ನೀನು ಸರ್ವನಾಶ ಆಗ್ತೀಯಾ ನನ್ನ ಕಣ್ಣೀರು ನಿನ್ನ ಬಿಡಲ್ಲ..! ಖ್ಯಾತ ರಾಜಕಾರಣಿಗೆ ನಟಿ ಹಿಡಿ ಶಾಪ.. ವಿಡಿಯೋ ವೈರಲ್‌

Actress Vijayalakshmi : ಕನ್ನಡದ ಖ್ಯಾತ ನಟಿ ವಿಜಯಲಕ್ಷ್ಮಿ ಅವರು ಕಣ್ಣೀರಿಟ್ಟು ಶಾಪ ಹಾಕುತ್ತಿರುವು ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ನಟಿ ನಾಮ್‌ ತಮಿಳರ್‌ ಪಕ್ಷದ ನಾಯಕನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Mar 2, 2025, 06:50 PM IST
    • ಖ್ಯಾತ ನಟಿ ವಿಜಯಲಕ್ಷಿ ಅವರು ಗಳಗಳನೇ ಅತ್ತಿರುವ ವಿಡಿಯೋ ವೈರಲ್‌
    • ನಾಮ್ ತಮಿಳರ್ ಪಕ್ಷದ ನಾಯಕ ಸೀಮನ್ ವಿರುದ್ಧ ನಟಿ ಕಿಡಿಕಾರಿದ ನಟಿ
    • ಸೀಮನ್ ಅವರು ನಟಿ ವಿಜಯಲಕ್ಷ್ಮಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು
ನೀನು ಸರ್ವನಾಶ ಆಗ್ತೀಯಾ ನನ್ನ ಕಣ್ಣೀರು ನಿನ್ನ ಬಿಡಲ್ಲ..! ಖ್ಯಾತ ರಾಜಕಾರಣಿಗೆ ನಟಿ ಹಿಡಿ ಶಾಪ.. ವಿಡಿಯೋ ವೈರಲ್‌

Vijayalakshmi Seeman : ಖ್ಯಾತ ನಟಿ ವಿಜಯಲಕ್ಷಿ ಅವರು ಗಳಗಳನೇ ಅತ್ತಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ನಟಿ ನಾಮ್ ತಮಿಳರ್ ಪಕ್ಷದ ನಾಯಕ ಸೀಮನ್ ವಿರುದ್ಧ ನಟಿ ಕಿಡಿಕಾರಿರುವುದನ್ನು ಕಾಣಬಹುದು.. ಅಲ್ಲದೆ, ಹಿಡಿ ಶಾಪ ಹಾಕಿದ್ದಾರೆ.. ಅಸಲಿಗೆ ಆಗಿದ್ದೇನು..? ಬನ್ನಿ ನೋಡೋಣ

Add Zee News as a Preferred Source

ಹೌದು.. ಇತ್ತೀಚಿಗೆ ನಾಮ್ ತಮಿಳರ್ ಪಕ್ಷದ ನಾಯಕ ಸೀಮನ್ ಅವರು ನಟಿ ವಿಜಯಲಕ್ಷ್ಮಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಅಲ್ಲದೆ, ನಟಿಯನ್ನು ವೇಶ್ಯೆಗೆ ಹೋಲಿಸಿದ್ದರು. ಈ ಮಾತಿನಿಂದ ನೋಂದಿರುವ ವಿಜಯಲಕ್ಷ್ಮಿಯವರು ವಿಡಿಯೋ ಮೂಲಕ ಆಕ್ರೋಶ ಹೊರಹಾಕಿದ್ದಾರೆ..

ಇದನ್ನೂ ಓದಿ:ಮತ್ತೆ ಶೂಟಿಂಗ್ ಅಖಾಡಕ್ಕೆ ಕರುನಾಡ ಚಕ್ರವರ್ತಿ...ನಾಳೆಯಿಂದ ಶಿವಣ್ಣನ 131 ಸಿನಿಮಾದ ಚಿತ್ರೀಕರಣ ಶುರು

ವಿಡಿಯೋದಲ್ಲಿ, ನಾನು ಲೈಂಗಿಕ ಕಾರ್ಯಕರ್ತೆಯೇ...? ಅದಕ್ಕೆ ಪುರಾವೆಗಳನ್ನು ತೋರಿಸುತ್ತೀರಾ.? ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ಲವೇ.. ನಿನಗೆ ಜನ್ಮ ನೀಡಿದ ತಾಯಿ ಒಂದು ಹೆಣ್ಣು.., ಅಕ್ಕ ತಂಗಿ ಇಲ್ಲವೇ.. ನಿನಗೆ ಹೆಂಡತಿ ಇಲ್ಲವೇ..? ನೀವು ಪ್ರತಿದಿನ ನನ್ನನ್ನು ಅವಮಾನಿಸುತ್ತಿದ್ದೀರಿ. 

ನಾನು ವೇಶ್ಯೆ ಆಗಿದ್ದರೆ ಈ ರೀತಿ ಇರುತ್ತಿರಲಿಲ್ಲ.. ನನ್ನ ಕಣ್ಣೀರು ನಿನ್ನನ್ನು ನಾಶ ಮಾಡದೇ ಬಿಡುವುದಿಲ್ಲ. ನೋಡುತ್ತೀರು ನೀನು ಸರ್ವನಾಶವಾಗುತ್ತೀಯಾ ಅಂತ ನಟಿ ವಿಜಯಲಕ್ಷ್ಮಿ ಕಣ್ಣೀರು ಹಾಕಿರುವ ದೃಶ್ಯ ವಿಡಿಯೋದಲ್ಲಿದೆ.. ಅಂದಹಾಗೆ ಕಳೆದ ಕೆಲವು ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ವಿಜಯಲಕ್ಷ್ಮಿ ಮತ್ತು ಸೀಮನ್‌ ಅವರ ವಾಗ್ವಾದ ನಡೆಯುತ್ತಲೇ ಇವೆ.. ಇದೀಗ ವಿಪರೀತಕ್ಕೆ ತಲುಪಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News