Vijayshanthi Sensational Comment: ನಟಿ ವಿಜಯಶಾಂತಿ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಹೇಳಿರುವ ಕೆಲವು ಮಾತುಗಳು ವೈರಲ್ ಆಗಿವೆ. ಇದರಲ್ಲಿ ಅವರು ತಮ್ಮ ಸಮಸ್ತ ಆಸ್ತಿಗೆ ಯಾರು ಹಕ್ಕುದಾರರು ಎಂದು ತಿಳಿಸಿದ್ದು, ಜನರಿಗೆ ಶಾಕ್ ತಂದಿದೆ.

Actress Vijayshanthi: ಚಿತ್ರರಂಗದಲ್ಲಿ ಅನೇಕ ನಾಯಕಿಯರು ಇದ್ದರೂ, ಕೆಲವರು ಮಾತ್ರ ತಲೆಮಾರುಗಳವರೆಗೆ ಜನರ ಮೇಲೆ ಪ್ರಭಾವ ಬೀರುತ್ತಾರೆ. ದಕ್ಷಿಣ ಭಾರದತ ಲೇಡಿ ಆಕ್ಷನ್ ಸೂಪರ್ಸ್ಟಾರ್ ವಿಜಯಶಾಂತಿ ಕೂಡ ಈ ವರ್ಗಕ್ಕೆ ಸೇರುತ್ತಾರೆ. ಪುರುಷ ಪ್ರಾಬಲ್ಯದ ಉದ್ಯಮದಲ್ಲಿ ವಿಜಯಶಾಂತಿ ಅವರು ಲೇಡಿ ಸೂಪರ್ಸ್ಟಾರ್ ಮತ್ತು ಲೇಡಿ ಅಮಿತಾಬ್ ಎಂದು ಖ್ಯಾತಿ ಪಡೆಯುವಷ್ಟು ಕ್ರೇಜ್ ಹುಟ್ಟುಹಾಕಿದ್ದರು. ವಿಜಯಶಾಂತಿ ಸಿನಿಮಾಗಳಿಂದ ದೂರವಿದ್ದರೂ, ಆ ಕ್ರೇಜ್ ಇನ್ನೂ ಹಾಗೆಯೇ ಇದೆ.
ವಿಜಯಶಾಂತಿ ಹಿರಿಯ ನಟಿ ವಿಜಯಲಲಿತಾ ಅವರ ಮಗಳು. ಸಿನಿಮಾ ಹಿನ್ನೆಲೆ ಹೊಂದಿರುವ ವಿಜಯಶಾಂತಿ 15 ನೇ ವಯಸ್ಸಿನಲ್ಲಿ ಸಿನಿರಂಗಕ್ಕೆ ಪ್ರವೇಶಿಸಿದರು. 40 ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
1980 ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ವಿಜಯಶಾಂತಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸುಮಾರು 200 ಚಿತ್ರಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಎಲ್ಲಾ ಟಾಪ್ ಹೀರೋಗಳೊಂದಿಗೆ ನಟಿಸುವ ಅಪರೂಪದ ಸಾಧನೆಯನ್ನು ವಿಜಯಶಾಂತಿ ಸಾಧಿಸಿದ್ದಾರೆ. ಆರಂಭದಲ್ಲಿ ವಿಜಯಶಾಂತಿ ನಟಿಯಾಗಿ 5000 ರೂ. ಸಂಭಾವನೆ ಪಡೆದರು. 10 ವರ್ಷ ತುಂಬುವ ಹೊತ್ತಿಗೆ ಅವರ ಸಂಭಾವನೆ 1 ಕೋಟಿ ಆಗಿತ್ತು.
ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ವಿಜಯಶಾಂತಿ ಪಾತ್ರರಾದರು. ತಮ್ಮ ಆಸ್ತಿ ಮತ್ತು ಮಕ್ಕಳ ಬಗ್ಗೆ ವಿಜಯಶಾಂತಿ ಇತ್ತೀಚೆಗೆ ಮಾತನಾಡಿದ್ದಾರೆ. ವಿಜಯಶಾಂತಿ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ.
ತಮ್ಮ ವೃತ್ತಿಜೀವನ ಉತ್ತುಂಗದಲ್ಲಿದ್ದಾಗ ವಿಜಯಶಾಂತಿ ರಾಜಕೀಯ ಪ್ರವೇಶಿಸಿದರು. ತೆಲಂಗಾಣ ಚಳವಳಿಯ ಸಮಯದಲ್ಲಿ ಅವರ ತಾಯಿ ತೆಲಂಗಾಣ ಪಕ್ಷ ಎಂಬ ಹೆಸರಿನಲ್ಲಿ ರಾಜಕೀಯ ಪ್ರವೇಶಿಸಿದರು. ನಂತರ ಆ ಪಕ್ಷವನ್ನು ತೆಲಂಗಾಣ ರಾಷ್ಟ್ರ ಸಮಿತಿಯಲ್ಲಿ ವಿಲೀನಗೊಳಿಸಿದರು. ಅವರು 2009 ರ ಲೋಕಸಭಾ ಚುನಾವಣೆಯಲ್ಲಿ ಮೇಡಕ್ ನಿಂದ ಸಂಸದರಾಗಿ ಗೆದ್ದರು.
2014 ರಲ್ಲಿ ಸೋತ ನಂತರ, ಅವರು ರಾಜಕೀಯ ಮತ್ತು ಚಲನಚಿತ್ರಗಳಿಂದ ದೂರ ಸರಿದರು. ಕೆಲವು ವರ್ಷಗಳ ನಂತರ, ಮಹೇಶ್ ಬಾಬು ಅವರೊಂದಿಗೆ ಸರಿಲೇರು ನೀಕೆವ್ವರು ಮತ್ತು ಇತ್ತೀಚೆಗೆ ಕಲ್ಯಾಣ್ ರಾಮ್ ಅವರೊಂದಿಗೆ ಅರ್ಜುನ್ ಸನ್ ಆಫ್ ವೈಜಯಂತಿ ಚಿತ್ರದಲ್ಲಿ ವಿಜಯಶಾಂತಿ ನಟಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಸೇರಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿ, ನಂತರ ಬಿಜೆಪಿ ಸೇರಿ, ಮತ್ತೆ ಪಕ್ಷಕ್ಕೆ ಮರಳಿದ್ದ ವಿಜಯಶಾಂತಿ ಇತ್ತೀಚೆಗೆ ಎಂಎಲ್ಸಿಯಾಗುವ ಅವಕಾಶ ಪಡೆದರು. 2014 ರ ಚುನಾವಣೆಯ ನಂತರ ವಿಜಯಶಾಂತಿ ಆರೋಗ್ಯ ಹದಗೆಟ್ಟಿತು ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾದರು.
ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಂಡಿತು. ಅದಕ್ಕಾಗಿಯೇ ಅವರು ಚಲನಚಿತ್ರಗಳು ಮತ್ತು ರಾಜಕೀಯದಿಂದ ದೂರ ಉಳಿದಿದ್ದಾರೆ ಎಂದು ವಿಜಯಶಾಂತಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಜನರಿಗೆ ತಮ್ಮ ಜೀವನವನ್ನು ಮುಡಿಪಾಗಿಡುವ ಮಹತ್ತರ ಉದ್ದೇಶವನ್ನು ವಿಜಯಶಾಂತಿ ಹೊಂದಿದ್ದಾರೆ. ಈ ಬಗ್ಗೆ ಕೂಡ ಸಂದರ್ಶನದಲ್ಲಿ ಅರು ಮಾತನಾಡಿದಾರೆ. "ಜನರಿಗೆ ಜೀವನವನ್ನು ಮುಡಿಪಾಗಿಡುವ ಉದ್ದೇಶದಿಂದ ಮಕ್ಕಳನ್ನು ಪಡೆಯದಿರಲು ನಿರ್ಧರಿಸಿದೆ. ನನ್ನ ಸಾವಿನ ನಂತರ ಎಲ್ಲಾ ಆಸ್ತಿ ಜನರಿಗೆ ಹೋಗುವಂತೆ ನೋಡಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ವಿಜಯಶಾಂತಿ ಅವರು ತಮ್ಮ ತಾಯಿಯ ಹೆಸರಿನಲ್ಲಿ ಒಂದು ಪ್ರತಿಷ್ಠಾನವನ್ನು ಸ್ಥಾಪಿಸಿ, ಶಿಕ್ಷಣ ಮತ್ತು ವೈದ್ಯಕೀಯ ಆರೈಕೆಗಾಗಿ ತಮ್ಮ ಆಸ್ತಿಗಳನ್ನು ವಿನಿಯೋಗಿಸುವುದಾಗಿ ಹೇಳಿದ್ದಾರೆ.
ಲೇಡಿ ಸೂಪರ್ಸ್ಟಾರ್ ತನ್ನ ಬಳಿ ಇರುವ ಎಲ್ಲಾ ಆಭರಣಗಳನ್ನು ವೆಂಕಟೇಶ್ವರ ಸ್ವಾಮಿ ಹುಂಡಿಯಲ್ಲಿ ಇಟ್ಟಿದ್ದೇನೆ ಎಂದು ಹೇಳಿದ್ದಾರೆ. ವಿಜಯಶಾಂತಿ ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.