)
Actress Tamannah: ಬಾಲಿವುಡ್ನಲ್ಲಿ ನಾಯಕಿಯಾಗಿ ನೆಲೆಯೂರಿದವರು, ಸಾಮಾನ್ಯವಾಗಿ ತಮ್ಮ ಸಂಭಾವನೆ ಹೆಚ್ಚಿದ್ದಾಗ ಕೇವಲ ಹಾಡೊಂದಕ್ಕೆ ಹೆಜ್ಜೆ ಹಾಕಲು ಒಪ್ಪುವುದಿಲ್ಲ. ಏಕೆಂದರೆ ಪ್ರೇಕ್ಷಕರು ಅವರನ್ನು ಐಟಂ ಗರ್ಲ್ ಎಂಬ ಬ್ರ್ಯಾಂಡ್ ಹೋಲಿಸಿ ಬಿಡುತ್ತಾರೆ ಎಂಬ ಆತಂಕ ಅವರಲ್ಲಿರುತ್ತೆ.. ಕೆಲವೊಮ್ಮೆ ಇಂತಹ ಆಫರ್ಗಳಿಗೆ ಒಪ್ಪಿದರೆ ಅಪವಾದ ಎನ್ನುವಂತೆ ಎಷ್ಟೋ ಬೇಡಿಕೆಗಳಿಗೆ ತೀರಸ್ಕಾರ ಹಾಕಿರುತ್ತಾರೆ.. ಆದರೆ ಇನ್ನೂ ಕೆಲವರು ದುಡ್ಡಿಗೆ ಮಾತ್ರ ಮಹತ್ವ ನೀಡುವಂತೆ ಕೇಲವು ಧೋರಣೆಗಳಿಗೆ ಒಪ್ಪಿ ಹೆಜ್ಜೆ ಹಾಕುತ್ತಾರೆ..
ಬರೀ ನಾಲ್ಕೈದು ನಿಮಿಷದ ಹಾಡಿನಲ್ಲಿ ಕುಣಿದು ಕೈ ತುಂಬಾ ಹಣ ಗಳಿಸುತ್ತಾರೆ. ಇಂಡಸ್ಟ್ರಿಯಲ್ಲಿ ಹಲವು ನಟಿಯರು ಬೇಡಿಕೆಯಲ್ಲಿದ್ದಾಗಲೇ ಅಪರೂಪಕ್ಕೆ ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ತಾರೆ. ಹೀಗೆ ಒತ್ತಾಯಪೂರಕವಾಗಿ ಕೂಡ ನಾಯಕಿಯಾಗಿ ತಮಗೆ ಇರುವ ಗೌರವವನ್ನು ಉಳಿಸಿಕೊಳ್ತಾರೆ. ಹಾಗೇ ನೋಡುವುದಾದರೆ ಇಂತಹ ಐಟಂ ಸಾಂಗ್ನಲ್ಲಿ ತಮನ್ನಾ ಭಾಟಿಯಾ ಕೊಡ ಟಾಪ್ನಲ್ಲಿದ್ದಾರೆ.
ಆರಂಭದಲ್ಲಿ ಇವರು ʼಚಾಂದ್ಸಾ ರೋಷನ್ಚೆಹ್ರಾʼ ಮೂಲಕ ಚಿತ್ರರಂಗಕ್ಕೆ ಬಂದಿದ್ದರು. ಆ ನಂತರ ದಕ್ಷಿಣ ಭಾರತಕ್ಕೆ ವಲಸೆ ಹೋದರು ಮತ್ತೆ ʼಶ್ರೀʼ ಹಾಗೂ ʼಕೇಡಿʼ ಚಿತ್ರದಲ್ಲಿ ನಟಿಸಿದರು. ಆದರೆ ಇವರಿಗೆ ʼಹ್ಯಾಪಿ ಡೇಸ್ʼನಿಂದ ಖ್ಯಾತಿ ಹೆಚ್ಚಿತು. ಮುಂದುವರೆದು ಒಂದಾದ ಮೇಲೊಂದು ಸಿನಿಮಾಗಳಂತೆ, ಒಂದಾದ ಮೇಲೊಂದು ಗೆಲುವು ತಮ್ಮದಾಗಿಸಿಕೊಂಡರು. ಕೇಲವೆ ದಿನದಲ್ಲಿ ಸ್ಟಾರ್ ಹೀರೋಗಳಿಗೆ ನಾಯಕಿಯಾಗಿ ಆಯ್ಕೆಯಾದ ತಮನ್ನಾ, ತಮ್ಮ ಮಿಲ್ಕಿಬ್ಯೂಟಿಯಿಂದಲೇ ಅಭಿಮಾನಿಗಳ ಹೃದಯ ಕದ್ದರು. ಸಿನಿಮಾರಂಗದಲ್ಲಿ ತಮ್ಮದೇ ಸ್ಥಾನವನ್ನೂ ಸಂಪಾದಿಸಿದರು. ಕಡಿಮೆ ಅವಧಿಯಲ್ಲಿಯೇ ಬಹುಬೇಡಿಕೆಯ ನಟಿಯಾಗಿಯೂ ಹೊರ ಹೊಮ್ಮಿದರು.
ನಂತರ 2013ರ ಹೂತ್ತಿನಲ್ಲಿ ಬಾಲಿವುಡ್ ನ ಇನ್ನೊಂದು ರೌಂಡು ಸುತ್ತಾಕಿಕೊಂಡು ಬಂದ ತಮನ್ನಾ ʼಹಿಮ್ಮತ್ ವಾಲಾʼ.. ʼಹಮ್ ಶಕಲ್ಸ್ʼ.. ʼಎಂಟ್ರಟೇನ್ಮೆಂಟ್ʼ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದರು. ಇವರು ಈಗ ಸದ್ಯ ಐಟಂ ಹಾಡುಗಳಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಇತ್ತೀಚೆಗೆ ತಮನ್ನಾ ಅವರ ಕೆಲವು ಹಾಡುಗಳು ಬಂದಿವೆ. ಹೀಗೆ ರೀಲಿಸ್ ಆದ ಹಾಡುಗಳಲ್ಲಿ ಬಹುತೇಕ ಬ್ಲಾಕ್ ಬಾರ್ಟ ಲಿಸ್ಟ್ಗೂ ಕೂಡ ಸೇರಿವೆ. ಅದರಲ್ಲಿ ಸದ್ಯ ಶಾರುಖ್ ಖಾನ್ ಮಗ ಆರ್ಯನ್ ಖಾನ್ ನಿರ್ದೇಶನದ ಮೊದಲ ಚಿತ್ರ ʼದಿ ಬ್ಯಾಡ್ಸ್ ಆಫ್ ಬಾಲಿವುಡ್ʼ ಸರಣಿಯ ʼಗಪೂರ್ʼ ಹಾಡು ಅಭಿಮಾನಿಗಳ ಮನಸ್ಸನ್ನ ಗೆದ್ದು, ಯೂಟ್ಯೂಬ್ನಲ್ಲಿ ಕೂಡ ಸದ್ದು ಮಾಡುತ್ತಿದೆ.
ಇದೀಗ ತಮನ್ನಾ ಇದೇ ಹಾಡಿಗೆ ಬರೀ ಒಂದಲ್ಲ.. ಎರಡಲ್ಲ.. ಬರೋಬ್ಬರಿ ಐದರಿಂದ ಆರು ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಇಡೀ ಮುಂಬೈನೆಲ್ಲೆಡೆ ಸದ್ದು ಮಾಡುತ್ತಿದೆ. ಈ ವಿಚಾರದ ಕುರಿತು ತಮನ್ನಾ ಆಗಲಿ.. ಚಿತ್ರತಂಡವಾಗಲಿ.. ಅಥವಾ ನಿರ್ಮಾಣದ ಹೊಣೆ ವಹಿಸಿಕೊಂಡಿದ್ದ ಶಾರುಖ್ ಖಾನ್ ಅವರ ಪತ್ನಿ ಗೌರಿ ಅವರು .. ಸ್ಪಷ್ಟನೆಯನ್ನು ನೀಡಿಲ್ಲದಿದ್ದರು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತಮನ್ನಾ ಪಡೆದಿರಬಹುದಾದ ಸಂಭಾವನೆಯ ಕುರಿತು ಚರ್ಚೆ ನಡೆಯುತ್ತಿದೆ. ಒಂದಿಷ್ಟು ವರದಿಗಳ ಪ್ರಕಾರ ತಮನ್ನಾ ಐಟಂ ಹಾಡಿಗೆ ಬಾಲಿವುಡ್ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ನಟಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.. ಹಾಗೇ ತಮನ್ನಾ ಹೆಜ್ಜೆ ಹಾಕಿರುವ ʼಗಪೂರ್ʼ ಹಾಡು ಕೇವಲ ಮೂರು ದಿನಗಳಲ್ಲಿ 13,955,740 ವೀವ್ಸ್ ಪಡೆದುಕೊಂಡಿದೆ.. ಆದರೆ ಮತ್ತೊಂದು ಕಡೆ ಆಲ್ಬಮ್ ಸಾಂಗ್ಗೆ ಇಷ್ಟೊಂದು ಹಣವನ್ನು ನಿರ್ಮಾಣ ಸಂಸ್ಥೆ ಸಂಭಾವನೆಯಾಗಿ ನೀಡಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಕೂಡ ಹಲವರಲ್ಲಿ ಮೂಡಿದೆ..