"ನನಗೆ ಕನ್ನಡ ಸಿನಿಮಾ ರಂಗದ ಬಗ್ಗೆ ಅಭಿಮಾನವಿಲ್ಲ.. ತೆಲುಗಿನವರು ವಿಶಾಲ ಹೃದಯರು" : ಕಿಡಿ ಹೊತ್ತಿಸಿದ ಖ್ಯಾತ ನಟಿಯ ಹೇಳಿಕೆ

Sowmya Rao Controversy Comments: ಈ ಮಾತು ಸಿಕ್ಕಾಪಟ್ಟೆ ವಿವಾದ ಹುಟ್ಟುಹಾಕಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Written by - Chetana Devarmani | Last Updated : Apr 29, 2025, 03:04 PM IST
  • ಕನ್ನಡ ಚಿತ್ರರಂಗದ ಬಗ್ಗೆ ಯಾವ ರೀತಿಯ ಅಭಿಮಾನವೂ ಇಲ್ಲ
  • ಅಲ್ಲಿ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದಿಲ್ಲ
  • ಕಿಡಿ ಹೊತ್ತಿಸಿದ ಖ್ಯಾತ ನಟಿಯ ಹೇಳಿಕೆ
"ನನಗೆ ಕನ್ನಡ ಸಿನಿಮಾ ರಂಗದ ಬಗ್ಗೆ ಅಭಿಮಾನವಿಲ್ಲ.. ತೆಲುಗಿನವರು ವಿಶಾಲ ಹೃದಯರು" : ಕಿಡಿ ಹೊತ್ತಿಸಿದ ಖ್ಯಾತ ನಟಿಯ ಹೇಳಿಕೆ

Sowmya Rao Nadig Controversial statement : ನಟಿ ಸೌಮ್ಯಾ ರಾವ್ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿರು. ಜಬರ್ದಸ್ತ್ ಕಾರ್ಯಕ್ರಮದ ಮೂಲಕ ನಿರೂಪಕಿಯಾಗಿ ಕ್ರೇಜ್ ಗಳಿಸಿದರು. ಕಿರುತೆರೆ ನಟಿ ಸೌಮ್ಯಾ ರಾವ್ ನಾಡಿಗ್ ಕನ್ನಡ ಸಿನಿರಂಗದ ಬಗ್ಗೆ ಮಾತನಾಡಿ ಟ್ರೋಲ್‌ ಆಗಿದ್ದಾರೆ. ಕನ್ನಡ ಚಿತ್ರರಂಗದ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಕನ್ನಡಿಗರಿಂದ ಟೀಕೆಗೆ ಕೂಡ ಸೌಮ್ಯ ಗುರಿಯಾಗಿದ್ದರು. ನನಗೆ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದಿಲ್ಲ. ಅದಕ್ಕಾಗಿಯೇ ಇದು ಸಣ್ಣ ಉದ್ಯಮವಾಗಿ ಉಳಿದಿದೆ ಎಂದು ನಟಿ ಸೌಮ್ಯಾ ರಾವ್ ನಾಡಿಗ್ ಹೇಳುವ ಮೂಲಕ ವಿವಾದ ಎಳೆದುಕೊಂಡಿದ್ದಾರೆ. 

Add Zee News as a Preferred Source

ನಟಿ ಸೌಮ್ಯ ರಾವ್‌ ಕನ್ನಡ ಸಿನಿಮಾ ರಂಗದ ಬಗ್ಗೆ ಮಾತನಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಸೌಮ್ಯ, "ನನಗೆ ಕನ್ನಡದ ಬಗ್ಗೆ ಅಭಿಮಾನವಿದೆ. ಆದರೆ ಕನ್ನಡ ಚಿತ್ರರಂಗದ ಬಗ್ಗೆ ಯಾವ ರೀತಿಯ ಅಭಿಮಾನವೂ ಇಲ್ಲ. ಅಲ್ಲಿ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದಿಲ್ಲ. ಅದಕ್ಕಾಗಿಯೇ ಇದು ಸಣ್ಣ ಉದ್ಯಮವಾಗಿ ಉಳಿದಿದೆ" ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. 

ಕನ್ನಡವನ್ನು ಪ್ರೀತಿಸುತ್ತೇನೆ. ಆದರೆ ಕನ್ನಡ ಸಿನಿಮಾ ಉದ್ಯಮದ ಬಗ್ಗೆ ಅಷ್ಟೊಂದು ಒಲವು ಇಲ್ಲ. ನಾನು ಕನ್ನಡ ಕಲಾವಿದರನ್ನು ದೂಷಿಸುತ್ತಿಲ್ಲ. ಆದರೆ ಕನ್ನಡ ಚಿತ್ರೋದ್ಯಮ ಹೇಗಿದೆ ಎಂಬುದರ ಬಗ್ಗೆ ಮಾತ್ರ ಮಾತನಾಡುತ್ತಿರುವೆ ಎಂದಿದ್ದರು. 

ಮತ್ತೊಂದೆಡೆ ಟಾಲಿವುಡ್ ಉದ್ಯಮದ ಬಗ್ಗೆ ಸೌಮ್ಯ ಪ್ರಶಂಸೆ ವ್ಯಕ್ತಪಡಿಸಿದ್ದರು. ತೆಲುಗು ಉದ್ಯಮವು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಎಲ್ಲರಿಗೂ ಇಲ್ಲಿ ಸ್ವಾಗತವಿದೆ. ತೆಲುಗಿನವರು ವಿಶಾಲ ಹೃದಯ ಹೊಂದಿದ್ದಾರೆ ಎಂದು ಸೌಮ್ಯ ರಾವ್‌ ಹೇಳಿದ್ದರು. 

ಇದನ್ನೂ ಓದಿ : ಒಂದು ಕಾಲದ ಟಾಪ್‌ ಹಿರೋಯಿನ್‌.. ಈಗ ಸಿನಿಮಾ ಬಿಟ್ಟು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಖ್ಯಾತ ನಟಿ!

ತೆಲುಗು ಉದ್ಯಮದಲ್ಲಿ ಜನರು ವಿಶಾಲ ಹೃದಯ ಹೊಂದಿದ್ದಾರೆ. ಅವರು ಒಳ್ಳೆಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾರೆ. ಆದರೆ ಕನ್ನಡ ಚಿತ್ರರಂಗದಲ್ಲಿ ಪರಿಸ್ಥಿತಿ ಹೀಗಿಲ್ಲ. ಈ ಕಾರಣದಿಂದಲೇ ಸ್ಯಾಂಡಲ್‌ವುಡ್‌ ಚಿಕ್ಕ ಇಂಡಸ್ಟ್ರಿಯಾಗಿಯೇ ಉಳಿದಿರುವುದು ಎಂದು ಹೇಳಿದ್ದರು. 

ನಾನು ಕನ್ನಡ ಕಲಾವಿದರನ್ನು ಎಂದಿಗೂ ಯಾವ ಕಾರಣಕ್ಕೂ ಟೀಕಿಸುವುದಿಲ್ಲ. ಆದರೆ ಕನ್ನಡ ಸಿನಿರಂಗದಲ್ಲಿ ಯಾರಿಗೂ ಪ್ರೋತ್ಸಾಹ ಕೊಡುವುದಿಲ್ಲ. ಪ್ರತಿಭಾವಂತರು ಕಾಸ್ಟಿಂಗ್ ಕೌಚ್‌ ಸಮಸ್ಯೆಗಳನ್ನು ಕನ್ನಡ ಚಿತ್ರರಂಗದಲ್ಲಿ ಎದುರಿಸಬೇಕಾಗುತ್ತದೆ. ಕೆಟ್ಟ ಅನುಭವಗಳನ್ನು ನೋಡಿದ್ದೇನೆ ಎಂದಿದ್ದರು. 

ಕಾಸ್ಟಿಂಗ್ ಕೌಚ್ ಸಮಸ್ಯೆಯು ಕನ್ನಡ ಚಲನಚಿತ್ರೋದ್ಯಮಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಬಾಲಿವುಡ್ ಸೇರಿದಂತೆ ಎಲ್ಲ ಸಿನಿಮಾ ರಂಗದಲ್ಲಿಯೂ ಅಸ್ತಿತ್ವದಲ್ಲಿರುವ ಸಮಸ್ಯೆಯಾಗಿದೆ. ಕಾಸ್ಟಿಂಗ್ ಕೌಚ್ ಎಲ್ಲೆಡೆ ಇದೆ ಎಂದು ತೆಲುಗು ಸಂದರ್ಶನವೊಂದರಲ್ಲಿ ನಟಿ ಸೌಮ್ಯ ರಾವ್‌ ಹೇಳಿದ್ದರು.

ಈ ಹಿಂದೆ ಒಮ್ಮೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ ಸಂದರ್ಶನದಲ್ಲಿ ಸೌಮ್ಯಾ ರಾವ್ ಕನ್ನಡದಲ್ಲೇ ಮಾತನಾಡಿದ್ದರು. ನಾನು ಕರ್ನಾಟಕಕ್ಕೆ ಬಂದರೆ ಚಪ್ಪಲಿ ತಗೊಂಡು ನನ್ನನ್ನು ಹೊಡೆಯುತ್ತಾರಂತೆ. ನಾನು ತೆಲುಗಿನಲ್ಲಿಯೇ ಬಿದ್ದು ಸಾಯಬೇಕಂತೆ ಎಂದಿದ್ದಾರೆ. ತೆಲುಗಿನವರ ಜೊತೆ ಮಲಗಿದ್ದಕ್ಕೆ ನನಗೆ ಅವಕಾಶ ಸಿಗುತ್ತಿದೆಯಂತೆ ಎಂದು ಕೆಟ್ಟದಾಗಿ ಕಾಮೆಂಟ್‌ ಮಾಡುತ್ತಾರೆ ಎಂದು ತಮ್ಮನ್ನು ಟ್ರೋಲ್‌ ಮಾಡುವವರ ಬಗ್ಗೆ ಮಾತನಾಡಿದ್ದರು.

ಕರ್ನಾಟಕ ನನ್ನ ರಾಜ್ಯ. ಇಲ್ಲಿಗೆ ನಾನು ಬರಲು ಅವರ ಒಪ್ಪಿಗೆ ಬೇಕಾ? ತೆಲುಗಿನಲ್ಲಿ ಮಲಗಿದವಳಿಗೆ ಕನ್ನಡದವರ ಜೊತೆ ಮಲಗಲು ಬರುವುದಿಲ್ಲವೇ? ಅಲ್ಲಿರೋನು ಗಂಡಸೇ, ಇಲ್ಲಿರೋನು ಗಂಡಸೇ ಅಲ್ವಾ? ನಾನು ಆ ರೀತಿಯ ಕಲಾವಿದೆ ಅಲ್ಲ. ಕಲಾವಿದರ ಜೀವನ ಸುಲಭದ್ದಲ್ಲ, ಕಷ್ಟದಿಂದ ಕೂಡಿರುತ್ತದೆ. ಮಾನ ಮರ್ಯಾದೆ ಇಟ್ಟುಕೊಂಡು ಬದುಕುತ್ತಿರುವುದು ತಪ್ಪಾ ಎಂದು ಸಂದರ್ಶನದಲ್ಲಿ ಸೌಮ್ಯಾ ರಾವ್‌ ಆಕ್ರೋಶ ಹೊರಹಾಕಿದ್ದರು.

ಕರ್ನಾಟಕದ ಶಿವಮೊಗ್ಗದಲ್ಲಿ ಜನಿಸಿದ ನಟಿ ಸೌಮ್ಯಾ ರಾವ್‌ ಕನ್ನಡ ಇಂಡಸ್ಟ್ರಿಯಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಬಳಿಕ ತೆಲುಗು ಕಿರುತೆರೆಗೆ ಎಂಟ್ರಿ ಕೊಟ್ಟರು. ಅಂದಿನಿಂದ ತೆಲುಗು ಮತ್ತು ತಮಿಳು ಕಿರುತೆರೆಯಲ್ಲಿ ನಟಿ ಸೌಮ್ಯಾ ರಾವ್‌ ಗುರುತಿಸಿಕೊಂಡಿದ್ದಾರೆ. ನಟಿ ಸೌಮ್ಯಾ ರಾವ್‌ ನಟನೆ ಮತ್ತು ಸೌಂದರ್ಯಕ್ಕೆ ಸಾಕಷ್ಟು ಅಭಿಮಾನಿಗಳಿದ್ದಾರೆ. 

ಇದನ್ನೂ ಓದಿ : ನನ್ನ ಪತ್ನಿ ಪವಿತ್ರ ಲೋಕೇಶ್ ಇಲ್ಲದೆ ನಾನು.. : ನಟ ನರೇಶ್

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News