)
Actress Shalini Pandey: ಸಿನಿರಂಗದಲ್ಲಿ ಹೆಸರು ಮಾಡಿರುವ ಅನೇಕ ನಟಿಯರ ಹಿಂದೆ ಸಾಕಷ್ಟು ನೋವಿನ ದಿನಗಳಿವೆ. ಇತ್ತ ಸಿನಿಮಾರಂಗದಲ್ಲಿ ನೆಲೆನಿಂತ ಮೇಲೆಯೂ ಕೂಡ ಎಲ್ಲರ ಜೀವನ ಹೂವಿನ ಹಾಸಿಗೆಯಾಗಿರುವುದಿಲ್ಲ. ಈ ಪೈಕಿ ಇಲ್ಲೊಬ್ಬ ತಾರೆ ತನ್ನ ಕನಸುಗಳನ್ನು ನನಸಾಗಿಸಿಕೊಳ್ಳಲು ತಮ್ಮ ಸ್ವಂತ ತಂದೆಯನ್ನು ಎದುರು ಹಾಕಿಕೊಳ್ಳಬೇಕಾಯಿತು. ಆ ನಟಿ ಬೇರೆ ಯಾರು ಅಲ್ಲ... ಅವರೇ‘ಅರ್ಜುನ್ ರೆಡ್ಡಿ’ ಚಿತ್ರದ ಮೂಲಕ ಸಖತ್ ಹೆಸರು ಮಾಡಿದ ಶಾಲಿನಿ ಪಾಂಡೆ.
ಶಾಲಿನಿ ಎಂಜಿನಿಯರಿಂಗ್ ಪದವೀಧರೆ ಆದರೂ, ಬಾಲ್ಯದಿಂದಲೇ ನಟನೆಯತ್ತ ಹೆಚ್ಚಿನ ಆಸಕ್ತಿ ಹೊಂದಿದ್ದರು. ಆದರೆ ಅವರ ತಂದೆಗೆ ಇದು ಇಷ್ಟವಿರಲಿಲ್ಲ. ಮಗಳು ಐಟಿ ಉದ್ಯೋಗದಲ್ಲಿ ನೆಲೆಸಬೇಕು ಎಂಬುದು ಅವರ ಕನಸಾಗಿತ್ತು. ಆದರೆ ಅವರಿಗೆ ಈ ದಾರಿ ಇಷ್ಟವಿರಲಿಲ್ಲ. ಆದ್ದರಿಂದ ನಟನೆಯತ್ತ ಸಾಗಬೇಕೆಂಬ ನಿರ್ಧಾರ ಮಾಡಿಕೊಂಡು, ‘ಅರ್ಜುನ್ ರೆಡ್ಡಿ’ ಸಿನಿಮಾದ ನಿರ್ದೇಶಕ ಸಂದೀಪ್ ವಂಗಾ ಅವರನ್ನು ಭೇಟಿಯಾಗಲು ಕೂಡ ತನ್ನ ತಂದೆಯನ್ನು ಮನವೊಲಿಸಲು ಕಷ್ಟಪಟ್ಟರು. ಚಿತ್ರದ ಚಿತ್ರೀಕರಣ ಪ್ರಾರಂಭವಾಗಲು ತಿಂಗಳುಗಳು ಬೇಕಾಯಿತು. ಇದರಿಂದ ತಂದೆ ಚಿಂತಿತರಾಗಿ ಮಗಳನ್ನು ಬೇರೆ ಕೆಲಸ ಹಿಡಿಯುವಂತೆ ಒತ್ತಾಯಿಸಿದರು. ಆದರೆ ಶಾಲಿನಿ ತನ್ನ ಕನಸನ್ನು ತ್ಯಜಿಸಲಿಲ್ಲ. ಮುಂಬೈಗೆ ತೆರಳಿ ಅದೃಷ್ಟ ಪರೀಕ್ಷಿಸಲು ಬಯಸಿದಳು. ಆದರೆ ರಿಟರ್ನ್ ಟಿಕೆಟ್ ಬುಕ್ ಮಾಡಿದ ನಂತರವೇ ತಂದೆ ಒಪ್ಪಿಕೊಂಡರು.
ಮುಂಬೈಗೆ ಹೋದ ನಂತರವೂ ತಂದೆಯಿಂದ ನಿರಂತರ ಕರೆಗಳು ಬರುತ್ತಿದ್ದವು. "ಮನೆಗೆ ಹಿಂದಿರುಗು" ಎಂಬ ಒತ್ತಡ ಅವಳನ್ನು ಬೇಸರಗೊಳಿಸಿತು. ಒಂದು ಹಂತದಲ್ಲಿ ತನ್ನ ತಂದೆಗೆ ತಾನು ಎಲ್ಲಿದ್ದೇನೆಂದು ಹೇಳದೆ ಕೇವಲ ಇಮೇಲ್ ಕಳುಹಿಸಿದ್ದಾಗಿ ಶಾಲಿನಿ ನೆನಪಿಸಿಕೊಂಡರು. "ನಾನು ಹಿಂದಿರುಗುವುದಿಲ್ಲ" ಎಂದು ಸ್ಪಷ್ಟವಾಗಿ ಹೇಳಿದ್ದರಿಂದ ತಂದೆ ಪೊಲೀಸರಿ ಹೇಳುವುದಾಗಿ ಪಡೆಯುವುದಾಗಿ ಬೆದರಿಕೆ ಹಾಕಿದರು. ಆದರೆ ಶಾಲಿನಿ ಹೆದರದೆ ತನ್ನ ಹಾದಿಯಲ್ಲೇ ಸಾಗಿದರು. ಈ ಘಟನೆ ಬಳಿಕ ತಂದೆ–ಮಗಳು ಸಂಬಂಧ ಹಲವು ದಿನಗಳವರೆಗೆ ಅಂತರದಲ್ಲಿ ಇತ್ತು.
ನಂತರ ಅರ್ಜುನ್ ರೆಡ್ಡಿ ಸಿನಿಮಾದ ಮೂಲಕ ಶಾಲಿನಿಯ ಕನಸಿನ ಹಾದಿ ಸಫಲವಾಯಿತು. ಈ ಚಿತ್ರ ಬಿಡುಗಡೆಗೊಂಡು ಭರ್ಜರಿ ಯಶಸ್ಸು ಕಂಡಿತು. ಪ್ರೀತಿ ಪಾತ್ರದಲ್ಲಿ ಶಾಲಿನಿ ಪಾಂಡೆಗೆ ದೇಶಾದ್ಯಂತ ಅಭಿಮಾನಿಗಳ ಮೆಚ್ಚುಗೆ ದೊರಕಿತು. ಈ ಯಶಸ್ಸಿನ ಬಳಿಕ, ತಂದೆಯೂ ಮಗಳ ಪರಿಶ್ರಮವನ್ನು ಒಪ್ಪಿಕೊಂಡರು. ತಮ್ಮ ಮಗಳನ್ನು ಅರ್ಥಮಾಡಿಕೊಂಡು ಕ್ಷಮೆಯಾಚಿಸಿದರು. ಈಗ ಅವರು ಶಾಲಿನಿಯ ಸಾಧನೆಗೆ ಹೆಮ್ಮೆಪಡುತ್ತಿದ್ದಾರೆ.
ಇತ್ತೀಚಿನ ಸಂದರ್ಶನದಲ್ಲಿ ಶಾಲಿನಿ ತಮ್ಮ ಈ ಎಲ್ಲ ಜೀವನದ ಹೋರಾಟಗಳನ್ನು ಹಂಚಿಕೊಂಡರು. ಆದರೆ ಕೆಲವು ಮಾಧ್ಯಮಗಳು ಅವರ ಮಾತುಗಳನ್ನು ತಪ್ಪಾಗಿ ಅರ್ಥೈಸಿದವು. "ತಂದೆಗೆ ಪೊಲೀಸರಿಂದ ಬೆದರಿಕೆ ಹಾಕಿದ್ದೇನೆ ಎಂಬ ಸುದ್ದಿ ಹಬ್ಬಿವೆ, ಆದರೆ ಅದು ಸುಳ್ಳು" ಎಂದು ಅವರು ಸ್ಪಷ್ಟಪಡಿಸಿದರು. "ನಾನು ತಂದೆಯನ್ನು ಯಾವತ್ತೂ ದೂಷಿಸುವ ಉದ್ದೇಶ ಹೊಂದಿರಲಿಲ್ಲ. ಕೇವಲ ನನ್ನ ಹೋರಾಟವನ್ನು ಹಂಚಿಕೊಳ್ಳಲು ಬಯಸಿದೆ" ಎಂದರು. ಮುಂಬೈನಲ್ಲಿ ಇಬ್ಬರು ರೂಮ್ಮೇಟ್ಗಳೊಂದಿಗೆ ನಾನು ವಾಸಿಸುತ್ತಿದ್ದೆ, ಆದರೆ ಈ ವಿಷಯವನ್ನೂ ಕೆಲವರು ತಪ್ಪಾಗಿ ಬರೆದಿದ್ದಾರೆಂದು ಅವರು ವಿಷಾದಿಸಿದರು.
"22 ವರ್ಷಗಳ ಕಾಲ ನಾನು ನನ್ನ ತಂದೆಯ ಮಾತನ್ನು ಕೇಳಿದ್ದೇನೆ. ಆದರೆ ಒಮ್ಮೆ ಮಾತ್ರ ನಾನು ನನ್ನ ಹೃದಯದ ಮಾತನ್ನು ಕೇಳಿ ನಟನೆಯತ್ತ ಬಂದೆ" ಎಂದು ಶಾಲಿನಿ ಸಂದರ್ಶನದಲ್ಲಿ ಹೇಳಿದರು. ಇಂದು ಆ ನಿರ್ಧಾರವೇ ಅವಳ ಜೀವನವನ್ನು ಬದಲಿಸಿದೆ.