Kodava community Actresses: ರಶ್ಮಿಕಾ ಮಂದಣ್ಣ ಇತ್ತೀಚೆಗೆ ನೀಡಿದ ಹೇಳಿಕೆಯೊಂದು ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ.

Kodava community Actresses: ಕೊಡುವ ಸಮುದಾಯದಿಂದ ಚಿತ್ರರಂಗಕ್ಕೆ ಬಂದ ಮೊದಲ ನಟಿ ನಾನು ಎಂದು ರಶ್ಮಿಕಾ ಮಂದಣ್ಣ ಇತ್ತೀಚೆಗೆ ಹೇಳಿದ್ದರು. ಆ ಹೇಳಿಕೆಗೆ ಜನರಿಂದ ಅನೇಕ ರೀತಿಯಲ್ಲಿ ಟೀಕೆ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣ ಕೊಡುವ ಸಮುದಾಯದಿಂದ ರಶ್ಮಿಕಾಗೂ ಮೊದಲೇ ಸಿನಿರಂಗಕ್ಕೆ ಬಂದು ಹೆಸರು ಮಾಡಿದವರು ಅನೇಕರಿದ್ದಾರೆ.
ರಶ್ಮಿಕಾ ಮಂದಣ್ಣ ಆಗಾಗ ತಮ್ಮ ಹೇಳಿಕೆಗಳ ಮೂಲಕ ವಿವಾದ ತಂದುಕೊಳ್ಳುತ್ತಾರೆ. ಈಗ ಈ ಹೇಳಿಕೆಯಿಂದ ಮತ್ತೊಂದು ಹೊಸ ವಿವಾದವನ್ನು ರಶ್ಮಿಕಾ ತಂದುಕೊಂಡಿದ್ದಾರೆ. ಚಿತ್ರರಂಗದ ಅನೇಕರು ರಶ್ಮಿಕಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ. ನಿರ್ದೇಶಕಿ ಸುಮನ್ ಕಿತ್ತೂರು ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ರಶ್ಮಿಕಾ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಕಲಾವಿದೆ ರಶ್ಮಿಕಾ ಮಂದಣ್ಣ ಸಂದರ್ಶನ ಒಂದರಲ್ಲಿ, ಕೊಡವ ಜನಾಂಗದ ಮೊದಲ ನಟಿ ತಾವೇ ಎಂದು ಹೇಳಿ ಕೊಂಡಿದ್ದಾರೆ.ರಶ್ಮಿಕಾ ಅವರ ಯಶಸ್ಸಿಗೆ ಮತ್ತು ಖ್ಯಾತಿಗೆ ಭಾರಿ ಪ್ರಶಂಸೆ ಸಲ್ಲಿದರೂ, ಅಂದಿನ ಕಾಲದ ಶಶಿಕಲಾ ಎನ್ನುವ ಕಲಾವಿದೆಯಿಂದ ಹಿಡಿದು ಈಗಿನ ಕೊಡವ ಮಹಿಳಾ ನಟಿಯರ ವರೆಗೂ ಚಿತ್ರರಂಗಕ್ಕೂ ಕೊಡುವ ಸಮುದಾಯಕ್ಕೂ ಇರುವ ನಂಟಿನ ಇತಿಹಾಸವು ಬಹಳ ದೊಡ್ಡದಿದೆ’ ಎಂದು ಸುಮನ್ ಕಿತ್ತೂರು ಬರೆದಿದ್ದಾರೆ.
ರಶ್ಮಿಕಾ ಮಂದಣ್ಣ ಅವರಿಗಿಂತ ಮೊದಲೇ ಬಂದು ಸೂಪರ್ ಸ್ಟಾರ್ ಆಗಿದ್ದ ಕೊಡುವ ಸಮುದಾಯದ ನಟಿ ಅಶ್ವಿನಿ ನಾಚಪ್ಪ. ಇವರು ಕ್ರೀಡಾಪಟು ಸಹ ಆಗಿದ್ದರು. ಕೊಡಗಿನ ಅಶ್ವಿನಿ ನಾಚಪ್ಪ ತೆಲುಗು ಚಲನಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು.
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ಪ್ರೇಮಾ ಸಹ ಕೊಡಗಿನ ಮುರ್ನಾಡುವಿನ ನೆರವಂಡ ಕುಟುಂಬದ ಹುಡುಗಿ. ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ನಟಿಸಿ ದಕ್ಷಿಣ ಭಾರತದ ಸಿನಿರಂಗದಲ್ಲೇ ದೊಡ್ಡ ಹೆಸರು ಮಾಡಿದ ಮತ್ತೋರ್ವ ಕೊಡುವ ಸಮುದಾಯದ ಸ್ಟಾರ್ ನಟಿ ಪ್ರೇಮಾ.
ಪ್ರೇಮಾ ನಂತರ ಹಲವಾರು ಕೊಡಗಿನ ಹುಡುಗಿಯರು ಚಿತ್ರರಂಗಕ್ಕೆ ಬಂದಿದ್ದಾರೆ. ತನಿಷಾ ಕುಪ್ಪಂಡ, ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ, ಡೈಸಿ ಬೋಪಣ್ಣ, ಸಣ್ಣುವಂಡ ನಯನಾ ಕಾವೇರಪ್ಪ, ರೀಷ್ಮಾ ನಾಣಯ್ಯ, ವರ್ಷಾ ಬೊಳ್ಳಮ್ಮ, ಶ್ವೇತಾ ಚೆಂಗಪ್ಪ, ತಸ್ವಿನಿ ಕರುಂಬಯ್ಯ ಹೀಗೆ ಹಲವಾರು ಕೊಡುವ ಸಮುದಾಯದ ನಟಿಯರು ಸಿನಿರಂದಲ್ಲಿ ಮಿಂಚಿದ್ದಾರೆ. ಅನೇಕರು ಇಂದಿಗೂ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ.
ಕಿರುತೆರೆಯಲ್ಲೂ ಕೊಡಗಿನ ಅನೇಕ ಕಲಾವಿದೆಯರು ಅಭಿನಯಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಇದು ಕರ್ನಾಟಕಕ್ಕೆ ಹೆಮ್ಮೆಯ ವಿಚಾರ. ಆದರೆ ‘ಮೊದಲ ಕೊಡವ ನಟಿ’ ಅಲ್ಲ ಎಂದು ಸುಮನ್ ಕಿತ್ತೂರು ಬರೆದುಕೊಂಡಿದ್ದಾರೆ.
ಪ್ರೇಮಾ, ತನಿಷಾ ಕುಪ್ಪಂಡ, ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ, ಡೈಸಿ ಬೋಪಣ್ಣ, ಸಣ್ಣುವಂಡ ನಯನಾ ಕಾವೇರಪ್ಪ, ರೀಷ್ಮಾ ನಾಣಯ್ಯ, ವರ್ಷಾ ಬೊಳ್ಳಮ್ಮ, ಶ್ವೇತಾ ಚೆಂಗಪ್ಪ, ತಸ್ವಿನಿ ಕರುಂಬಯ್ಯ, ರಶ್ಮಿಕಾ ಮಂದಣ್ಣ ಇವರೆಲ್ಲರೂ ಕೊಡುವ ಸಮುದಾಯದ ನಟಿಯರು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.