ಕೊನೆಗೂ ಗುಟ್ಟಾಗಿ ಎಂಗೇಜ್‌ ಆದ್ರಾ ನಟಿ ಸಮಂತಾ! ಪೋಟೋ ನೋಡಿ ನೆಟ್ಟಿಗರು ಶಾಕ್..‌

Samantha Marriage: ಸಮಂತಾ ರಹಸ್ಯ ನಿಶ್ಚಿತಾರ್ಥದ ಸುದ್ದಿ ಟಾಲಿವುಡ್‌ನಲ್ಲಿ ಹಾಟ್‌ ಟಾಫಿಕ್‌ ಆಗಿದೆ.. ಅವರ ಬೆರಳಿನಲ್ಲಿರುವ ವಜ್ರದ ಉಂಗುರದಿಂದಾಗಿ ಅವರು ರಾಜ್ ನಿದಿಮೋರು ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ..   

Written by - Savita M B | Last Updated : Mar 25, 2025, 05:45 PM IST
  • ಟಾಲಿವುಡ್ ಸ್ಟಾರ್ ನಾಯಕಿ ಸಮಂತಾ ರುತ್ ಪ್ರಭು ಸ್ವಲ್ಪ ಸಮಯದಿಂದ ಸುದ್ದಿಯಲ್ಲಿದ್ದಾರೆ.
  • ಈಗ ಅವರು ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹಾಟ್‌ ಟಾಫಿಕ್‌ ಆಗಿದೆ.
ಕೊನೆಗೂ ಗುಟ್ಟಾಗಿ ಎಂಗೇಜ್‌ ಆದ್ರಾ ನಟಿ ಸಮಂತಾ! ಪೋಟೋ ನೋಡಿ ನೆಟ್ಟಿಗರು ಶಾಕ್..‌

Actress Samantha: ಟಾಲಿವುಡ್ ಸ್ಟಾರ್ ನಾಯಕಿ ಸಮಂತಾ ರುತ್ ಪ್ರಭು ಸ್ವಲ್ಪ ಸಮಯದಿಂದ ಸುದ್ದಿಯಲ್ಲಿದ್ದಾರೆ. ಈಗ ಅವರು ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹಾಟ್‌ ಟಾಫಿಕ್‌ ಆಗಿದೆ.. ನಾಗ ಚೈತನ್ಯ ಅವರೊಂದಿಗಿನ ವಿವಾಹ ಮತ್ತು ವಿಚ್ಛೇದನದ ನಂತರ, ಅವರು ಆತ್ಮವಿಶ್ವಾಸದಿಂದ ಮುಂದುವರಿಯುತ್ತಿದ್ದಾರೆ ಮತ್ತು ಚಿತ್ರಗಳನ್ನು ಮಾಡುತ್ತಿದ್ದಾರೆ. 

Add Zee News as a Preferred Source

ಸಮಂತಾ ಅವರಿಂದ ವಿಚ್ಛೇದನ ಪಡೆದ ನಂತರ, ನಾಗಚೈತನ್ಯ ಡಿಸೆಂಬರ್ 2024 ರಲ್ಲಿ ನಟಿ ಶೋಭಿತಾ ಧೂಳಿಪಾಲ ಅವರನ್ನು ವಿವಾಹವಾದರು. ದಿ ಫ್ಯಾಮಿಲಿ ಮ್ಯಾನ್ 2 ಮತ್ತು ಸಿಟಾಡೆಲ್: ಹನಿ ಬನ್ನಿ ನಂತಹ ಸರಣಿಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ ರಾಜ್ & ಡಿಕೆ ಜೋಡಿಗಳಲ್ಲಿ ಒಬ್ಬರಾದ ರಾಜ್ ನಿಧಿಮೋರು ಅವರೊಂದಿಗೆ ಸಮತಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳಿವೆ. ಇತ್ತೀಚೆಗೆ ಒಂದು ಪ್ರಮುಖ ವದಂತಿ ಹೊರಹೊಮ್ಮಿದ್ದು, ಆ ಸುದ್ದಿಗೆ ಪೋಟೋವೊಂದು ಬಲ ತುಂಬಿದೆ. ಬೆರಳಿಗೆ ವಜ್ರದ ಉಂಗುರ ಧರಿಸಿರುವ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ:  ಮನೆಯ ಈ ದಿಕ್ಕಿನಲ್ಲಿ ಕನ್ನಡಿ ಇಡಿ... ಅಲ್ಲಿಂದಲೇ ಶುರುವಾಗುವುದು ಅದೃಷ್ಟದ ಸಮಯ! ತ್ರಿಮೂರ್ತಿಗಳ ಕೃಪಾಬಲದಿಂದ ಕುಬೇರ ಸಂಪತ್ತು ತುಂಬಿ ತುಳುಕುವುದು

ಅವರು ರಾಜ್ ನಿಧಿಮೋರು ಅವರೊಂದಿಗೆ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ಇದನ್ನು ದೃಢೀಕರಿಸುವ ಯಾವುದೇ ಪುರಾವೆಗಳಿಲ್ಲ.. ಇವು ಬರೀ ವದಂತಿಗಳಾಗಿವೆ.. ಈ ಹಿಂದೆ ಪಿಕಲ್ ಬಾಲ್ ಟೂರ್ನಮೆಂಟ್‌ನಲ್ಲಿ ಅವರು ಕೈ ಹಿಡಿದುಕೊಂಡು ಓಡಾಡುತ್ತಿದ್ದರು. ಆ ಸಮಯದಲ್ಲಿ ಸಮಂತಾ ಬಗ್ಗೆ ಡೇಟಿಂಗ್ ವದಂತಿಗಳು ಕೂಡ ಕೇಳಿಬಂದಿದ್ದವು.

ಇತ್ತೀಚೆಗೆ, ಸ್ಯಾಮ್-ರಾಜ್ ನಿಧಿಮೋರು ಮತ್ತೊಮ್ಮೆ ಪಾರ್ಟಿಯಲ್ಲಿ ಮಿಂಚಿದರು. ಈಗ, ಇದು ಮತ್ತೊಮ್ಮೆ ಅವರಿಬ್ಬರ ಬಗ್ಗೆ ಬಿಸಿ ಚರ್ಚೆಗೆ ನಾಂದಿ ಹಾಡಿದೆ. ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಅವರು ಎರಡನೇ ಬಾರಿಗೆ ಜೋಡಿಯಾಗಿ ಕಾಣಿಸಿಕೊಂಡಿರುವುದರಿಂದ ಡೇಟಿಂಗ್ ವದಂತಿಗಳು ಹರಡುತ್ತಿವೆ. ಸಮಂತಾ ಮತ್ತು ರಾಜ್ ನಿಧಿಮೋರು ಸ್ಪಷ್ಟನೆ ನೀಡಿದರೂ, ಈ ವದಂತಿಗಳಿಗೆ ಈಗಲೇ ಕಡಿವಾಣ ಬೀಳುವ ಸಾಧ್ಯತೆ ಕಡಿಮೆ. ಆದರೆ ಸ್ಯಾಮ್ ಅಥವಾ ರಾಜ್ ಇಬ್ಬರೂ ಇಲ್ಲಿಯವರೆಗೆ ತಮ್ಮ ಸುತ್ತಲಿನ ಡೇಟಿಂಗ್ ವದಂತಿಗಳಿಗೆ ಪ್ರತಿಕ್ರಿಯಿಸಿಲ್ಲ.

ಇದನ್ನೂ ಓದಿ:  ಮನೆಯ ಈ ದಿಕ್ಕಿನಲ್ಲಿ ಕನ್ನಡಿ ಇಡಿ... ಅಲ್ಲಿಂದಲೇ ಶುರುವಾಗುವುದು ಅದೃಷ್ಟದ ಸಮಯ! ತ್ರಿಮೂರ್ತಿಗಳ ಕೃಪಾಬಲದಿಂದ ಕುಬೇರ ಸಂಪತ್ತು ತುಂಬಿ ತುಳುಕುವುದು

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

...Read More

Trending News