)
Rajinikanth Movie: ಬಹುಭಾಷಾ ನಟ ರಜನಿಕಾಂತ್. ತಮಿಳಿನಲ್ಲಿ ಮಾತ್ರವಲ್ಲ.. ತೆಲಗು, ಕನ್ನಡ, ಹಿಂದಿಯಲ್ಲೂ ರಜನಿಕಾಂತ್ ಅವರ ಅಭಿಮಾನಿಗಳಿದ್ದಾರೆ. 74 ವರ್ಷದ ರಜನಿಕಾಂತ್ ಸಿನಿಮಾಗಳು ಈಗಲೂ ಇಂಡಸ್ಟ್ರಿ ಹಿಟ್ ದಾಖಲೆಗಳನ್ನು ಬ್ರೇಕ್ ಮಾಡುತ್ತಿವೆ. ಗಲ್ಲಾಪೆಟ್ಟಿಗೆಯಲ್ಲಿ ನೂರಾರು ಕೋಟಿ ಗಳಿಸುತ್ತಿವೆ.
ಭಾರತೀಯ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕರಲ್ಲಿ ರಜನಿಕಾಂತ್ ಮುಂಚೂಣಿಯಲ್ಲಿರುವವರು. ಸದ್ಯ ರಜನಿಕಾಂತ್ ಪ್ರತಿ ಚಿತ್ರಕ್ಕೆ 180 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.
ರಜನಿಕಾಂತ್ ತಾಯಿಯಾಗಿ, ಪ್ರೇಮಿಯಾಗಿ, ಪತ್ನಿಯಾಗಿ ನಟಿಸಿದ ತೆಲುಗು ಸ್ಟಾರ್ ಹೀರೋಯಿನ್ ಯಾರು ಗೊತ್ತಾ? ಆಕೆ ಬೇರೆ ಯಾರೂ ಅಲ್ಲ ಸುಂದರ ತಾರೆ ಶ್ರೀದೇವಿ. 1976ರಲ್ಲಿ ತೆರೆಕಂಡ ‘ಮಂಡ್ರು ಮುಡಿಚು’ ಚಿತ್ರದಲ್ಲಿ ಶ್ರೀದೇವಿ ರಜನಿಕಾಂತ್ ಅವರ ತಾಯಿಯಾಗಿ ನಟಿಸಿದ್ದರು.
ಇದು ಶ್ರೀದೇವಿಯ ಮೊದಲ ಸಿನಿಮಾ. ಆ ನಂತರ ಇವರಿಬ್ಬರ ಕಾಂಬಿನೇಷನ್ನಲ್ಲಿ 22 ಸಿನಿಮಾಗಳು ಬಂದವು. ಹಲವು ಸಿನಿಮಾಗಳಲ್ಲಿ ಶ್ರೀದೇವಿ ಅವರು ರಜನಿಕಾಂತ್ ಪ್ರೇಮಿಯಾಗಿ, ಕೆಲ ಸಿನಿಮಾಗಳಲ್ಲಿ ಪತ್ನಿಯಾಗಿ ನಟಿಸಿದ್ದಾರೆ. ರಜನಿಕಾಂತ್ ಜೊತೆ ತಾಯಿಯಾಗಿ, ಪತ್ನಿಯಾಗಿ, ಪ್ರೇಮಿಯಾಗಿ ನಟಿಸಿದ ಸ್ಟಾರ್ ನಟಿಯಾಗಿದ್ದಾರೆ ಶ್ರೀದೇವಿ.