)
Samantha Ruth Prabhu: ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಟಿ ಸಮಂತಾ ಅವರು ಇತ್ತೀಚೆಗೆ ಮಾಡಿರುವ ಪೋಸ್ಟ್ ಹಲವು ಅನುಮಾನಗಳನ್ನ ಹುಟ್ಟುಹಾಕಿದೆ. ಸ್ಯಾಮ್ ತಮ್ಮ ಪೋಸ್ಟ್ನಲ್ಲಿ 20-30 ವರ್ಷದೊಳಗಿನ ತಮ್ಮ ಆಲೋಚನೆಗಳ ಬಗ್ಗೆ ಬರೆದುಕೊಂಡಿದ್ದಾರೆ.
ನಟಿ ಸಮಂತಾ ತಮ್ಮ ದೀರ್ಘವಾದ ಪೋಸ್ಟ್ನಲ್ಲಿ, ʼತಾನು 20 ವರ್ಷದವಳಿದ್ದಾಗ ನಿಜವಾದ ಪ್ರೀತಿಯ ಬಗ್ಗೆ ಯಾರೂ ಹೇಳಿರಲಿಲ್ಲ. ಮಹಿಳೆಯರು 30ರ ವಯಸ್ಸಿನಲ್ಲಿ ನೋಡುವ ಎಲ್ಲವೂ ವಿಭಿನ್ನವಾಗಿರುತ್ತದೆ ಎಂದು ಹೇಳಿದ್ದಾರೆ. 30ರ ನಂತರ ನೀವು ಜಗತ್ತನ್ನು ನೋಡುವ ರೀತಿ ಮಾತ್ರವಲ್ಲ, ನಿಮ್ಮ ಸೌಂದರ್ಯ ಮತ್ತು ನಿಮ್ಮ ಹೊಳಪು ಕೂಡ ಬದಲಾಗುತ್ತದೆ. ಅದಕ್ಕಾಗಿಯೇ ನೀವು ಇಪ್ಪತ್ತರ ವಯಸ್ಸಿನಲ್ಲಿ ಜೀವನವನ್ನ ಆನಂದಿಸಬೇಕು ಎಂದು ಸ್ಯಾಮ್ ಹೇಳಿದ್ದಾರೆ.
"ನನ್ನ 20ರ ಹರೆಯವನ್ನ ವಿಶ್ರಾಂತಿ ಇಲ್ಲದೆ ಕಳೆದೆ. ಮನ್ನಣೆಗಾಗಿ ನಾನು ಹಂಬಲಿಸುತ್ತಿದ್ದೆ. ಇದು ನನ್ನ ಜೀವನವನ್ನ ಅಸ್ತವ್ಯಸ್ತಗೊಳಿಸಿತು. ಆ ಸಮಯದಲ್ಲಿ ನಾನು ನನ್ನನ್ನ ಎಷ್ಟು ಕಳೆದುಕೊಂಡೆ ಎಂದು ಯಾರಿಗೂ ತಿಳಿದಿರಲಿಲ್ಲ. ಆಗ ನನಗೆ ಪ್ರೀತಿಯ ಬಗ್ಗೆ ತಿಳಿದಿರಲಿಲ್ಲ. ನಿಜವಾದ ಪ್ರೀತಿ ನಮ್ಮೊಳಗೆ ಇದೆ ಮತ್ತು ಹೊರಗಿನಿಂದ ಬರುವುದಿಲ್ಲ ಎಂದು ಯಾರೂ ನನಗೆ ಹೇಳಲಿಲ್ಲ. ನಿಜವಾದ ಪ್ರೀತಿ ನಮ್ಮನ್ನ ಪ್ರೀತಿಸುವುದು ಎಂದು ನಂತರ ನನಗೆ ಅರ್ಥವಾಯಿತು" ಅಂತಾ ಸಮಂತಾ ಬರೆದುಕೊಂಡಿದ್ದಾರೆ.
30 ವರ್ಷ ತುಂಬಿದ ನಂತರ ನನ್ನ ಮನಸ್ಥಿತಿ ಬದಲಾಗಿದೆ. ಅದೇ ರೀತಿ ನಾನು ಎಲ್ಲದರ ಹಿಂದೆ ಓಡುವುದನ್ನ ನಿಲ್ಲಿಸಿದೆ. ಹಿಂದಿನ ತಪ್ಪುಗಳ ನೆನಪುಗಳನ್ನ ಹೊತ್ತುಕೊಂಡು ಹೋಗುವುದನ್ನ ನಿಲ್ಲಿಸಿದೆ. ಸಾರ್ವಜನಿಕವಾಗಿ ಒಬ್ಬಂಟಿಯಾಗಿರುವಾಗ ನಾನು ಇಬ್ಬರು ವಿಭಿನ್ನ ವ್ಯಕ್ತಿಗಳಾಗಿರುವುದನ್ನ ಸಹ ನಿಲ್ಲಿಸಿದೆ. ಓಟವನ್ನ ನಿಲ್ಲಿಸಿ ಜೀವನ ಆನಂದಿಸಲು ಬಯಸುತ್ತೇನೆ ಅಂತಾ ಸಮಂತಾ ಹೇಳಿದ್ದಾರೆ. ಅವರ ಈ ಪೋಸ್ಟ್ ಈಗ ಸಖತ್ ವೈರಲ್ ಆಗುತ್ತಿದೆ.
ಟಾಲಿವುಡ್ನಲ್ಲಿ ಸ್ಟಾರ್ ನಾಯಕಿಯಾಗಿ ವಿಶೇಷ ಮನ್ನಣೆ ಗಳಿಸಿರುವ ನಟಿ ಸಮಂತಾ, ತಮ್ಮ ವೃತ್ತಿಜೀವನದಲ್ಲಿ ಅನೇಕ ಯಶಸ್ವಿ ಚಿತ್ರಗಳನ್ನ ನೀಡಿದ್ದಾರೆ. ಮದುವೆಯ ನಂತರವೂ ಅವರು ಚಲನಚಿತ್ರಗಳಲ್ಲಿ ನಟಿಸುವುದನ್ನ ಮುಂದುವರೆಸಿದರು, ಆದರೆ ನಟ ನಾಗ ಚೈತನ್ಯ ಅವರಿಂದ ವಿಚ್ಛೇದನದ ನಂತರ ವಿರಾಮ ತೆಗೆದುಕೊಂಡರು.
'ಪುಷ್ಪ: ದಿ ರೈಸ್' ಚಿತ್ರದಲ್ಲಿ ಸಮಂತಾ ಮೊದಲ ಬಾರಿಗೆ ಐಟಂ ಹಾಡಿನಲ್ಲಿ ನೃತ್ಯ ಮಾಡಿದ್ದು ಎಲ್ಲರಿಗೂ ತಿಳಿದಿರುವ ವಿಷಯ. 'ಊ ಅಂಟವಾ ಮಾವ.. ಊ ಅಂಟಾವಾ ಮಾವ' ಹಾಡಿನಲ್ಲಿ ಸಮಂತಾ ಅವರ ಹಾಟ್ ಲುಕ್ ಮತ್ತು ನೃತ್ಯವು ಚಿತ್ರದ ಪ್ರಮುಖ ಆಕರ್ಷಣೆಯಾಗಿತ್ತು. ಆ ಹಾಡು ಚಿತ್ರದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ತಮ್ಮ ವೃತ್ತಿಜೀವನದಲ್ಲಿ ವಿಭಿನ್ನ ಪಾತ್ರಗಳನ್ನ ಮಾಡಲು ಮತ್ತು ಹೊಸ ಸವಾಲುಗಳನ್ನ ಸ್ವೀಕರಿಸುವ ಮೂಲಕ ಇನ್ನಷ್ಟು ಕಲಿಯಲು ನಾನು ಯಾವಾಗಲೂ ಸಿದ್ಧವೆಂದು ನಟಿ ಸಮಂತಾ ಹೇಳುತ್ತಾರೆ. ಈ ನಿಟ್ಟಿನಲ್ಲಿ ಅವರು ನವೀನ ಹೆಜ್ಜೆಗಳನ್ನ ಇಡುತ್ತಿದ್ದಾರೆ. ಸಮಂತಾ ಇತ್ತೀಚೆಗೆ ಶುಭಂ ಚಿತ್ರದ ಮೂಲಕ ನಿರ್ಮಾಪಕಿಯಾದರು. ಅವರು ಹೊಸ ಬ್ಯಾನರ್ ಸ್ಥಾಪಿಸಿ ಈ ಚಿತ್ರವನ್ನ ನಿರ್ಮಿಸಿದ್ದಾರೆ. ಇದು ಅವರ ಮೊದಲ ಚಿತ್ರವಾದರೂ, ಶುಭಂ ಅವರಿಗೆ ದೊಡ್ಡ ಯಶಸ್ಸನ್ನ ತಂದುಕೊಟ್ಟಿತು. ಮತ್ತೊಂದೆಡೆ ಸಮಂತಾ ಹಲವಾರು ವೆಬ್ ಸರಣಿಗಳಲ್ಲಿಯೂ ನಿರತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರು ನಿರ್ದೇಶನದತ್ತವೂ ಹೆಜ್ಜೆ ಹಾಕಲಿದ್ದಾರೆ ಎಂದು ಹೆಳಲಾಗಿದೆ.