ರಣವಿಕ್ರಂ ದ 'ಪಾರು' ಆಧಾ ಶರ್ಮಾ ಈಗ ಸೀರೆಯಲ್ಲಿ ಮಿಂಚಿಂಗ್..! ಫೋಟೋ ವೈರಲ್

  2015 ತೆರೆಗೆ ಬಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯನದ ರಣವಿಕ್ರಂ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಟ್ಟಿದ್ದ ಆದಾ ಶರ್ಮಾ ಈಗ ವಿಭಿನ್ನ ರೀತಿಯ ಸೀರೆ ಧರಿಸಿ ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ.ಈಗ ಈ ಫೋಟೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

Updated: Apr 10, 2019 , 04:29 PM IST
ರಣವಿಕ್ರಂ ದ 'ಪಾರು' ಆಧಾ ಶರ್ಮಾ ಈಗ ಸೀರೆಯಲ್ಲಿ ಮಿಂಚಿಂಗ್..! ಫೋಟೋ ವೈರಲ್
Pic Courtesy: instagram

ಬೆಂಗಳೂರು:  2015 ತೆರೆಗೆ ಬಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯನದ ರಣವಿಕ್ರಂ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಟ್ಟಿದ್ದ ಆದಾ ಶರ್ಮಾ ಈಗ ವಿಭಿನ್ನ ರೀತಿಯ ಸೀರೆ ಧರಿಸಿ ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ.ಈಗ ಈ ಫೋಟೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

2008 ರಲ್ಲಿ ಮೊದಲ ಬಾರಿಗೆ ವಿಕ್ರಂ ಭಟ್ ನಿರ್ದೇಶನದ 1920 ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಆದಾ ಶರ್ಮಾ ಮುಂದೆ ತೆಲುಗು ಸಿನಿಮಾದಲ್ಲಿ ಹೆಚ್ಚು ಜನಪ್ರಿಯರಾದರು.ಇವರು ತೆಲುಗಿನಲ್ಲಿ ನಟಿಸಿರುವ ಹಾರ್ಟ್ ಆಟ್ಯಾಕ್, ಕ್ಷಣಂ,ಗರಂ ಚಿತ್ರಗಳು ಇವರಿಗೆ ಹೆಚ್ಚು ಜನಪ್ರಿಯತೆಯನ್ನು ನೀಡಿದ ಸಿನಿಮಾಗಳು ಎಂದು ಹೇಳಬಹುದು.ಸಧ್ಯ ಜರ್ಸಿ,ಕಮಾಂಡೋ 3 ನಲ್ಲಿ ಬ್ಯುಸಿಯಾಗಿದ್ದಾರೆ. 

ಮೂಲತಃ ತಮಿಳುನಾಡಿನವರಾಗಿರುವ ಅದಾ ಶರ್ಮಾ ಬೆಳೆದದ್ದೆಲ್ಲಾ ಮುಂಬೈ ಎಂದೇ ಹೇಳಬಹುದು.ಕನ್ನಡದಲ್ಲಿ ಅವರು ಪುನೀತ್ ರಾಜ್ ಕುಮಾರ್ ಅವರ ಸಿನಿಮಾದಲ್ಲಿ ನಟಿಸುವ ಮೂಲಕ ಚಂದನವನದ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದಾರೆ.