'ಟ್ರಯಲ್‌ಗೋಸ್ಕರ ಮದುವೆಯಾಗಿದ್ದೆ ಅಷ್ಟೇ..' : ಗುಟ್ಟಾಗಿ ಮದುವೆಯಾಗಿದ್ದ ಈ ಖ್ಯಾತ ನಟಿ.. ನಾಲ್ಕೇ ತಿಂಗಳಿಗೆ ಡಿವೋರ್ಸ್‌!

Aditi Sharma divorce: ಈ ಖ್ಯಾತ ಕಿರುತೆರೆ ನಟಿ ಮದುವೆಯಾಗಿ 4 ತಿಂಗಳಲ್ಲೇ ಡಿವೋರ್ಸ್‌ ಪಡೆದಿದ್ದಾರೆ ಎಂಬ ವರದಿಯಾಗಿದೆ.

Written by - Chetana Devarmani | Last Updated : Apr 28, 2025, 03:13 PM IST
  • ಖ್ಯಾತ ಕಿರುತೆರೆ ನಟಿ ರಹಸ್ಯ ಮದುವೆ
  • ಮದುವೆಯಾಗಿ 4 ತಿಂಗಳಲ್ಲೇ ಡಿವೋರ್ಸ್‌
'ಟ್ರಯಲ್‌ಗೋಸ್ಕರ ಮದುವೆಯಾಗಿದ್ದೆ ಅಷ್ಟೇ..' : ಗುಟ್ಟಾಗಿ ಮದುವೆಯಾಗಿದ್ದ ಈ ಖ್ಯಾತ ನಟಿ.. ನಾಲ್ಕೇ ತಿಂಗಳಿಗೆ ಡಿವೋರ್ಸ್‌!
Aditi Sharma

Aditi Sharma divorce: ನಟಿ ಅದಿತಿ ಶರ್ಮಾ ತಮ್ಮ ದೀರ್ಘಕಾಲದ ಗೆಳೆಯ ಅಭಿನೀತ್ ಕೌಶಿಕ್ ಅವರನ್ನು ರಹಸ್ಯವಾಗಿ ಮದುವೆಯಾಗಿದ್ದರು. ಆದರೆ ಮದುವೆಯಾದ ಕೇವಲ 4 ತಿಂಗಳ ನಂತರ ವಿಚ್ಛೇದನ ಪಡೆದಿದ್ದಾರೆ ಎಂದು ಹೇಳಲಾಗಿದೆ.  

ಇಂಡಿಯಾ ಫೋರಮ್ಸ್ ಪ್ರಕಾರ, ಅದಿತಿ ಮತ್ತು ಅಭಿನೀತ್ ನವೆಂಬರ್ 12, 2024 ರಂದು ತಮ್ಮ ಗೋರೆಗಾಂವ್ ಮನೆಯಲ್ಲಿ ನಡೆದ ಸಣ್ಣ ಸಮಾರಂಭದಲ್ಲಿ ವಿವಾಹವಾದರು. 

ಕಳೆದ ಒಂದೂವರೆ ವರ್ಷಗಳಿಂದ ಅವಳು ನನ್ನನ್ನು ಮದುವೆಯಾಗಲು ಒತ್ತಾಯಿಸಿದಳು. ಆದರೆ ನಾನು ಸಿದ್ಧನಾಗಿರಲಿಲ್ಲ. ಬಹಳಷ್ಟು ಒತ್ತಡದ ಬಳಿಕ ನಾನು ಒಪ್ಪಿಕೊಂಡೆ ಎಂದು ಅಭಿನೀತ್ ಕೌಶಿಕ್ ಹೇಳಿದ್ದರು. ಮದುವೆ ಬಗ್ಗೆ ತಿಳಿದರೆ ಕರಿಯರ್‌ಗೆ ಎಫೆಕ್ಟ್‌ ಆಗುತ್ತೆ. ಹಾಗಾಗಿ ಯಾರಿಗೂ ತಿಳಿಯಬಾರದು ಎಂದು ಅವಳು ಒತ್ತಾಯಿಸಿದಳು ಎಂದು ಅವರು ಅಭಿನೀತ್ ಕೌಶಿಕ್ ಹೇಳಿದ್ದರು. 

ಇದನ್ನೂ ಓದಿ: ನೇಮ್‌-ಫೇಮ್‌ ಎಷ್ಟಿದ್ದರೇನು? ಜೀವನಕ್ಕೆ ಹಣ ಬೇಕೇಬೇಕು.. ಹೊಟ್ಟೆಪಾಡಿಗಾಗಿ ವಾಚ್‌ಮ್ಯಾನ್ ಕೆಲಸ ಮಾಡುತ್ತಿರುವ ಪ್ರಖ್ಯಾತ ನಟ!

ಮದುವೆಯಾಗುವ ಮೊದಲು ಅಭಿನೀತ್ ಮತ್ತು ಅದಿತಿ ವರ್ಷಗಳ ಕಾಲ ಲಿವ್-ಇನ್ ಸಂಬಂಧದಲ್ಲಿದ್ದರು. ಇವರಿಬ್ಬರೂ 5BHK ಫ್ಲಾಟ್ ಅನ್ನು ಬಾಡಿಗೆಗೆ ಪಡೆದಿದ್ದರು. ಅಪಾರ್ಟ್‌ಮೆಂಟ್‌ನಲ್ಲಿ ನಟಿ ಅದಿತಿ ಶರ್ಮಾ ಹಾಗೂ ಅಭಿನೀತ್ ಕೌಶಿಕ್ ಹಲವು ವರ್ಷಗಳಿಂದ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. 

ಹಿಂದಿ ಕಿರುತೆರೆಯ ಖ್ಯಾತ ನಟಿ ಅದಿತಿ ಶರ್ಮಾ ಹಾಗೂ ಪತಿ ಅಭಿನೀತ್ ಕೌಶಿಕ್ ಅವರು ಡಿವೋರ್ಸ್‌ ಪಡೆದಿದ್ದಾರೆ ಎಂದು ವರದಿಗಳು ವೈರಲ್‌ ಆಗಿದ್ದವು. ಮದುವೆಯಾದ ಕೇವಲ ನಾಲ್ಕು ತಿಂಗಳಿಗೇ ಡಿವೋರ್ಸ್‌ ಪಡೆದಿದ್ದು ಅಚ್ಚರಿ ಮೂಡಿಸಿತ್ತು. ಅಪೋಲೆನಾ ಪಾತ್ರಕ್ಕೆ ನಟಿ ಅದಿತಿ ಶರ್ಮಾ ಹೆಸರುವಾಸಿಯಾಗಿದ್ದರು.  

ನಟಿ ಅದಿತಿ ಅವರು ಸಹನಟನ ಜೊತೆ ಸ್ನೇಹ ಹೊಂದಿದ್ದರು ಎಂಬ ಗಂಭೀರ ಆರೋಪವನ್ನು ಅಭಿನೀರ್‌ ಮಾಡಿದ್ದಾರೆ. ಈ ವಿಚಾರದಿಂದಲೇ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಅದು ತುಂಬಾ ಹೆಚ್ಚಾದ ಕಾರಣ ನೋವುಂಟು ಮಾಡಿತು : ನಟಿ ಮೀನಾಕ್ಷಿ ಚೌಧರಿ

ಅದಿತಿ ಶರ್ಮಾ ಅವರೇ ಮದುವೆ ಆಗಿರುವ ವಿಷಯವನ್ನು ಮುಚ್ಚಿಟ್ಟಿದ್ದರು ಎನ್ನಲಾಗಿದೆ. ಆದರೆ ಇದೀಗ ಅದಿತಿ ಶರ್ಮಾ ಪತಿ ಡಿವೋರ್ಸ್‌ ಕೊಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಅದಿತಿ ಶರ್ಮಾ ಅವರ ಕುಟುಂಬವು 25 ಲಕ್ಷ ರೂಪಾಯಿ ಕೊಟ್ಟು ಸೆಟಲ್‌ಮೆಂಟ್‌ ಮಾಡಿಕೊಳ್ಳೋಣ ಎಂದು ಮನವಿ ಮಾಡಿದ್ದಾರೆ ಎಂದು ಸಹ ಹೇಳಲಾಗಿತ್ತು. 

ಅಭಿನೀತ್‌ ಅವರು ಕೂಡ ಈ ಬಗ್ಗೆ ಮಾತನಾಡಿದ್ದು, "ಈ ಮದುವೆಯನ್ನು ಅದಿತಿ ಒಪ್ಪುತ್ತಿಲ್ಲ. ಟ್ರಯಲ್‌ ಗೋಸ್ಕರ ಮದುವೆ ಆಗಿದ್ದೆ. ಕಾನೂನಾತ್ಮಕವಲ್ಲ ಎಂದು ವಾದಿಸುತ್ತಿದ್ದಾಳೆ ಎಂದು ಆರೋಪಿಸಿದ್ದರು.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News