ಮದುವೆ ಪ್ರಸ್ತಾಪ ಮುಂದಿಟ್ಟ ಸಲ್ಮಾನ್‌ ಖಾನ್‌ಗೆ ನೋ ಎಂದು ರಿಜೆಕ್ಟ್‌ ಮಾಡಿದ್ದ ಖ್ಯಾತ ನಟಿ! ಐಶ್ವರ್ಯ.. ಕತ್ರಿನಾ ಅಲ್ಲ..

Famous Actress: ಹಮ್ ದಿಲ್ ದೇ ಚುಕೇ ಸನಮ್ ಸೆಟ್ ನಲ್ಲಿ, ಸಲ್ಮಾನ್ ಖಾನ್ ಒಬ್ಬ ನಟಿಯನ್ನು ಸಂಪರ್ಕಿಸಿ ತನ್ನನ್ನು ಮದುವೆಯಾಗುತ್ತೀಯಾ ಎಂದು ಕೇಳಿದ್ದರಂತೆ! ಹಾಗಾದ್ರೆ ಆ ನಟಿ ಯಾರು?    

Written by - Savita M B | Last Updated : Apr 5, 2025, 02:30 PM IST
  • ಬಾಲಿವುಡ್ ನಟ ಸಲ್ಮಾನ್ ಖಾನ್ 50 ವರ್ಷ ದಾಟಿದ್ದರೂ ಭಾರತದ ಎಲಿಜಿಬಲ್‌ ಬ್ಯಾಚುಲರ್ ಎಂದು ಗುರುತಿಸಲ್ಪಟ್ಟಿದ್ದಾರೆ.
  • ಸಲ್ಮಾನ್ ಖಾನ್ ನಟಿಯನ್ನು ಮದುವೆಯಾಗಲು ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಮದುವೆ ಪ್ರಸ್ತಾಪ ಮುಂದಿಟ್ಟ ಸಲ್ಮಾನ್‌ ಖಾನ್‌ಗೆ ನೋ ಎಂದು ರಿಜೆಕ್ಟ್‌ ಮಾಡಿದ್ದ ಖ್ಯಾತ ನಟಿ! ಐಶ್ವರ್ಯ.. ಕತ್ರಿನಾ ಅಲ್ಲ..

Salman  Khan: ಬಾಲಿವುಡ್ ನಟ ಸಲ್ಮಾನ್ ಖಾನ್ 50 ವರ್ಷ ದಾಟಿದ್ದರೂ ಭಾರತದ ಎಲಿಜಿಬಲ್‌ ಬ್ಯಾಚುಲರ್ ಎಂದು ಗುರುತಿಸಲ್ಪಟ್ಟಿದ್ದಾರೆ. ಸಲ್ಲು ಭಾರತೀಯ ಚಲನಚಿತ್ರೋದ್ಯಮದ ಪ್ರಮುಖ ನಟ.. ಅವರಿಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ. ಈಗ ಬ್ರಹ್ಮಚಾರಿಯಾಗಿರುವ ಸಲ್ಮಾನ್ ಖಾನ್ ಅವರನ್ನು ಮದುವೆಯಾಗಲು ಮಹಿಳಾ ಅಭಿಮಾನಿಗಳು ಸಾಲುಗಟ್ಟಿ ನಿಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ. ಸಲ್ಮಾನ್ ಖಾನ್ ಸೂಪರ್ ಹಿಟ್ ಸಿನಿಮಾಗಳಲ್ಲಿ ಸೂಪರ್ ಜೋಡಿಗಳೊಂದಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಆದರೆ ಇಲ್ಲಿಯವರೆಗೆ, ನಿಜ ಜೀವನದಲ್ಲಿ ಅವರ ಸಂಗಾತಿಯಾಗಲು ಯಾರೂ ಮುಂದೆ ಬಂದಿಲ್ಲ. ಒಂದು ವರದಿಯ ಪ್ರಕಾರ, ಸಲ್ಮಾನ್ ಖಾನ್ ಒಬ್ಬ ನಟಿಯನ್ನು ಮದುವೆಯಾಗಲು ಕೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ.. 

Add Zee News as a Preferred Source

ಇದನ್ನೂ ಓದಿ: ಹೌದು; ಆಕೆ ನನ್ನ ಗರ್ಲ್‌ಫ್ರೆಂಡ್‌...- ಡಿವೋರ್ಸ್ ಬಳಿಕ 2ನೇ ಮದುವೆ ಬಗ್ಗೆ ಶಿಖರ್ ಧವನ್ ಹೇಳಿಕೆ! ತನ್ನ ಬದುಕಿನ ಎರಡನೇ ʼಪ್ರೀತಿʼಯನ್ನ ಪರಿಚಯಿಸಿದ ʼಗಬ್ಬರ್‌ ಸಿಂಗ್‌ʼ

ಸಂಜಯ್ ಲೀಲಾ ಬನ್ಸಾಲಿ ಅವರ ಸೋದರ ಸೊಸೆ ಮತ್ತು ನಟಿ ಶರ್ಮೀನ್ ಸೇಗಲ್ ಮೆಹ್ತಾ ಸಲ್ಮಾನ್ ಖಾನ್ ಅವರ ವಿವಾಹ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ETimes ಜೊತೆ ಮಾತನಾಡಿದ ನಟಿ ಶರ್ಮೀನ್ ಸೆಗಲ್, ಸಲ್ಮಾನ್ ಖಾನ್ ಅವರನ್ನು ಮೊದಲ ಬಾರಿಗೆ ಭೇಟಿಯಾದ ಅನುಭವವನ್ನು ಹಂಚಿಕೊಂಡರು. ʼಹಮ್ ದಿಲ್ ದೇ ಚುಕೇ ಸನಮ್ ಚಿತ್ರದ ಸೆಟ್ ನಲ್ಲಿ ಶರ್ಮಿನ್ ಸಲ್ಲು ಅವರನ್ನು ಮದುವೆಯಾಗುತ್ತೀಯಾ ಎಂದು ಒಬ್ಬ ವ್ಯಕ್ತಿ ಕೇಳಿದ. ಹಾಗಾದರೆ, ಸಲ್ಮಾನ್ ಖಾನ್ ನನ್ನನ್ನು ಮದುವೆಯಾಗುತ್ತಾರಾ? ಎಂದು ನಾನು ಶಾಕ್‌ ಆದೆ.. ಆದರೆ ಅವರು ತಮಾಷೆಯಾಗಿ ಏನೋ ಕೇಳಿದರು. ನಂತರ ನಾನು ನಕ್ಕು ಸುಮ್ಮನಾದೆʼ ಎಂದರು.. ಭಾರತೀಯ ಕ್ರೇಜಿ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಮದುವೆಯಾಗುವಂತೆ ವ್ಯಕ್ತಿಯೊಬ್ಬರು ತಮ್ಮನ್ನು ಕೇಳಿಕೊಂಡಿದ್ದಾರೆ ಎಂದು ಹಲವು ವರ್ಷಗಳ ನಂತರ ಬಹಿರಂಗಪಡಿಸಿದ ನಟಿ ಶರ್ಮೀನ್, ಅವರು ನಟಿಸಿದ ಪ್ರತಿಯೊಂದು ಚಿತ್ರವನ್ನು ನಾನು ಪ್ರೀತಿಸುತ್ತಿದ್ದೆ ಎಂದು ಹೇಳಿದರು. 

ಇದನ್ನೂ ಓದಿ: ಹೌದು; ಆಕೆ ನನ್ನ ಗರ್ಲ್‌ಫ್ರೆಂಡ್‌...- ಡಿವೋರ್ಸ್ ಬಳಿಕ 2ನೇ ಮದುವೆ ಬಗ್ಗೆ ಶಿಖರ್ ಧವನ್ ಹೇಳಿಕೆ! ತನ್ನ ಬದುಕಿನ ಎರಡನೇ ʼಪ್ರೀತಿʼಯನ್ನ ಪರಿಚಯಿಸಿದ ʼಗಬ್ಬರ್‌ ಸಿಂಗ್‌ʼ

ಅಲ್ಲದೇ ʼನನಗೆ ಆಗ ಮತ್ತು ಇಂದಿಗೂ ನನ್ನ ಫೇವರೆಟ್‌ ನಟನೆಂದರೇ ಸಲ್ಮಾನ್‌ ಖಾನ್..‌ ಮತ್ತು ಅವರು ನಟಿಸಿದ 'ಪ್ಯಾರ್ ಕಿಯಾ ಥೋ ಡರ್ನಾ ಕ್ಯಾ' ದಿಂದ 'ಓ ಓ ಜಾನೆ ಜಾನಾ' ವರೆಗಿನ ಪ್ರತಿಯೊಂದು ಚಿತ್ರವೂ ನನ್ನ ನೆಚ್ಚಿನದು. ನಾನು ಚಿಕ್ಕವಳಿದ್ದಾಗ, ಮದುವೆ ಎಂದರೆ ಏನು ಎಂದು ನನಗೆ ತಿಳಿದಿರಲಿಲ್ಲ. ಆದರೆ ನಂತರ ಇದೆಲ್ಲರ ಮೇಲಿನ ಆಸಕ್ತಿಯೇ ಹೊರಟುಹೋಗಿದೆ..ʼ ಎನ್ನುತ್ತಾರೆ ಶರ್ಮೀನ್.. ಇದರೊಂದಿಗೆ ಅವರು ತಮ್ಮ ಸೋದರ ಮಾವ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಕೆಲಸ ಮಾಡುವುದನ್ನು ಮೆಚ್ಚಿಕೊಂಡರು. ಅವರು 18 ವರ್ಷದವಳಿದ್ದಾಗ "ದೇವದಾಸ್" ಚಿತ್ರವನ್ನು ನೋಡಿದ ನೆನಪುಗಳನ್ನು ಸಹ ನೆನಪಿಸಿಕೊಂಡರು. ಬಾಜಿರಾವ್ ಮಸ್ತಾನಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡಿದ್ದಕ್ಕಾಗಿ ಅವರು ತುಂಬಾ ಕೃತಜ್ಞರಾಗಿರುವುದಾಗಿ ಹೇಳಿದರು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.

...Read More

Trending News