)
Sherlyn Chopra viral video : ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಕಾರ್ಯಕ್ರಮವೊಂದರಲ್ಲಿ ಅಸಾಂಪ್ರದಾಯಿಕ ವರ್ತನೆಯಿಂದ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಶೆರ್ಲಿನ್ ಚೋಪ್ರಾ ಈ ಬಾರಿ ಕಾರ್ಯಕ್ರಮವೊಂದರಲ್ಲಿ "ಮುಜುಗರದ" ಕ್ಷಣವನ್ನು ಎದುರಿಸಿದರು.
ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಶೆರ್ಲಿನ್ ವಧುವಿನಂತೆ ಉಡುಪು ಧರಿಸಿದ್ದಾರೆ. ಗೋಲ್ಡನ್ ಬಣ್ಣದ ಲೆಹೆಂಗಾ ಧರಿಸಿ ಮತ್ತು ಕೈಯಲ್ಲಿ ಕೆಂಪು ಬಳೆಗಳನ್ನು ಹಾಕಿದ್ದಾರೆ. ಸ್ಟ್ರಾಪ್ಲೆಸ್ ಬ್ಲೌಸ್ ಅನ್ನು ಇದಕ್ಕೆ ಮ್ಯಾಚ್ ಮಾಡಿದ್ದಾರೆ.
ವೇದಿಕೆಯ ಮೇಲೆ ಶೆರ್ಲಿನ್ ನೃತ್ಯ ಮಾಡುವ ವೇಳೆ ಒಂದು ಶಾಕಿಂಗ್ ಸನ್ನಿವೇಶ ನಡೆದಿದೆ. ಶೆರ್ಲಿನ್ ಚೋಪ್ರಾ ಅವರ ಜಾಕೆಟ್ ಹಿಂದಿನಿಂದ ಹರಿದಿದೆ. ಈ ವಿಚಿತ್ರ ಕ್ಷಣದ ವೀಡಿಯೊ ವೈರಲ್ ಆಗುತ್ತಿದೆ. ತಕ್ಷಣ ಹತ್ತಿರದ ಮಹಿಳೆಯೊಬ್ಬರು ಶೆರ್ಲಿನ್ ಸಹಾಯಕ್ಕೆ ಬಂದಿದ್ದಾರೆ. ಈ ಮುಜುಗರದ ಪರಿಸ್ಥಿತಿಯನ್ನು ಚೆನ್ನಾಗಿ ನಿರ್ವಹಿಸಲಾಗಿದೆ.
ಈ ಘಟನೆ ಬಾಲಿವುಡ್ ಅಂಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಗುಂಡಿಗಳಿಲ್ಲದ ಬ್ಲೌಸ್ ಧರಿಸುವವರು ಹೆಚ್ಚು ಜಾಗರೂಕರಾಗಿರಬೇಕು ಈ ಘಟನೆಯಿಂದ ಅರಿವಾಗಿದೆ ಎಂದು ಕೆಲವರು ಆನ್ಲೈನ್ನಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಈ ಘಟನೆಯ ಬಗ್ಗೆ ವಿಭಿನ್ನ ಅಭಿಪ್ರಾಯಗಳು ಹೊರ ಬರುತ್ತಿವೆ. ಕೆಲವರು ಇದು ಶೆರ್ಲಿನ್ ಉದ್ದೇಶಪೂರ್ವಕ ಕೃತ್ಯ ಮಾಡಿದ ಎಂದು ಊಹಿಸುತ್ತಿದ್ದಾರೆ. ಇನ್ನು ಕೆಲವರು ಇದನ್ನು ಆಕಸ್ಮಿಕ "ಮುಜುಗರದ" ಕ್ಷಣವೆಂದು ಹೇಳುತ್ತಾರೆ.
ಶೆರ್ಲಿನ್ ಚೋಪ್ರಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಅವರು ತಮ್ಮ ಆಕರ್ಷಕ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ ಸುಮಾರು 15 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.