿಕೆ ಹಾಕಲು ಪ್ರಾರಂಭಿಸಿದರು ಎಂದು ರುಚಿ ಆರೋಪಿಸಿದ್ದಾರೆ. ರುಚಿ ಕರಣ್ ಸಿಂಗ್ ವಿರುದ್ಧ ಮುಂಬೈನಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ರುಚಿ ಗುಜ್ಜರ್ ಯಾರು?
ರಾಜಸ್ಥಾನದ ಗುಜ್ಜರ್ ಕುಟುಂಬದಲ್ಲಿ ಜನಿಸಿದ ರುಚಿ ಗುಜ್ಜರ್ ಒಬ್ಬ ಮಾಡೆಲ್. 2023 ರಲ್ಲಿ, ಅವರು ಮಿಸ್ ಹರಿಯಾಣ ಪ್ರಶಸ್ತಿಯನ್ನು ಗೆದ್ದರು. ಅವರು ಜಬ್ ತು ಮೇರಿ ನಾ ಸಾಹಿ ಮತ್ತು ಹೆಲಿ ಮೇ ಚೋರ್ನಂತಹ ಸಂಗೀತ ವೀಡಿಯೊಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಈ ವರ್ಷ, ಮೆಟ್ ಗಾಲಾದಲ್ಲಿ ರುಚಿ ತನ್ನ ಸಾಂಪ್ರದಾಯಿಕ ನೋಟದಿಂದ ಗಮನ ಸೆಳೆದರು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.