ಶೂಟಿಂಗ್‌ ವೇಳೆ ಜಾರಿದ ಬಟ್ಟೆ, ಅನುಮತಿ ಇಲ್ಲದೆ ನಗ್ನ ವಿಡಿಯೋ ಪ್ರದರ್ಶನ, ಮನನೊಂದ ನಟಿ ಆತ್ಮಹತ್ಯೆ..! ಸಂಚಲನ ಸೃಷ್ಟಿಸಿದ ವಿಡಿಯೋ..

Actress Life : ಇತ್ತೀಚಿನ ದಿನಗಳಲ್ಲಿ, ಸಿನಿಮಾಗಳಲ್ಲಿ ತುಂಡು ಬಟ್ಟೆ ಧರಿಸುವುದು, ಇಂಟಿಮೇಟ್‌ ದೃಶ್ಯಗಳು ಸಾಮಾನ್ಯ ವಿಷಯವಾಗಿವೆ. ಆದರೆ, ಇಂತಹ ದೃಶ್ಯಗಳು ನೋಡಲು ಅಪರಾಧ ಮತ್ತು ನಟಿಯರು ತುಂಡು ಬಟ್ಟೆ ಹಾಕಿಕೊಳ್ಳುವುದು ಸಂಸ್ಕಾರವಲ್ಲ ಎನ್ನುವ ಕಾಲವಿತ್ತು. ಆ ಕಾಲದಲ್ಲಿ ಅನೇಕ ನಟ-ನಟಿಯರು ಅಂತಹ ದೃಶ್ಯಗಳಲ್ಲಿ ನಟಿಸಲೂ ಸಹ ಸಿದ್ಧರಿರಲಿಲ್ಲ..  

Written by - Krishna N K | Last Updated : Apr 6, 2025, 01:09 PM IST
    • ಸಿನಿಮಾಗಳಲ್ಲಿ ತುಂಡು ಬಟ್ಟೆ ಧರಿಸುವುದು, ಇಂಟಿಮೇಟ್‌ ದೃಶ್ಯಗಳು ಸಾಮಾನ್ಯ
    • ನಟಿಯರು ತುಂಡು ಬಟ್ಟೆ ಹಾಕಿಕೊಳ್ಳುವುದು ಸಂಸ್ಕಾರವಲ್ಲ ಎನ್ನುವ ಕಾಲವಿತ್ತು.
    • ಆ ಕಾಲದಲ್ಲಿ ಅನೇಕ ನಟ-ನಟಿಯರು ಅಂತಹ ದೃಶ್ಯಗಳಲ್ಲಿ ನಟಿಸಲೂ ಸಹ ಸಿದ್ಧರಿರಲಿಲ್ಲ..
ಶೂಟಿಂಗ್‌ ವೇಳೆ ಜಾರಿದ ಬಟ್ಟೆ, ಅನುಮತಿ ಇಲ್ಲದೆ ನಗ್ನ ವಿಡಿಯೋ ಪ್ರದರ್ಶನ, ಮನನೊಂದ ನಟಿ ಆತ್ಮಹತ್ಯೆ..! ಸಂಚಲನ ಸೃಷ್ಟಿಸಿದ ವಿಡಿಯೋ..

Actress Vijayasree : ಹಿಂದಿನ ಕಾಲದ ಸಿನಿಮಾಗಳಲ್ಲಿ ಹಸಿಬಿಸಿ ದೃಶ್ಯಗಳು ಬಹಳ ವಿರಳವಾಗಿದ್ದವು. ಆ ಕಾಲದ ನಟ-ನಟಿಯರೂ ಸಹ ಇಂತಹ ದೃಶ್ಯಗಳಲ್ಲಿ ನಟಿಸಲು ಹಿಂದೇಟು ಹಾಕುತ್ತಿದ್ದರು. ಅಂದಹಾಗೆ ಈ ಅವಧಿಯಲ್ಲಿಯೇ ಒಂದು ಚಿತ್ರದಲ್ಲಿ ನಟಿಯೊಬ್ಬರ ನಗ್ನ ದೃಶ್ಯವನ್ನು ಅವರ ಅನುಮತಿ ಇಲ್ಲದೆ ತೋರಿಸಲಾಯಿತು.

Add Zee News as a Preferred Source

ನಟಿಯ ಅನುಮತಿ ಪಡೆಯದೇ ಅವರ ನಗ್ನ ದೃಶ್ಯವನ್ನು ಚಿತ್ರದಲ್ಲಿ ತೋರಿಸಲಾಯಿತು. ಇದು ಆ ಹೀರೋಯಿನ್‌ಗೆ ದೊಡ್ಡ ಆಘಾತವನ್ನುಂಟುಮಾಡಿತು. ಚಿತ್ರ ಬಿಡುಗಡೆಯಾದ ನಂತರ, ದೃಶ್ಯವನ್ನು ನೋಡಿ ತನ್ನ ಜೀವನವನ್ನು ಕೊನೆಗೊಳಿಸಿಕೊಂಡರು.. ಯಾರು ಆ ನಟಿ..? ಬನ್ನಿ ನೋಡೋಣ..

ಇದನ್ನೂ ಓದಿ:ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ತಾಯಿ ಕಿಮ್ ಫರ್ನಾಂಡೀಸ್ ನಿಧನ

ದಕ್ಷಿಣ ನಟಿ ವಿಜಯಶ್ರೀ.. ತಮ್ಮ ತಪ್ಪು ನಿರ್ಧಾರದಿಂದಾಗಿ ಜೀವನವನ್ನೇ ಅಂತ್ಯಗೊಳಿಸಿದರು.. ಅವರು ಕೇವಲ 21ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾರದು. ಇಂದಿಗೂ ಅವರ ಸಾವಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳಿಗೆ ಉತ್ತರವಿಲ್ಲ. ವಿಜಯಶ್ರೀ ಅತ್ಯಂತ ಸುಂದರಿ, ಬುದ್ಧಿವಂತೆ ಮತ್ತು ಶ್ರಮಶೀಲ ನಟಿಯಾಗಿದ್ದರು. ಜನರು ಅವರನ್ನು "ದಕ್ಷಿಣದ ಮರ್ಲಿನ್ ಮನ್ರೋ" ಎಂದೂ ಕರೆಯುತ್ತಿದ್ದರು. 

1953 ರಲ್ಲಿ ಜನಿಸಿದ ವಿಜಯಶ್ರೀ ತಮ್ಮ 12ನೇ ವಯಸ್ಸಿನಲ್ಲಿ 'ಚಿಥಿ' ಎಂಬ ತಮಿಳು ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ತಮ್ಮ ನಟನೆಯ ಮೂಲಕ ಪ್ರೇಕ್ಷಕರ ಹೃದಯಗಳನ್ನು ಗೆದ್ದರು. 1973 ರಲ್ಲಿ, ಅವರು 'ಪೊನ್ನಪೋರಂ ಕೊಟ್ಟ' ಚಿತ್ರದಲ್ಲಿ ಕೆಲಸ ಮಾಡುತ್ತಿದ್ದರು. ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ, ಜಲಪಾತದ ಕೆಳಗೆ ಅವರು ಸ್ನಾನ ಮಾಡುವ ದೃಶ್ಯವಿತ್ತು. ಈ ದೃಶ್ಯದ ಸಮಯದಲ್ಲಿ, ಆಕೆಯ ಬಟ್ಟೆಗಳು ಸ್ವಲ್ಪ ಜಾರಿದವು ಆ ಕ್ಷಣದಲ್ಲಿ ಅಲ್ಲಿದ್ದ ಕ್ಯಾಮೆರಾಮನ್ ಚಿತ್ರೀಕರಣವನ್ನು ನಿಲ್ಲಿಸುವ ಬದಲು ರೆಕಾರ್ಡಿಂಗ್ ಅನ್ನು ಮುಂದುವರೆಸಿದರು.

ಇದನ್ನೂ ಓದಿ:ಕಿರುತೆರೆಗೆ ಬಿಗ್ ಶಾಕ್.. ಎರಡು ವರ್ಷ ದಾರವಾಹಿಗಳಿಂದ ಖ್ಯಾತ ನಟಿ ಬ್ಯಾನ್! ಕಾರಣವೇನು?  

ಚಿತ್ರ ನೋಡಿದ ನಂತರ, ವಿಜಯಶ್ರೀಗೆ ತನ್ನ ದೃಶ್ಯವನ್ನು ಅನುಮತಿಯಿಲ್ಲದೆ ಸೇರಿಸಲಾಗಿದೆ ಎಂದು ಅರಿವಾಯಿತು. ಆ ದೃಶ್ಯವನ್ನು ತೆಗೆದುಹಾಕುವಂತೆ ನಿರ್ದೇಶಕರು ಮತ್ತು ನಿರ್ಮಾಪಕರಲ್ಲಿ ವಿನಂತಿಸಿದರು, ಆದರೆ ಅದನ್ನು ನಿರ್ಲಕ್ಷಿಸಲಾಯಿತು. ಇದರಿಂದ ಅವರು ತುಂಬಾ ಅಸಮಾಧಾನಗೊಂಡರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News