)
Actress Tabu News: ಆಕರ್ಷಕ ಲುಕ್, ನೈಸರ್ಗಿಕ ನಟನೆಯಿಂದಾಗಿ 90ರ ದಶಕದಲ್ಲಿ ಬಾಲಿವುಡ್ ಚಿತ್ರರಂಗವನ್ನೇ ಆಳಿದ ನಟಿ ಟಬು. ನವೆಂಬರ್ 04, 1971ರಲ್ಲಿ ಹೈದರಾಬಾದ್ನಲ್ಲಿ ಜನಿಸಿದ ಟಬು ಅವರ ನಿಜವಾದ ಹೆಸರು ತಬಸ್ಸುಮ್ ಫಾತಿಮಾ ಹಶ್ಮಿ. ಟಬು ಇಂದು ತಮ್ಮ 54ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ವೃತ್ತಿಜೀವನ ಹಾಗೂ ಆಕೆಯ ಲವ್ ಅಫೇರ್ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳ ಬಗ್ಗೆ ತಿಳಿಯೋಣ...
ಬಾಲ ಕಲಾವಿದೆಯಾಗಿ ಸಿನಿ ರಂಗಕ್ಕೆ ಎಂಟ್ರಿ:
ಬಣ್ಣದ ಬದುಕಿಗೆ ಬಾಲ ಕಲಾವಿದೆಯಾಗಿ ಎಂಟ್ರಿ ಕೊಟ್ಟ ಟಬು ಮೊದಲು ಕ್ಯಾಮೆರಾ ಮುಂದೆ ನಟಿಸಿತ್ತು "ಹಮ್ ನೌಜವಾನ್" ಚಿತ್ರದಲ್ಲಿ. ಬಳಿಕ ಟಬು 1994ರಲ್ಲಿ "ಪಹ್ಲಾ ಪಹ್ಲಾ ಪ್ಯಾರ್" ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದರು. ಅದಾಗ ಬಳಿಕ, ಅಜಯ್ ದೇವಗನ್ ಜೊತೆ ಅಭಿನಯಿಸಿದ 'ವಿಜಯಪಥ್' ಸಿನಿಮಾದಲ್ಲಿ ಟಬು ಅವರಿಗೆ ನಾಯಕಿಯಾಗಿ ಮನ್ನದೆ ದೊರೆಯಿತು.
'ವಿಜಯಪಥ್' ಸಿನಿಮಾದಲ್ಲಿ ಟಬು-ಅಜಯ್ ದೇವಗನ್ ಜೋಡಿ ಸಿನಿ ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಇದಾದ ಬಳಿಕ ಟಬು 'ಹಕೀಕತ್', 'ಚಿತ್ರ', 'ಚಾಚಿ 420', 'ಮಕ್ಬೂಲ್', 'ಚಾಂದನಿ ಬಾರ್', 'ದೃಶ್ಯಂ', 'ಅಂಧಾಧುನ್'ನಂತಹ ಹಲವು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಮನೆಮಾತಾದರು.
ಕೇವಲ ಬಾಲಿವುಡ್ ಮಾತ್ರವಲ್ಲದೆ, ತಮಿಳು, ತೆಲುಗು, ಮರಾಠಿ, ಮಲಯಾಳಂ ಮತ್ತು ಬಂಗಾಳಿ ಚಿತ್ರಗಳಲ್ಲಿಯೂ ತಮ್ಮ ಅಮೋಘ ಅಭಿನಯದಿಂದ ಮೋಡಿ ಮಾಡಿದ್ದ ನಟಿ ಟಬು ಹಲವು ಭಾಷೆಗಳನ್ನು ನೀರು ಕುಡಿದಂತೆ ಮಾತನಾಡುವ ಚತುರೆ.
ಟಬು ಅವರು ಹಿಂದಿ, ಇಂಗ್ಲಿಷ್ ಮಾತ್ರವಲ್ಲದೆ ಉರ್ದು, ತೆಲುಗು, ಮರಾಠಿ, ಸ್ಪ್ಯಾನಿಷ್, ಮಲಯಾಳಂ ಮತ್ತು ತಮಿಳು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾರೆ.
ವಿವಾಹಿತ ನಟನೊಂದಿಗೆ ಡೇಟಿಂಗ್: ವಯಸ್ಸು 50ದಾಟಿದರೂ ಇನ್ನೂ ಸಿಂಗಲ್:
ತೆರೆ ಮೇಲೆ ಅಜಯ್ ದೇವಗನ್-ಟಬು ಜೋಡಿ ಮೋಡಿ ಮಾಡಿದೆ. ಅವರಿಬ್ಬರ ಕೆಮಿಸ್ಟ್ರಿಗೆ ಜನ ಸೈ ಎಂದಿದ್ದಾರೆ. ಆದರೆ, ಟಬು ಹಾಗೂ ಅಜಯ್ ದೇವಗನ್ ಲವ್ ಅಫೇರ್ ಬಗ್ಗೆಯೂ ಆಗಾಗ್ಗೆ ವ್ಯಾಪಕ ಚರ್ಚೆ ಆಗುತ್ತಲೇ ಇರುತ್ತದೆ. ಟಬು ಮದುವೆ ಆಗದಿರಲು ಅಜಯ್ ದೇವಗನ್ ಅವರೇ ಕಾರಣ ಎಂಬ ಗುಮಾನಿಯೂ ಇದೆ. ಭಾರತೀಯ ಟೆಲಿವಿಷನ್'ನ ಪ್ರಸಿದ್ಧ ಕಾರ್ಯಕ್ರಮವಾದ 'ಕಪಿಲ್ ಶರ್ಮಾ ಶೋ'ನಲ್ಲಿ ಈ ಬಗ್ಗೆ ತಮಾಷೆಯಾಗಿ ಸ್ವತಃ ಟಬು ಅವರೇ ಮಾತನಾಡಿದ್ದು ಕಾಲೇಜು ದಿನಗಳಲ್ಲಿ ನನ್ನ ಎಲ್ಲಾ ಕ್ರಶ್ಗಳನ್ನು ಅಜಯ್ ದೇವಗನ್ ಅವರೇ ಓಡಿಸಿದ್ದಾರೆ. ಹಾಗಾಗಿಯೇ, ನಾನಿನ್ನೂ ಮದುವೆಯಾಗದೆ ಒಂಟಿಯಾಗಿದ್ದೇನೆ ಎಂದಿದ್ದರು.