)
Sai Pallavi: ಸಾಯಿ ಪಲ್ಲವಿಯನ್ನು ಇಷ್ಟಪಡದ ವೀಕ್ಷಕರು ಯಾರಾದರೂ ಇದ್ದಾರೆಯೇ? ಯಾರೂ ಇರುವುದಕ್ಕೆ ಸಾಧ್ಯವೇ ಇಲ್ಲ. ನಟಿ ಸಾಯಿ ಪಲ್ಲವಿ, ತಮ್ಮ ನೈಸರ್ಗಿಕ ಸೌಂದರ್ಯ, ಅದ್ಬುತವಾದ ನಟನೆಯಿಂದಲೇ ಕೋಟ್ಯಾನು ಕೋಟಿ ಅಭಿಮಾನಿಗಳನ್ನು ದೇಶದಾದ್ಯಂತ ಸಂಪಾದಿಸಿಕೊಂಡಿದ್ದಾರೆ. ತನ್ನ ಮೊದಲ ಚಿತ್ರದಿಂದಲೇ ಸಿನಿ ಪ್ರಿಯರಿಗೆ ಹತ್ತಿರವಾದ ಇವರು ಸರಣಿ ಹಿಟ್ಗಳನ್ನು ನೀಡುವ ಮೂಲಕ ನಟನೆಯಲ್ಲಿ ಛಾಪು ಮೂಡಿಸಿದ್ದಾರೆ. ನಟನೆಗೆ ಒತ್ತು ನೀಡುವ ಪಾತ್ರಗಳನ್ನು ಮಾಡುವಲ್ಲಿ ಈಕೆ ನಿಪುಣರು.
ಸಾಯಿ ಪಲ್ಲವಿ ಸಿನಿಮಾ ಎಂದರೆ ಅಭಿಮಾನಿಗಳಿಗೆ ಹಬ್ಬ. ಅವರಿಗಾಗಿಯೇ ಸಿನಿಮಾ ನೋಡುವ ಪ್ರೇಕ್ಷಕರು ಅನೇಕರಿದ್ದಾರೆ. ಸಾಯಿ ಪಲ್ಲವಿ ತಮ್ಮ ಪಾತ್ರಕ್ಕಾಗಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ನಟನೆಗೆ ಒತ್ತು ನೀಡುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವುದಲ್ಲದೆ, ಆ ಪಾತ್ರಗಳಿಗೆ ಜೀವ ತುಂಬುತ್ತಾರೆ ನಟಿ ಸಾಯಿ ಪಲ್ಲವಿ. ಇತ್ತೀಚೆಗೆ, ಸಾಯಿ ಪಲ್ಲವಿ ಮೇಕಪ್ಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಸಾಯಿ ಪಲ್ಲವಿ ಯಾವ ಸಿನಿಮಾಕ್ಕಾಗಿ ಇಷ್ಟೊಂದು ಕಷ್ಟಪಡುತ್ತಿದ್ದಾರೆ ಗೊತ್ತಾ? ಆ ಸಿನಿಮಾ ಬೇರೆ ಯಾವುದೂ ಅಲ್ಲ, ನ್ಯಾಚುರಲ್ ಸ್ಟಾರ್ ನಾನಿ ನಾಯಕನಾಗಿ ನಟಿಸಿರುವ ಶ್ಯಾಮ್ ಸಿಂಗರಾಯ್.
ನಾನಿ ಅವರ ಶ್ಯಾಮ್ ಸಿಂಗರಾಯ್ ಚಿತ್ರ ಭಾರಿ ಯಶಸ್ಸನ್ನು ಕಂಡಿತು. ಈ ಚಿತ್ರದಲ್ಲಿ ಕೃತಿ ಶೆಟ್ಟಿ ಮತ್ತು ಸಾಯಿ ಪಲ್ಲವಿ ನಾನಿ ಜೊತೆ ನಟಿಸಿದ್ದರು. ಈ ಚಿತ್ರದಲ್ಲಿ ಪಲ್ಲವಿ ದೇವದಾಸಿ ಪಾತ್ರದಲ್ಲಿ ನಟಿಸಿದ್ದರು. ಚಿತ್ರದ ಕೊನೆಯಲ್ಲಿ ಅವರು ವೃದ್ಧ ಮಹಿಳೆಯಾಗಿಯೂ ಕಾಣಿಸಿಕೊಂಡರು. ಇದಕ್ಕಾಗಿ ಸಾಯಿ ಪಲ್ಲವಿ ಸಾಕಷ್ಟು ಮೇಕಪ್ ಮಾಡಿಕೊಂಡಿದ್ದರು. ಶ್ಯಾಮ್ ಸಿಂಗರಾಯ್ ಚಿತ್ರದಲ್ಲಿನ ತಮ್ಮ ಅಭಿನಯದ ಮೂಲಕ ಸಾಯಿ ಪಲ್ಲವಿ ಪ್ರೇಕ್ಷಕರನ್ನು ಆಕರ್ಷಿಸಿದರು.