Sreeleela: ಗುಂಪಲ್ಲಿ ಗೋವಿಂದ.. ನಟಿ ಶ್ರೀಲೀಲಾರನ್ನು ಎಳೆದಾಡಿ ಅಸಭ್ಯವಾಗಿ ವರ್ತಿಸಿದ ಅಭಿಮಾನಿ! ಶಾಕಿಂಗ್‌ ವಿಡಿಯೋ ಫುಲ್‌ ವೈರಲ್‌

Sreeleela: ಸಿನಿಮಾ ನಟಿಯರ ಜೊತೆ ಸೆಲ್ಫಿ ಹೆಸರಿನಲ್ಲಿ ಮುತ್ತಿಡಲು ಪ್ರಯತ್ನಿಸೋದು, ಅವರ ಕೈ ಹಿಡಿದು ಎಳೆದಾಡೋದು ಸಾಮನ್ಯವಾಗಿ ಹೋಗಿದೆ. ಇದೀಗ ನಟಿ ಶ್ರೀಲೀಲಾ ಅವರಿಗೂ ಇದೇ ಅನುಭವವಾಗಿದ್ದು, ಇದಕ್ಕೆ ಸಂಬಂಧ ಪಟ್ಟ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.  

Written by - Zee Kannada News Desk | Last Updated : Apr 10, 2025, 10:53 AM IST
  • ಕಿಸಿಕ್‌ ಬ್ಯೂಟಿ ಶ್ರೀಲೀಲಾ ಸದ್ಯ ತನ್ನ ಸಾಲು ಸಾಲು ಸಿನಿಮಾಗಳು ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.
  • ಜನ ಜಂಗುಳಿಯ ನಡುವೆ ನಡೆದುಕೊಂಡು ಬರುವ ವೇಳೆ ಅಭಿಮಾನಿಯೊಬ್ಬ ನಟಿ ಶ್ರೀಲೀಲಾ ಅವರನ್ನು ಎಳೆದಾಡಿ ಅಸಭ್ಯ ವರ್ತನೆ ತೋರಿದ್ದಾನೆ
  • ನೆಟ್ಟಿಗರು, ಸೆಲೆಬ್ರಿಟಿಗಳಿಗೂ ಸೇಫ್ಟಿ ಇಷ್ಟೆನಾ ಎಂದು ಶಾಕ್‌ ಆಗಿದ್ದಾರೆ.
Sreeleela: ಗುಂಪಲ್ಲಿ ಗೋವಿಂದ.. ನಟಿ ಶ್ರೀಲೀಲಾರನ್ನು ಎಳೆದಾಡಿ ಅಸಭ್ಯವಾಗಿ ವರ್ತಿಸಿದ ಅಭಿಮಾನಿ! ಶಾಕಿಂಗ್‌ ವಿಡಿಯೋ ಫುಲ್‌ ವೈರಲ್‌

Sreeleela: ಕಿಸಿಕ್‌ ಬ್ಯೂಟಿ ಶ್ರೀಲೀಲಾ ಸದ್ಯ ತನ್ನ ಸಾಲು ಸಾಲು ಸಿನಿಮಾಗಳು ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಕನ್ನಡ ಬಿಡಿ, ಕನ್ನಡತಿ ಹೆಸರಿಗಷ್ಟೆ, ಸ್ಯಾಂಡಲ್‌ವುಡ್‌ ಬಿಟ್ಟು ಶ್ರೀಲೀಲಾ ಪರಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಾ ಒಳ್ಳೆ ಹೆಸರು ಗಿಟ್ಟಿಸಿಕೊಂಡಿದ್ದಾರೆ. ಟಾಲಿವುಡ್‌ನಲ್ಲಿ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳನ್ನು ಮಾಡಿ, ಸದ್ಯ ಬಾಲಿವುಡ್‌ಗೆ ಕಾಲಿಟ್ಟಿರುವ ನಟಿ ಶ್ರೀಲೀಲಾ ಕಾರ್ತಿಕ್‌ ಆರ್ಯನ್‌ ಜೊತೆ ತೆರೆ ಹಂಚಿಕೊಳ್ಳಲು ಸಜ್ಜಾಗಿದ್ದಾರೆ, ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದು, ಸಿನಿಮಾದ ಶೂಟಿಂಗ್‌ ಈಗಾಗಲೇ ಶುರುವಾಗಿ ಭರದಿಂದ ಸಾಗುತ್ತಿದೆ. ಈ ಮಧ್ಯೆ ಶೂಟಿಂಗ್‌ ವೇಳೆ ಅಭಿಮಾನಿಗಳ ಗುಂಪಿನಲ್ಲಿ ನಟಿ ಶ್ರೀಲೀಲಾ ನಡೆದುಕೊಂಡು ಹೋಗುತ್ತಿದ್ದು, ಅಭಿಮಾನಿಯೊಬ್ಬರು ನಟಿಯ ಕೈಯನ್ನು ಹಿಡಿದು ಎಳೆದಾಡಿದ್ದಾರೆ, ಸದ್ಯ ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Add Zee News as a Preferred Source

ನಟಿ ಶ್ರೀಲೀಲಾಗೆ ಇದು ಮೊದಲ ಬಾಲಿವುಡ್‌ ಸಿನಿಮಾ ಆಗಿದ್ದು, ಈ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಅಭಿಮಾನಿಗಳು ಕಾಯುತ್ತಿದ್ದಾರೆ. ಚಿತ್ರದ ಶೂಟಿಂಗ್‌ ಕೂಡ ವೇಗವಾಗಿ ಸಾಗುತ್ತಿದೆ, ಶೂಟಿಂಗ್‌ಗೆ ಸಂಬಂಧ ಪಟ್ಟ ವಿಡಿಯೋಗಳು ಸಹ ಸೋಷಿಯಲ್‌ ಮಿಡಿಯಾದಲ್ಲಿ ಲೀಕ್‌ ಆಗಿ ವೈರಲ್‌ ಆಗುತ್ತಿವೆ. ಆದರೆ, ಇದೀಗ ನಟಿ ಶ್ರೀಲೀಲಾ ಹಾಗೂ ಕಾರ್ತಿಕ್‌ ಆರ್ಯನ್‌ ಶೂಟಿಂಗ್‌ ಮುಗಿಸಿ ಜನ ಜಂಗುಳಿಯ ನಡುವೆ ನಡೆದುಕೊಂಡು ಬರುವ ವೇಳೆ ಅಭಿಮಾನಿಯೊಬ್ಬ ನಟಿ ಶ್ರೀಲೀಲಾ ಅವರನ್ನು ಎಳೆದಾಡಿ ಅಸಭ್ಯ ವರ್ತನೆ ತೋರಿದ್ದಾನೆ, ಇನ್ನೂ ಇದನ್ನೆಲ್ಲಾ ನೋಡಿದ ಕಾರ್ತಿಕ್‌ ಆರ್ಯನ್‌ ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ನಡೆದು ಬಂದಿರುವುದು, ನೆಟ್ಟಿಗರ ಕೋಪಕ್ಕೆ ಗುರಿಯಾಗುವಂತೆ ಮಾಡಿದೆ. 

ಇದನ್ನೂ ಓದಿ: 'ನಾನು ಗರ್ಭಿಣಿ.. ನನ್ನ ಪತಿಗೆ ಅನೈತಿಕ ಸಂಬಂಧವಿದೆ...' ಖ್ಯಾತ ನಟಿಯ ಬಹಿರಂಗ ಹೇಳಿಕೆ!

ಸೆಲೆಬ್ರಿಟಿಗಳು ಎಂದರೆ ಇವೆಲ್ಲಾ ಆಗೋದು ಕಾಮನ್‌, ಏಕೆಂದರೆ ಹೀಗೆ ಆಗಿರುವುದು ಮೊದಲೇನಲ್ಲ, ಫೋಟೋ ತೆಗೆದುಕೊಳ್ಳುವ ನೆಪದಲ್ಲಿ ಕೂಡ ಅಭಿಮಾನಿಗಳು ಈ ಮುಂಚೆ ಅಸಭ್ಯವಾಗಿ ವರ್ತಿಸಿರುವ ಅದೆಷ್ಟೋ ಉದಾಹರಣೆಗಳಿವೆ. ಇದೇ ಕಾರಣಕ್ಕಾಗಿ ಅಭಿಮಾನಿಗಳನ್ನು ಸಿನಿಮಾ ಸ್ಟಾರ್‌ಗಳು ನಿರ್ಲಕ್ಷಿಸುತ್ತಾರೆ, ಫೋಟೋ ಕೇಳಿದಾಗ ಇಗ್ನೋರ್‌ ಮಾಡಿ ಮುಂದೆ ನಡೆಯುತ್ತಾರೆ, ಆದರೆ ಇದನ್ನು ಅಭಿಮಾನಿಗಳು, ಸ್ಟಾರ್‌ ಆದಮೇಲೆ ಇವರಿಗೆ ಎಷ್ಟು ದುರಹಂಕಾರ ಬಂತಪ್ಪಾ ಎಂದುಕೊಳ್ಳುತ್ತಾರೆ. ಇದೀಗ ಏನಾಗಬಾರದು ಎಂದು ಶ್ರೀಲೀಲಾ ಅಂದುಕೊಂಡಿದ್ದರೋ ಅದೇ ಆಗಿ ಹೋಗಿದೆ, ಗುಂಪಿನಲ್ಲಿ ನಡೆದುಕೊಂಡು ಅಷ್ಟು ಜನರ ಮುಂದೆ ಬರುವಾಗಲೇ ಅಭಿಮಾನಿಯೊಬ್ಬ ಈ ರೀತಿ ನಡೆದುಕೊಂಡಿದ್ದು, ನೆಟ್ಟಿಗರು, ಸೆಲೆಬ್ರಿಟಿಗಳಿಗೂ ಸೇಫ್ಟಿ ಇಷ್ಟೆನಾ ಎಂದು ಶಾಕ್‌ ಆಗಿದ್ದಾರೆ.

ಇದನ್ನೂ ಓದಿ: Deepika Padukone: ಮೊದಲನೇ ಮಗುವಿಗೆ ಒಂದು ವರ್ಷ ತುಂಬುವ ಮೊದಲೇ ಮತ್ತೊಮ್ಮೆ ತಾಯಿಯಾಗಲಿದ್ದಾರೆ ದೀಪಿಕಾ ಪಡುಕೋಣೆ?! ಗುಡ್‌ ನ್ಯೂಸ್‌ ಕೇಳಿ ಅಭಿಮಾನಿಗಳು ಫುಲ್‌ ಖುಷ್‌

ಸಿನಿಮಾ ಸ್ಟಾರ್‌ಗಳನ್ನು ನೋಡುವುದು ಎಂದರೆ ಸುಮ್ಮನೆ ಅಲ್ಲ, ಮನೆ ಮುಂದೆ ತಿಂಗಳಾನು ಗಟ್ಟಲೇ ಕಾದರೂ ಸಹ ಅವರ ದರ್ಶನ ಸಿಗೊಲ್ಲ, ಹೀಗಿರುವಾಗ ನಟಿ ಶ್ರೀಲೀಲಾ ಹಾಗೂ ಕಾರ್ತಿಕ್‌ ಆರ್ಯನ್‌ ಔಟ್‌ ಡೋರ್‌ ಶೂಟಿಂಗ್‌ ಮುಗಿಸಿ ಬರುತ್ತಿದ್ದಾರೆ ಎಂಬ ಸುದ್ದಿ ಕೇಳಿದ ತಕ್ಷಣ, ಸ್ಥಳದಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು, ಇದೇ ವೇಳೆ ಗುಂಪಿನಲ್ಲಿ ನಡೆದು ಬರುತ್ತಿದ್ದ ಶ್ರೀಲೀಲಾ ಅವರನ್ನು ಹಿಡಿದು ಅಭಿಮಾನಿಗಳು ಎಳೆದಾಡಿದ್ದರು, ಇನ್ನೂ ಮುಂದೆ ಹೋಗುತ್ತಿದ್ದ ಆರ್ಯನ್‌ ಇದ್ಯಾವುದನ್ನು ಗಮನಿಸಲೇ ಇಲ್ಲ, ನಟಿ ಶ್ರೀಲೀಲಾ ಅವರ ಪಕ್ಕದಲ್ಲೆ ಇದ್ದ ಅಂಗರಕ್ಷಕ ಅವರನ್ನು ರಕ್ಷಣೆ ಮಾಡಿ ಮುಂದಕ್ಕೆ ಕರೆದುಕೊಂಡು ಬಂದರು. ಸದ್ಯ ಇದಕ್ಕೆ ಸಂಬಂಧ ಪಟ್ಟ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ʻಕಿಸ್‌ʼ ಸಿನಿಮಾದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಶ್ರೀಲೀಲಾ, ಸಾಲು ಸಾಲ ಸಿನಿಮಾಗಳನ್ನು ಮಾಡುತ್ತಾ ಸದ್ಯ ಬ್ಯುಸಿಯಾಗಿದ್ದಾರೆ. ಕನ್ನಡ ಬಿಟ್ಟು ಬೇರೆಲ್ಲಾ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿರು ಶ್ರೀಲೀಲಾದ ಈ ವೈರಲ್‌ ವಿಡಿಯೋ ನೋಡಿದ ನಂತರ ಅಭಿಮಾನಿಗಳು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ.ಇನ್ನೂ, ಈ ನಡುವೆ ನಟಿ ಶ್ರೀಲೀಲಾ ಹಾಗೂ ಕಾರ್ತಕ್‌ ಆರ್ಯನ್‌ ಡೇಟಿಂಗ್‌ ಮಾಡುತ್ತದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಇದನ್ನೆಲ್ಲಾ ಪಕ್ಕಕ್ಕಿಟ್ಟರೆ, ನಟಿ ಶ್ರೀಲೀಲಾ ಮುಂದಿನ ದಿನಗಳಲ್ಲಾದರೂ ಕನ್ನಡ ಸಿನಿಮಾ ಮಾಡ್ತಾರಾ? ಇಲ್ವಾ? ಎಂಬುದನ್ನು ಕಾದು ನೋಡಬೇಕಿದೆ.

 

 

ಇದನ್ನೂ ಓದಿ: ನಮ್ಮ ನಡುವೆ 15 ವರ್ಷ ವಯಸ್ಸಿನ ಅಂತರವಿದೆ.. ಆದರೂ ನಾವಿಬ್ಬರೂ ಅದನ್ನು ಪೂರ್ಣವಾಗಿ ಆನಂದಿಸುತ್ತೇವೆ : ಖ್ಯಾತ ನಟಿಯ ಹೇಳಿಕೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News