"ಆ ಸ್ಟಾರ್‌ ನಟ ಬಂದು ನೇರವಾಗಿ ಮಂಚಕ್ಕೆ ಕರಿತಾರೆ": ಸ್ಟಾರ್‌ ನಟಿಯ ಬೋಲ್ಡ್‌ ಹೇಳಿಕೆ

Actress Shakeela: ನಟಿ ಶಕೀಲಾ ಕೊಟ್ಟ ಬೋಲ್ಡ್‌ ಹೇಳಿಕೆಯೊಂದು ಸಿಕ್ಕಾಪಟ್ಟೆ ವೈರಲ್‌ ಆಗಿದೆ. ದಶಕದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದ ಬಗ್ಗೆ ನಟಿ ಶಕೀಲಾ ಮಾತನಾಡಿದ್ದಾರೆ.

Written by - Chetana Devarmani | Last Updated : Apr 26, 2025, 01:07 PM IST
  • ನಟಿ ಶಕೀಲಾ ಕೊಟ್ಟ ಬೋಲ್ಡ್‌ ಹೇಳಿಕೆ
  • ಶಕೀಲಾ ಹೇಳಿಕೆಯೊಂದು ಸಿಕ್ಕಾಪಟ್ಟೆ ವೈರಲ್‌
  • ತಮಿಳು ಚಿತ್ರರಂಗದ ಬಗ್ಗೆ ಶಕೀಲಾ ಹೇಳಿಕೆ
"ಆ ಸ್ಟಾರ್‌ ನಟ ಬಂದು ನೇರವಾಗಿ ಮಂಚಕ್ಕೆ ಕರಿತಾರೆ": ಸ್ಟಾರ್‌ ನಟಿಯ ಬೋಲ್ಡ್‌ ಹೇಳಿಕೆ

Actress Shakeela bold statement: ನಟಿ ಶಕೀಲಾ ಒಂದು ಕಾಲದ ಬೋಲ್ಡ್‌ ಬ್ಯೂಟಿ. ಇವರ ಸಿನಿಮಾಗಳು ಪಡ್ಡೆಹುಡುಗರ ನಿದ್ದೆಕೆಡಿಸುತ್ತಿದ್ದವು. ಬೋಲ್ಡ್‌ ಸಿನಿಮಾಗಳಿಂದ ಹೆಸರು ಮಾಡಿರುವ ನಟಿ ಶಕೀಲಾ ಸ್ಟಾರ್‌ ನಟರ ಬಗ್ಗೆ ಮಾತನಾಡಿದ್ದಾರೆ. ಈ ಹೇಳಿಕೆ ಫ್ಯಾನ್ಸ್‌ಗೆ ಶಾಕ್‌ ನೀಡಿದೆ. 

Add Zee News as a Preferred Source

90ರ ದಶಕದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಶಕೀಲಾ ಖ್ಯಾತ ಹೆಸರು. ಆ ಕಾಲದಲ್ಲಿ ಶಕೀಲಾ ನಟನೆಯ ಬೋಲ್ಡ್‌ ಸಿನಿಮಾಗಳಿ  ಸ್ಟಾರ್ ಹೀರೋಗಳ ಚಿತ್ರಗಳಿಗೆ ಕೂಡ ಸೆಡ್ಡು ಹೊಡೆದಿದ್ದವು ಎಂಬ ಉಲ್ಲೇಖ ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿದೆ.

ಕೆಲವು ವರ್ಷದ ಬಳಿಕ ನಟಿ ಶಕೀಲಾ ಬೋಲ್ಡ್‌ ಸಿನಿಮಾಗಳಿಂದ ಅಂತರ ಕಾಪಾಡಿಕೊಂಡು ಬಂದರು. ಬಳಿಕ ಮುಖ್ಯವಾಹಿನಿ ಚಿತ್ರಗಳಲ್ಲಿ ನಟಿಸಲು ಆರಂಭಿಸಿದರು. ತಮಿಳು ಚಿತ್ರಗಳಲ್ಲಿನ ಅಭಿನಯಕ್ಕೆ ಮೆಚ್ಚುಗೆ ಗಳಿಸಿದರು. 

ಶಕೀಲಾ ಮಲಯಾಳಂ ಚಿತ್ರರಂಗದ ಕುರಿತು ಮಾತನಾಡಿದ್ದರು. ಮಲಯಾಳಂ ಚಿತ್ರರಂಗದಲ್ಲಿನ ಕಿರುಕುಳದ ಬಗ್ಗೆ ನಟಿ ಶಕೀಲಾ ಮಾತನಾಡಿದ್ದರು. ಇದು ಕೇವಲ ಮಲಯಾಳಂ ಚಿತ್ರರಂಗದ ಸಮಸ್ಯೆಯಲ್ಲ. ಪ್ಯಾನ್ ಇಂಡಿಯಾ ಸಮಸ್ಯೆ ಎಂದು ನಟಿ ಶಕೀಲಾ ಹೇಳಿದ್ದರು.

ಇದನ್ನೂ ಓದಿ: ಕೇವಲ 3 ಚಿತ್ರದ ಗಳಿಕೆ 3200 ಕೋಟಿ !29ನೇ ವಯಸ್ಸಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎನ್ನುವ ಪಟ್ಟ!ಈ ಫೋಟೋದಲ್ಲಿರುವ ಪೋರಿ ಯಾರು ಗೊತ್ತಾಯ್ತಾ ?

ಮಲಯಾಳಂ ಚಿತ್ರರಂಗದಲ್ಲಿ ಸಮಿತಿ ರಚನೆ ಆಗಿದೆ. ಇದೇ ರೀತಿ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕೂಡ ಸಮಿತಿ ರಚನೆ ಆಗಬೇಕು. ಮಲಯಾಳಂ ಚಿತ್ರರಂಗಕ್ಕಿಂತ ತಮಿಳು ಚಿತ್ರರಂಗಲ್ಲಿನ ಇಂತಹ ಪರಿಸ್ಥಿತಿ ಹೆಚ್ಚಾಗಿದೆ ಎಂದಿದ್ದರು. 

ತೆಲುಗು ಚಿತ್ರರಂಗದಲ್ಲಿ ಸ್ಟಾರ್‌ ಹೀರೋಗಳೇ ನೇರವಾಗಿ ಮಂಚಕ್ಕೆ ಕರೆಯುತ್ತಾರೆ. ನಿರ್ದೇಶಕರು ಮತ್ತು ನಿರ್ಮಾಪಕರ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಒಪ್ಪಂದದಲ್ಲಿಯೇ ಬರೆದಿರಲಾಗುತ್ತದೆ. ಮುಂದಿನ ಚಿತ್ರಕ್ಕೆ ಕರೆಯುತ್ತೇವೆ ಎಂದು ಹೇಳಿ ಅಲ್ಲಿನ ಮ್ಯಾನೇಜರ್‌ಗಳು ಕೂಡ ಅಡ್ಜಸ್ಟ್‌ಮೆಂಟ್ ಮಾಡಿಕೊಳ್ಳುತ್ತಾರೆ ಎಂದು ಶಕೀಲಾ ಹೇಳಿದ್ದರು.

ಹಿಂದಿ ಚಿತ್ರರಂಗದಲ್ಲಿ ಕೂಡ ಈ ಸಮಸ್ಯೆ ಇದೆ. ಬಾಲಿವುಡ್‌ ನಲ್ಲಿ ಎಲ್ಲರೂ ಸ್ನೇಹಿತರಾಗುತ್ತಾರೆ. ಹೀಗಾಗಿ ಅವರಿಗೆ ಅದು ತೊಂದರೆ ಎಂದು ಅನಿಸುವುದಿಲ್ಲ. ಕೆಲವರು ಈ ಬಗ್ಗೆ ಹೇಳಿಕೊಳ್ಳುತ್ತಾರೆ. ಇನ್ನೂ ಕೆಲವರು ನೋವನ್ನು ನುಂಗುತ್ತಾರೆ. ಒತ್ತಾಯಪೂರ್ವಕವಾಗಿ ಮಂಚಕ್ಕೆ ಕರೆದರೆ ಖಡಕ್ ಎಚ್ಚರಿಕೆಯನ್ನು ನೀಡಬೇಕು ಎಂದಿದ್ದಾರೆ.

ಇದನ್ನೂ ಓದಿ: ನಾನು ಏಳೆಂಟು ಜನರನ್ನು ಪ್ರೀತಿಸುತ್ತಿದ್ದೆ.. ಚಿಕ್ಕ ವಯಸ್ಸಿಗೆ ಅದನ್ನೆಲ್ಲ ನೋಡಿದೆ : ನಟಿ ಶಕೀಲಾ   

ಹೇಮಾ ವರದಿಯಲ್ಲಿ ಉಲ್ಲೇಖವಾದ ವಿಚಾರವನ್ನು ಶಕೀಲಾ ಒಪ್ಪಿಕೊಂಡಿದ್ದಾರೆ. ಆ ವರದಿಯಲ್ಲಿರುವಂತೆ ಎಣ್ಣೆ ಹೊಡೆದು ನಾಯಕಿಯ ರೂಮ್‌ಗೆ ನುಗ್ಗುವ ಸಂಪ್ರದಾಯ ಮಲಯಾಳಂನಲ್ಲಿದೆ ಎಂದಿದ್ದಾರೆ. 

ಸಂದರ್ಶನದಲ್ಲಿ ತಮಗಾದ ಅನುಭವವನ್ನೂ ಶಕೀಲಾ ಹಂಚಿಕೊಂಡಿದ್ದಾರೆ. ಮಲಯಾಳಂ ಚಿತ್ರರಂಗವನ್ನೇ ದ್ವೇಷಿಸುವಷ್ಟು ನನಗೆ ಹಿಂಸೆ ನೀಡಿದ್ದರು ಎಂದು ಶಕೀಲಾ ಹೇಳಿದ್ದಾರೆ. ನನ್ನ ಮೊದಲ ಚಿತ್ರಕ್ಕೆ ನಾನು ಬಿಕಿನಿ ಹಾಕಿದ್ದೆ. ಆಗ ನನಗೆ ಮೇಕಪ್ ಮಾಡಲು ಬಂದವನು ಎಲ್ಲೆಲ್ಲಿ ಮತ್ತು ಹೇಗೆಲ್ಲ ಮುಟ್ಟಿದ್ದ ಅನ್ನುವುದು ನನಗೆ ಮಾತ್ರ ಗೊತ್ತು ಎಂದು ಹೇಳಿದ್ದಾರೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News